For Quick Alerts
ALLOW NOTIFICATIONS  
For Daily Alerts
 

ಶಕೀಬ್ ಆಲ್ ರೌಂಡರ್ ಆಟ, ಮುಂದುವರೆದ ಅಫ್ಘಾನ್ ಸೋಲಿನೋಟ!

World cup 2019: Bangladesh vs Afghanistan, Match 31-Live Score

ಸೌತಾಂಪ್ಟನ್, ಜೂನ್ 24: ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಪಾಲಿಗೆ ಈ ಬಾರಿಯ ವಿಶ್ವಕಪ್ ಆಶಾದಾಯಕವಾಗಿಲ್ಲ. ಆಡಿರುವ ಏಳೂ ಪಂದ್ಯಗಳನ್ನೂ ಸೋತು ಗೆಲುವೇ ಕಂಡಿರದ ತಂಡವಾಗಿ ಅಫ್ಘಾನಿಸ್ತಾನ ಗುರುತಿಸಿಕೊಂಡಿದೆ. ಸೌತಾಂಪ್ಟನ್‌ನ ರೋಸ್‌ಬೌಲ್‌ನಲ್ಲಿ ಸೋಮವಾರ (ಜೂನ್ 24) ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಅಫ್ಘಾನ್ 62 ರನ್ ಸೋಲನುಭವಿಸಿತು. ಶಕೀಬ್ ಅಲ್ ಹಸನ್ ರೌಂಡರ್ ಆಟಕ್ಕೆ ಅಫ್ಘಾನ್ ಸೋಲಿನೋಟ ಮುಂದುವರೆದಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಟಾಸ್ ಗೆದ್ದ ಅಪ್ಘಾನಿಸ್ತಾನ ಬೌಲಿಂಗ್ ಆಯ್ದುಕೊಂಡಿತು. ಬಾಂಗ್ಲಾದೇಶ ಪರ, ಆರಂಭಿಕ ಬ್ಯಾಟ್ಸ್ಮನ್ ಲಿಟನ್ ದಾಸ್ 16, ತಮೀಮ್ ಇಕ್ಬಾಲ್ 36, ಶಕೀಬ್ ಅಲ್ ಹಸನ್ 51, ಸೌಮ್ಯ ಸರ್ಕಾರ್ 3, ಮುಷ್ಫಿಕರ್ ರಹೀಮ್ 83, ಮೊಹಮ್ಮದುಲ್ಲ 27, ಮೊಸಾದೆಕ್ ಹುಸೇನ್ 35 ರನ್ ಕೊಡುಗೆ ನೀಡಿದರು.

ಬಾಂಗ್ಲಾದೇಶ 50 ಓವರ್‌ ಮುಕ್ತಾಯಕ್ಕೆ 7 ವಿಕೆಟ್ ಕಳೆದು 262 ರನ್ ಬಾರಿಸಿತು. ಬಾಂಗ್ಲಾ ಇನ್ನಿಂಗ್ಸ್‌ ವೇಳೆ ಅಫ್ಘಾನ್‌ನ ಮುಜೀಬ್ ಉರ್ ರಹ್ಮಾನ್ 39 ರನ್‌ಗೆ 3, ನಾಯಕ ಗುಲ್ಬಾದಿನ್ ನೈಬ್ 56 ರನ್‌ಗೆ 2, ದೌಲತ್ ಝದ್ರನ್ ಮತ್ತು ಮೊಹಮ್ಮದ್ ನಬಿ ತಲಾ 1 ವಿಕೆಟ್ ಪಡೆದರು.

ಅಫ್ಘಾನಿಸ್ತಾನ್ vs ಬಾಂಗ್ಲಾದೇಶ, ಜೂನ್ 24, Live ಸ್ಕೋರ್‌ಕಾರ್ಡ್

1
43674

ಗುರಿ ಬೆಂಬತ್ತಿದ ಅಫ್ಘಾನಿಸ್ತಾನ ನೀರಸ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಬ್ಯಾಟ್ಸ್ಮನ್ ಗುಲ್ಬಾದಿನ ನೈಬ್ 47, ರಹಮತ್ ಷಾ 24 ರನ್ ಬಾರಿಸಿದ್ದೇ ಹೆಚ್ಚು. ಉಳಿದಂತೆ ಹಶ್ಮತುಲ್ಲ ಶಾಹಿದಿ 11, ಅಸ್ಘರ್ ಅಫ್ಘಾನ್ 20, ಮೊಹಮ್ಮದ್ ನಬಿ 0, ಇಕ್ರಮ್ ಅಲಿ ಖಿಲ್ 11, ನಜೀಬುಲ್ಲ ಝದ್ರನ್ 23, ರಶೀದ್ ಖಾನ್ 2, ದೌಲತ್ ಝದ್ರನ್ 0 ರನ್ ಬಾರಿಸಿದರು.

ಅಫ್ಘಾನ್ 47 ಓವರ್‌ಗೆ ಸರ್ವ ಪತನ ಕಂಡು ಭರ್ತಿ 200 ರನ್ ಬಾರಿಸಿ 62 ರನ್‌ಗಳಿಂದ ಶರಣಾಯಿತು. ಇಲ್ಲಿಗೆ ಅಫ್ಘಾನಿಸ್ತಾನದ ಸೆಮಿಫೈನಲ್‌ ಕನಸು ಸಂಪೂರ್ಣ ಕಮರಿದಂತಾಗಿದೆ. ಆದರೆ ಬಾಂಗ್ಲಾ ಸೆಮಿಫೈನಲ್‌ ಕನಸು ಇನ್ನೂ ಜೀವಂತವಾಗಿದೆ. ಅಫ್ಘಾನ್‌ ಇನ್ನಿಂಗ್ಸ್‌ ವೇಳೆ ಬಾಂಗ್ಲಾದ ಮುಷ್ಫಿಜುರ್ ರಹಮಾನ್ 2, ಮೊಹಮ್ಮದ್ ಸೈಫುದ್ದೀನ್ 1, ಶಕೀಬ್ ಅಲ್ ಹಸನ್ 5, ಮೊಸದ್ದೇಕ್ ಹುಸೇನ್ 1 ವಿಕೆಟ್‌ನೊಂದಿಗೆ ಮಿಂಚಿದರು. ಶಕೀಬ್ ಅಲ್ ಹಸನ್ ಪಂದ್ಯಶ್ರೇಷ್ಠರೆನಿಸಿದರು.

ಬಾಂಗ್ಲಾದೇಶ ತಂಡ: ತಮೀಮ್ ಇಕ್ಬಾಲ್, ಸೌಮ್ಯಾ ಸರ್ಕಾರ್, ಶಕೀಬ್ ಅಲ್ ಹಸನ್, ಮುಶ್ಫಿಕುರ್ ರಹೀಮ್ (ಪ), ಲಿಟಾನ್ ದಾಸ್, ಮೆಹಿದಿ ಹಸನ್, ಮೊಸದ್ದೇಕ್ ಹೊಸೈನ್, ಮಹಮ್ಮದುಲ್ಲಾ, ಮೊಹಮ್ಮದ್ ಸೈಫುದ್ದೀನ್, ಮಶ್ರಫ್ ಮೊರ್ತಾಜಾ (ಸಿ), ಮುಸ್ತಾಫಿಜುರ್ ರಹಮಾನ್.

ಅಫ್ಘಾನಿಸ್ತಾನ ತಂಡ: ಗುಲ್ಬಾದೀನ್ ನೈಬ್ (ಸಿ), ಸಮೀಯುಲ್ಲಾ ಶಿನ್ವಾರಿ, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ, ಅಸ್ಘರ್ ಅಫ್ಘಾನ್, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರನ್, ಇಕ್ರಮ್ ಅಲಿಖಿಲ್ (ಪ), ರಶೀದ್ ಖಾನ್, ದೌಲತ್ ಖಾದ್ರಾನ್, ಮುಜೀಬ್ ಉರ್ ರಹಮಾನ್.

{headtohead_cricket_10_95}

Story first published: Tuesday, June 25, 2019, 1:15 [IST]
Other articles published on Jun 25, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+