For Quick Alerts
ALLOW NOTIFICATIONS  
For Daily Alerts
 

ನಿಷೇಧದ ಬಳಿಕ ಚೊಚ್ಚಲ ಶತಕ ಬಾರಿಸಿದ ಡೇವಿಡ್‌ ವಾರ್ನರ್‌!

World Cup 2019: David Warner scores first ton after a year-long ban

ಟೌನ್ಟನ್‌, ಜೂನ್‌ 12: ಬಾಲ್‌ ಟ್ಯಾಂಪರಿಂಗ್‌ ಮೂಲಕ ಒಂದು ವರ್ಷ ನಿಷೇಧ ಶಿಕ್ಷೆ ಎದುರಿಸಿದ್ದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌, ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಶತಕ ಸಿಡಿಸುವ ಮೂಲಕ ಬರೋಬ್ಬರಿ 14 ತಿಂಗಳ ನಂತರ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕದ ಸಂಭ್ರಮ ಆಚರಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಪಾಕಿಸ್ತಾನದ ಬೌಲರ್‌ಗಳನ್ನು ಬೆಂಡೆತ್ತುವ ಮೂಲಕ ವೃತ್ತಿ ಬದುಕಿನ 15ನೇ ಒಡಿಐ ಶತಕ ಸಿಡಿಸಿ ಸಂಭ್ರಮಿಸಿದರು. ಶತಕದ ಹೊಸ್ತಿಲಲ್ಲಿದ್ದಾಗ ಶಹೀನ್‌ ಶಾ ಅಫ್ರೀದಿ ಅವರ ಬೌಲಿಂಗ್‌ನಲ್ಲಿ ಚೆಂಡನ್ನು ಎಡ್ಜ್‌ ಮಾಡಿದ್ದ ವಾರ್ನರ್‌, ಸ್ಲಿಪ್‌ ವಿಭಾಗದಲ್ಲಿ ಆಸಿಫ್‌ ಅಲಿ ಅವರ ಮಿಸ್‌ಫೀಲ್ಡಿಂಗ್‌ ಫಲವಾಗಿ ತಮ್ಮ ಇನಿಂಗ್ಸ್‌ನ 11ನೇ ಫೋರ್‌ ಮೂಲಕ ಶತಕ ಪೂರೈಸಿದರು.

ಮೊದಲ ವಿಕೆಟ್‌ಗೆ ಆರೊನ್‌ ಫಿಂಚ್‌ (82) ಅವರ ಜೊತೆಗೂಡಿ 146 ರನ್‌ಗಳ ಭರ್ಜರಿ ಜೊತೆಯಾಟವಾಡಿದ ವಾರ್ನರ್‌, ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಸತತ ಮೂರು ಶತಕಗಳನ್ನು ಬಾರಿಸಿದ ದಾಖಲೆಯನ್ನೂ ಬರೆದಿದ್ದಾರೆ.

ಪ್ರಸಕ್ತ ವಿಶ್ವಕಪ್‌ನಲ್ಲಿ ಉತ್ತಮ ಲಯದಲ್ಲಿರುವ 32 ವರ್ಷದ ಎಡಗೈ ಬ್ಯಾಟ್ಸ್‌ಮನ್‌ ವಾರ್ನರ್‌, ಅಫಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ 89, ಭಾರತ ವಿರುದ್ಧ 56 ಹಾಗೂ ಇದೀಗ ಪಾಕಿಸ್ತಾನ ಎದುರು 111 ಎಸೆತಗಳಲ್ಲಿ 11 ಫೋರ್‌ ಮತ್ತೊಂದು ಸಿಕ್ಸರ್‌ ಒಳಗೊಂಡ 107 ರನ್‌ಗಳನ್ನು ಸಿಡಿಸಿದ್ದಾರೆ.

Story first published: Wednesday, June 12, 2019, 20:01 [IST]
Other articles published on Jun 12, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+