Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಫ್ಘಾನಿಸ್ತಾನ ವಿರುದ್ಧ ಕೀವಿಸ್ ಗೆ ಸುಲಭ ಜಯ

ನೇಪಿಯರ್, ಮಾ.8: ವಿಶ್ವಕಪ್ 2015 ಟೂರ್ನಿಯ ಎ ಗುಂಪಿನಿಂದ ಕ್ವಾರ್ಟರ್ ಫೈನಲ್ ಹಂತಕ್ಕೇರಿರುವ ಅತಿಥೇಯ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ ತಂಡ ನೀಡಿದ್ದ ಸುಲಭ ಗುರಿಯನ್ನು ಸಾಧಿಸಿ ವಿಜಯೋತ್ಸವ ಆಚರಿಸಿದೆ. ಅಫ್ಘಾನಿಸ್ತಾನ ನೀಡಿದ್ದ 187ರನ್ ಗುರಿಯನ್ನು ಚೇಸ್ ಮಾಡಿದ ಕಿವೀಸ್, ನಾಲ್ಕು ವಿಕೆಟ್ ಕಳೆದುಕೊಂಡು 36.1 ಓವರ್ ಗಳಲ್ಲಿ 6 ವಿಕೆಟ್ ಗಳ ಜಯ ದಾಖಲಿಸಿತು.

ಅಫ್ಘನ್ ನೀಡಿದ ಗುರಿಯನ್ನು ಎಂದಿನ ಸ್ಟೈಲಿನಲ್ಲೇ ಕಿವೀಸ್ ಚೇಸ್ ಮಾಡಿತು. ನಾಯಕ ಬ್ರೆಂಡನ್ ಮೆಕಲಮ್ 19 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸ್ ನೆರವಿನಿಂದ 42ರನ್ ಚೆಚ್ಚಿ ಉತ್ತಮ ಆರಂಭ ನೀಡಿದರು.

 Afghanistan all out for 186 against New Zealand

ಮಾರ್ಟಿನ್ ಗಪ್ಟಿಲ್ ನಿಧಾನಗತಿಯಲ್ಲಿ ಆಡಿ 76 ಎಸೆತಗಳಲ್ಲಿ 57ರನ್ ಗಳಿಸಿ ಅನಗತ್ಯ ರನ್ ಕದಿಯಲು ಯತ್ನಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು, ಇದಕ್ಕೂ ಮೊದಲು ಕೇನ್ ವಿಲಿಯಂ 33ರನ್ ಗಳಿಗೆ ಶಾಪೂರ್ ಜದ್ರಾನ್ ಗೆ ವಿಕೆಟ್ ಒಪ್ಪಿಸಿದರು. ನಂತರ ಇಲಿಯಟ್ ಕೂಡಾ 19ರನ್ನಿಗೆ ರನೌಟ್ ಆದರು. ಅಫ್ಘನ್ ಪರ ನಬಿ ಹಾಗೂ ಜದ್ರಾನ್ ತಲಾ 1 ವಿಕೆಟ್ ಕಿತ್ತರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ ತಂಡ ಟ್ರೆಂಟ್ ಬೌಲ್ಟ್ ವೇಗ ಹಾಗೂ ಡೇನಿಯಲ್ ವೆಟ್ಟೋರಿ ಸ್ಪಿನ್ ದಾಳಿಗೆ ಸಿಲುಕಿ ತತ್ತರಿಸಿತು. 47.4 ಓವರ್ ಗಳಲ್ಲಿ 186ಸ್ಕೋರಿಗೆ ಆಲೌಟ್ ಆಯಿತು. ಅಫ್ಘನ್ ಪರ ನಜಿಬುಲ್ಲಾ ಜದ್ರಾನ್ 56, ಸಾಮಿಯುಲ್ಲಾ ಶೇನ್ವಾರಿ 54 ಚೆಚ್ಚಿದರು. ವೆಟ್ಟೋರಿ 4/18, ಬೌಲ್ಟ್ 3/34)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+