ಕ್ರಿಸ್ ಗೇಲ್ ಡಬ್ಬಲ್ ಸೆಂಚುರಿ, ಗ್ಯಾರಿ, ರಿಚರ್ಡ್ಸ್ ದಾಖಲೆ ಧೂಳಿಪಟ
ಕ್ಯಾನ್ ಬೆರಾ, ಫೆ.24: ವೆಸ್ಟ್ ಇಂಡೀಸ್ ನ ಸ್ಫೋಟಕ ಆರಂಭಿಕ ಆಟಗಾರ ಕ್ರಿಸ್ ಗೇಲ್ ಅವರು ಹಲವು ವರ್ಷಗಳ ನಂತರ ವಿಶ್ವಕಪ್ ಟೂರ್ನಿಯಲ್ಲಿ ವಿಂಡೀಸ್ ಬ್ಯಾಟ್ಸ್ ಮನ್ ಗಳ ದೈತ್ಯ ಶಕ್ತಿಯ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್ 2015ರ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೇಲ್ ಡಬ್ಬಲ್ ಸೆಂಚುರಿ ಚೆಚ್ಚಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಪ್ರಪ್ರಥಮ ದ್ವಿಶತಕ ದಾಖಲಿಸುವ ಮೂಲಕ ವಿಂಡೀಸ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ವಿವಿಯನ್ ರಿಚರ್ಡ್ಸ್ ದಾಖಲೆ ಮುರಿದಿದ್ದಾರೆ.

| ಪಂದ್ಯದ ವರದಿ
ಕ್ರಿಸ್ ಗೇಲ್ ಆರ್ಭಟಕ್ಕೂ ಮುನ್ನ ವಿಶ್ವಕಪ್ ನಲ್ಲಿ ವಿಂಡೀಸ್ ಬ್ಯಾಟ್ಸ್ ಮನ್ ಎಂದರೆ ನೆನಪಾಗುತ್ತಿದ್ದದ್ದು ಮಾಸ್ಟರ್ ಬ್ಲಾಸ್ಟರ್ ವಿವಿಯನ್ ರಿಚರ್ಡ್ ಹೆಸರು ಮಾತ್ರ.ವಿವಿಯನ್ ರಿಚರ್ಡ್ಸ್ ಅವರು 181 ರನ್ ಬಾರಿಸಿ ವಿಂಡೀಸ್ ಪರ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಸ್ಕೋರರ್ ಎನಿಸಿದ್ದರು. 1987ರ ವಿಶ್ವಕಪ್ ನಲ್ಲಿ ಶ್ರೀಲಂಕಾ ವಿರುದ್ಧ ಕರಾಚಿಯಲ್ಲಿ ರಿಚರ್ಡ್ಸ್ 181ರನ್ ಬಾರಿಸಿದ್ದರು.
ಕ್ರಿಸ್ ಗೇಲ್ ಅವರು ರಿಚರ್ಡ್ಸ್ ದಾಖಲೆ ಮುರಿದಿದ್ದಲ್ಲದೆ ಕಳೆದ 10 ವಿಶ್ವಕಪ್ ನಲ್ಲಿ ಯಾರೂ ದಾಟದ ಮೈಲಿಗಲ್ಲು ದಾಟಿದ್ದಾರೆ. ಇಲ್ಲಿ ತನಕ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಹೆಸರಿನಲ್ಲಿದ್ದ ವಿಶ್ವಕಪ್ ನಲ್ಲಿ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಗೇಲ್ ಮುರಿದಿದ್ದಾರೆ. 1996ರಲ್ಲಿ ರಾವಲ್ಪಿಂಡಿಯಲ್ಲಿ ಯುಎಇ ವಿರುದ್ಧ ಎಡಗೈ ಬ್ಯಾಟ್ಸ್ ಮನ್ ಗ್ಯಾರಿ ಕರ್ಸ್ಟನ್ 188ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications