Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್-ಲಾರಾ ಅಪರೂಪದ ಚಿತ್ರಕ್ಕೆ ಭಯಂಕರ ಬೇಡಿಕೆ

ಪರ್ತ್, ಮಾ.4: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ವೆಸ್ಟ್ ಇಂಡೀಸ್ ನ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ಇಬ್ಬರ ನಡುವೆ ಆ ಕಾಲದಲ್ಲಿ ರನ್ ಗಳಿಕೆ ಪೈಪೋಟಿ ಇದ್ದೇ ಇತ್ತು. ಅದರೆ, ಇಬ್ಬರ ನಡುವೆ ಸ್ನೇಹ ಬಾಂಧವ್ಯ ಮಾತ್ರ ಇತರೆ ಕ್ರೀಡಾಪಟುಗಳಿಗೂ ಮಾದರಿಯಾಗಿ ಅಂದಿನಿಂದ ಇಂದಿನವರೆಗೂ ಬೆಳೆದು ಬಂದಿದೆ. ಈ ಇಬ್ಬರು ಸ್ನೇಹಮಯಿ ತಾರೆಗಳು ಒಟ್ಟಿಗಿರುವ ಚಿತ್ರಕ್ಕೆ ಫ್ಯಾನ್ಸ್ ಮುಗಿಬಿದ್ದು ದಾಖಲೆಯ ಲೈಕ್ಸ್ ಒತ್ತಿದ್ದಾರೆ.

ಸಚಿನ್ ಹಾಗೂ ಲಾರಾ ಇಬ್ಬರು ಸಮಕಾಲೀನ ಕ್ರಿಕೆಟ್ ತಾರೆಗಳನ್ನು ಒಟ್ಟಿಗೆ ಕಾಣುವುದು ಅಭಿಮಾನಿಗಳ ಕಣ್ಣಿಗೆ ಹಬ್ಬ. "It was lovely catching up with Brian Lara in Australia" ಎಂದು ಶೀರ್ಷಿಕೆ ಕೊಟ್ಟು ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆ ಹಾಗೂ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಲಾರಾ ಜೊತೆಗಿನ ಫೋಟೊ ಅಪ್ ಲೋಡ್ ಮಾಡಿದ್ದಾರೆ.

WC 2015: Sachin and Brian Lara and BMW Photo a Instant hit

ವಿಶ್ವಕಪ್ 2015 ಟೂರ್ನಿಯ ಜಾಗತಿಕ ರಾಯಭಾರಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಇತ್ತೀಚಿಗೆ ಸಿಡ್ನಿಯಲ್ಲಿ ವಿಐಪಿ ಡಿನ್ನರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಭಿಮಾನಿಗಳ ಜೊತೆ ಸಂವಾದ ನಡೆಸಿದ ಸಚಿನ್ ಅವರು ಭಾರತದ ಮುಂದಿನ ಪಂದ್ಯವನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದರು.

ಇದಾದ ಬಳಿಕ ಬಿಎಂಡಬ್ಲ್ಯೂ ಕಾರಿನ ಲಾಂಚ್ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್ ತೆರಳಿದ್ದರು. ಕಾರಿನ ಜೊತೆಗೆ ಇಬ್ಬರು ದಿಗ್ಗಜರು ನಿಂತು ಫೋಟೋಗೆ ಪೋಸ್ ನೀಡಿದ್ದರು. ಈ ಚಿತ್ರ ಮೂರು ಗಂಟೆಗೂ ಕಡಿಮೆ ಅವಧಿಯಲ್ಲಿ ಒಟ್ಟು 3 ಲಕ್ಷಕ್ಕೂ ಹೆಚ್ಚು ಲೈಕ್ಸ್‌ ಪಡೆದುಕೊಂಡಿತ್ತು. ಇಬ್ಬರು ದಿಗ್ಗಜರ ರನ್ ಗಳ ಮೊತ್ತ 55,000 ದಾಟುತ್ತದೆ. ಅಭಿಮಾನಿಗಳ ಪ್ರೀತಿ ಅಭಿಮಾನ ಇವರ ರನ್ ಗಳಿಕೆ ವೇಗವನ್ನು ಮೀರಿಸುತ್ತಿದೆ.

ಸದ್ಯಕ್ಕೆ ಈ ಅಪೂರ್ವ ಮಿಲನ ಚಿತ್ರ ಫೇಸ್ ಬುಕ್ ನಲ್ಲಿ ಮಾ.4 13.20ರ ಸಮಯಕ್ಕೆ
* ಫೇಸ್ ಬುಕ್ ನಲ್ಲಿ 7,44,145 ಲೈಕ್ಸ್ 6,165 ಕಾಮೆಂಟ್ಸ್ ಪಡೆದುಕೊಂಡಿದೆ. 9,619 ಬಾರಿ ಹಂಚಿಕೆಯಾಗಿದೆ.
* ಟ್ವಿಟ್ಟರ್ ನಲ್ಲಿ 1.6K ಬಾರಿ ಹಂಚಿಕೆಯಾಗಿದ್ದರೆ, 3 ಸಾವಿರ ಮಂದಿ ಫೇವರೀಟ್ ಬಟನ್ ಒತ್ತಿದ್ದಾರೆ.
* ಇನ್ಸ್ಟಾಗ್ರಾಮ್ ನಲ್ಲಿ 10,494 ಲೈಕ್ಸ್ ಹಾಗೂ 126 ಕಾಮೆಂಟ್ಸ್ ಬಂದಿದೆ.

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+