For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಇಂಗ್ಲೆಂಡ್‌ ವಿರುದ್ಧ ಅಪರೂಪದ ದಾಖಲೆ ಬರೆದ ಕ್ರಿಸ್‌ ಗೇಲ್‌!

ICC World Cup 2019 : ಇಂಗ್ಲೆಂಡ್ ವಿರುದ್ಧ ಯಾರೂ ಮಾಡದ ದಾಖಲೆ ಮಾಡಿದ ಗೇಲ್..? | Oneindia Knanada
World Cup 2019: Gayle becomes highest run scorer against England in ODIs

ಸೌಥಂಪ್ಟನ್‌, ಜೂನ್‌ 14: ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ತಂಡ 8 ವಿಕೆಟ್‌ಗಳ ಹಿನಾಯ ಸೋಲುಂಡಿತು. ಆದರೂ, ಈ ಪಂದ್ಯದಲ್ಲಿ ವಿಂಡೀಸ್‌ನ ಅನುಭವಿ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಇಂಗ್ಲೆಂಡ್‌ ವಿರುದ್ಧ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌, ಅನಗತ್ಯವಾಗಿ ವಿಕೆಟ್‌ಗಳನ್ನು ಕೈಚೆಲ್ಲಿ 44.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 33.1 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ 213 ರನ್‌ಗಳನ್ನು ದಾಖಲಿಸಿ ಸುಲಭ ಜಯ ತನ್ನದಾಗಿಸಿಕೊಂಡಿತು.

ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಪರ 41 ಎಸೆತಗಳಲ್ಲಿ 36 ರನ್‌ಗಳನ್ನು ಗಳಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಇಂಗ್ಲೆಂಡ್‌ ವಿರುದ್ಧ ವಿಶೇಷ ದಾಖಲೆ ಬರೆದಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಯೂನಿವರ್ಸ್‌ ಖ್ಯಾತಿಯ ಕ್ರಿಸ್‌ ಗೇಲ್‌ ಅವರ ಮುಡಿಗೇರಿದೆ.

39 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ ವಿರುದ್ಧ 1596 ರನ್‌ಗಳನ್ನು ಗಳಿಸಿದ್ದರು. ಇದೀಗ 36 ರನ್‌ಗಳ ಸೇರ್ಪಡೆಯೊಂದಿಗೆ ಶ್ರೀಲಂಕಾದ ಮಾಜಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಕುಮಾರ ಸಂಗಕ್ಕಾರ (1625 ರನ್‌, 44 ಪಂದ್ಯಗಳಲ್ಲಿ) ಅವರ ದಾಖಲೆಯನ್ನು ಮುರಿದಿದ್ದಾರೆ. ಅಷ್ಟೇ ಅಲ್ಲದೆ ವೆಸ್ಟ್‌ ಇಂಡೀಸ್‌ನ ದಂತಕತೆ ವಿವಿಯನ್‌ ರಿಚರ್ಡ್ಸ್‌ (1619 ರನ್‌) ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಐವರು ಅಗ್ರಮಾನ್ಯ ಬ್ಯಾಟ್ಸ್‌ಮನ್‌ಗಳಿವರು.

ಆಟಗಾರ ತಂಡ ಪಂದ್ಯ ಇನಿಂಗ್ಸ್‌ ರನ್‌
ಕ್ರಿಸ್‌ ಗೇಲ್‌ ವೆಸ್ಟ್‌ ಇಂಡೀಸ್‌ 36 34 1632
ಕುಮಾರ ಸಂಗಕ್ಕಾರ ಶ್ರೀಲಂಕಾ 44 41 1625
ವಿವಿಯನ್‌ ರಿಚರ್ಡ್ಸ್‌ ವೆಸ್ಟ್‌ ಇಂಡೀಸ್‌ 36 34 1619
ರಿಕಿ ಪಾಂಟಿಂಗ್‌ ಆಸ್ಟ್ರೇಲಿಯಾ 39 38 1598
ಮಹೇಲ ಜಯವರ್ಧನೆ ಶ್ರೀಲಂಕಾ 47 43 1562

Story first published: Friday, June 14, 2019, 22:51 [IST]
Other articles published on Jun 14, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+