ಇಂಡೊ-ಪಾಕ್ ವಿಶ್ವಕಪ್ ಪಂದ್ಯದ ಚೆಂಡಿನ ಬೆಲೆ ಎಷ್ಟೂ ಅಂತೀರ!

ಲಂಡನ್, ಜುಲೈ 11: ಪ್ರಸಕ್ತ ವಿಶ್ವಕಪ್ ಟೂರ್ನಿಯ ಅತ್ಯಂತ ಹೈವೋಲ್ಟೇಜ್ ಪಂದ್ಯವಾದ ಸಾಂಪ್ರದಾಯಿಕೆ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಕದನಕ್ಕೆ ಬಳಕೆ ಮಾಡಿದ ಚೆಂಡು ಹರಾಜಿನಲ್ಲಿ ಭಾರಿ ಮೊತ್ತಕ್ಕೆ ಮಾರಾಟವಾಗಿದೆ.
ಜೂನ್ 16ರಂದು ನಡೆದ ಇಂಡೊ-ಪಾಕ್ ವಿಶ್ವಕಪ್ ಪಂದ್ಯದಲ್ಲಿ ಬಳಕೆ ಬಳಕೆ ಮಾಡಲಾದ ಬಿಳಿಯ ಕೂಕಬುರಾ ಚೆಂಡನ್ನು ಹರಾಜಿನಲ್ಲಿ ಬರೋಬ್ಬರಿ 1.5 ಲಕ್ಷ ರೂ. ಕೊಟ್ಟು (2,150 ಅಮೆರಿಕನ್ ಡಾಲರ್) ಖರಿದಿ ಮಾಡಲಾಗಿದೆ ಎಂದು ವರದಿಯಾಗಿದೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಹಲವು ವಸ್ತುಗಳನ್ನು ಹರಾಜಿಗಿಡುತ್ತಿರುವ ಅಧಿಕೃತ ವೆಬ್‌ಸೈಟ್ officialmemorabilia.com ಚೆಂಡನ್ನು ಹರಾಜು ಮಾಡಿದೆ.
ಪಂದ್ಯದಲ್ಲಿ ಭಾರತ ತಂಡ ರೋಹಿತ್ ಶರ್ಮಾ ಶತಕದ ನೆರವಿನಿಂದ ಪಾಕಿಸ್ತಾನ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದನ್ವಯ 89 ರನ್‌ಗಳಿಂದ ಬಗ್ಗುಬಡಿದಿತ್ತು. ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಲೀಗ್ ಹಂತದಲ್ಲೇ ಹೊರಬಿದ್ದರೆ, ಪ್ರಶಸ್ತಿ ಗೆಲ್ಲುವ ಫೇವರಿಟ್ ಟೀಮ್ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 18 ರನ್‌ಗಳ ಅಚ್ಚರಿಯ ಸೋಲನುಭವಿಸಿತು.
ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಬಳಕೆ ಮಾಡಲಾದ ಟಾಸ್ ನಾಣ್ಯ ಕೂಡ 1,450 ಡಾಲರ್ ಮೊತ್ತಕ್ಕೆ ಹರಾಜಾಗಿದೆ. ಹರಾಜಿನಲ್ಲಿ ಭಾರತ ತಂಡದಕ್ಕೆ ಸಂಬಂಧಿಸಿದ ಒಟ್ಟು 27 ವಷಸ್ತುಗಳನ್ನು ಮಾರಾಟ ಮಾಡಲಾಗಿದೆ. ಇನ್ನು ಸೆಮಿಫೈನಲ್ ಪಂದ್ಯದ ಸ್ಕೋರ್‌ಶೀಟ್, ಟಾಸ್ ನಾಣ್ಯ ಮತ್ತು ಮ್ಯಾಚ್ ಬಾಲ್ ಮಾರಾಟವಾಗಬೇಕಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಜೊತೆಗಿನ ಪಾಲುದಾರಿಕೆಯಲ್ಲಿ OfficialMemorabilia.com ಅಧಿಕೃತವಾಗಿ ಹರಾಜು ಪ್ರಕ್ರಿಯೆ ನಡೆಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications