Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಟ್ ಇಂಡೀಸ್ ಸೋಲಿಸಿ ಸೆಮೀಸ್ ಗೆ ಕಿವೀಸ್ ಲಗ್ಗೆ

ವೆಲ್ಲಿಂಗ್ಟನ್, ಮಾ.21 : ವಿಶ್ವಕಪ್ ಟೂರ್ನಿಯ ನಾಲ್ಕನೇ ಹಾಗೂ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅತಿಥೇಯ ನ್ಯೂಜಿಲೆಂಡ್ ತಂಡ ಭಾರಿ ಅಂತರದ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೆ ಜಿಗದಿದೆ. ಮೊದಲ ಸೆಮಿಫೈನಲ್(ಮಾ.24) ರಂದು ದಕ್ಷಿಣ ಆಫ್ರಿಕಾ ತಂಡವನ್ನು ನ್ಯೂಜಿಲೆಂಡ್ ಎದುರಿಸಲಿದೆ.

ಮಾರ್ಟಿನ್ ಗುಪ್ಟಿಲ್ ದ್ವಿಶತಕದ ನೆರವಿನಿಂದ ನ್ಯೂಜಿಲೆಂಡ್ ಭಾರಿ ಮೊತ್ತ ದಾಖಲಿಸಿತ್ತು. 394 ಗುರಿ ಬೆನ್ನು ಹತ್ತಿದ ವಿಂಡೀಸ್ ತಂಡ ಉತ್ತಮ ಹೋರಾಟದ ನಡುವೆ ನಿರಂತರ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿದೆ.30.3 ಓವರ್ ಗಳಲ್ಲಿ 250 ರನ್ ಗಳಿಗೆ ಸರ್ವಪತನ ಕಂಡ ವಿಂಡೀಸ್ ತಂಡ ಒಂದು ವೇಳೆ ವಿಕೆಟ್ ಉಳಿಸಿಕೊಂಡಿದ್ದರೆ, ಕಿವೀಸ್ ತಂಡಕ್ಕೆ ಗೆಲುವು ಸುಲಭವಾಗಿ ದಕ್ಕುತ್ತಿರಲಿಲ್ಲ ಎನ್ನಬಹುದು.

Martin Guptill

ಗಾಯದ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗದ ಕ್ರಿಸ್ ಗೇಲ್ ಅದ್ಭುತ ಆಟ ಪ್ರದರ್ಶಿಸಿದರು. ಗೇಲ್ 33 ಎಸೆತಗಳಲ್ಲಿ 61 ರನ್ (2x4, 8x6), ನಾಯಕ ಹೋಲ್ಡರ್ 42 ರನ್ (26 ಎಸೆತ, 5x4, 2x6), ರಸೆಲ್ 20, ಸ್ಯಾಮಯಲ್ 27, ಕಾರ್ಟರ್ 32, ಸ್ಯಾಮಿ 27 ರನ್ ಗಳಿಸಿದರು. ನ್ಯೂಜಿಲಂಡ್ ಪರ ಬೌಲ್ಟ್ 44ಕ್ಕೆ 4 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶಿಸಿದರು.

ಗುಪ್ಟಿಲ್ ದ್ವಿಶತಕ: ನ್ಯೂಜಿಲೆಂಡ್ ಪರ ಬ್ಯಾಟಿಂಗ್ ಆರಂಭಿಸಿದ ಮಾರ್ಟಿನ್ ಗುಪ್ಟಿಲ್ 50 ಪೂರ್ತಿ ಬ್ಯಾಟಿಂಗ್ ಮಾಡಿ 163 ಎಸೆತಗಳಲ್ಲಿ 237 ರನ್ (24x4,11x6) ಚೆಚ್ಚಿ ದಾಖಲೆ ಬರೆದರು. ರಾಸ್ ಟೇಲರ್ 42 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಕಿವೀಸ್ 50 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 393 ಸ್ಕೋರ್ ಮಾಡಿತು.

Story first published: Wednesday, January 3, 2018, 10:02 [IST]
Other articles published on Jan 3, 2018
Read in English: English
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+