ವಿಶ್ವಕಪ್: ಶೆಲ್ಡನ್ ಕಾಟ್ರೆಲ್ ಸೆಲ್ಯೂಟ್ ನಕಲು ಮಾಡಿದ ಶಮಿ, ಕೊಹ್ಲಿ -ವಿಡಿಯೋ!

ಮ್ಯಾನ್ಚೆಸ್ಟರ್, ಜೂನ್ 28: ವಿಕೆಟ್ ಲಭಿಸಿದಾಗ ಸೆಲ್ಯೂಟ್ ಹೊಡೆದು ಸಂಭ್ರಮಾಚರಿಸೋ ವೆಸ್ಟ್ ಇಂಡೀಸ್ ವೇಗಿ ಶೆಲ್ಡನ್ ಕಾಟ್ರೆಲ್ ಪಂದ್ಯದ ವೇಳೆ ಗಮನ ಸೆಳೆಯುತ್ತಿರುತ್ತಾರೆ. ಆದರೆ ಗುರುವಾರ (ಜೂನ್ 27) ಶೆಲ್ಡನ್ ಕಾಟ್ರೆಲ್ ಅವರ ಸೆಲ್ಯೂಟ್ ಸಂಭ್ರಮಾಚರಣೆಯನ್ನು ಭಾರತದ ವೇಗಿ ಮೊಹಮ್ಮದ್ ಶಮಿ ನಕಲು ಮಾಡಿ ಎಲ್ಲರ ಚಿತ್ತ ತನ್ನತ್ತ ಹರಿಸಕೊಂಡಿದ್ದು ಕಂಡುಬಂತು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್ 34ನೇ ಪಂದ್ಯದ ವೆಸ್ಟ್ ಇನ್ನಿಂಗ್ಸ್‌ನಲ್ಲಿ ಶಮಿ ಸೆಲ್ಯೂಟ್ ಹೊಡೆದು ವಿಕೆಟ್ ಉರುಳಿದ್ದನ್ನು ಸಂಭ್ರಮಾಚರಿಸಿದ್ದರು. ಶೆಲ್ಟನ್ ಕಾಟ್ರೆಲ್ ಅವರು 29.5ನೇ ಓವರ್‌ನಲ್ಲಿ ಸ್ಪಿನ್ನರ್ ಯುಜುವೇಂದ್ರ ಚಾಹಲ್‌ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸುವಾಗ ಶಮಿ, ಕಾಟ್ರೆಲ್ ಅವರ ಫೇವರಿಟ್ 'ಸೆಲ್ಯೂಟ್ ಆ್ಯಕ್ಷನ್' ಅನ್ನು ಅನುಸರಿಸಿದರು.
ಭಾರತದ ಇನ್ನಿಂಗ್ಸ್ ವೇಳೆ 50 ರನ್‌ಗೆ 2 ವಿಕೆಟ್ ಲಭಿಸಿದಾಗ ಕಾಟ್ರೆಲ್ ಸೆಲ್ಯೂಟ್ ಹೊಡೆದಿದ್ದರು. ವಿಂಡೀಸ್ ಇನ್ನಿಂಗ್ಸ್ ವೇಳೆ 6.2 ಓವರ್ ಎಸೆದು ಕೇವಲ 16 ರನ್‌ಗೆ 4 ವಿಕೆಟ್ ಎಗರಿಸಿ ಹುಮ್ಮಸ್ಸಿನಲ್ಲಿದ್ದ ಶಮಿ ಕಾಟ್ರೆಲ್ ವಿಕೆಟ್ ಪತನವಾದಾಗ ಅವರದ್ದೇ ರೀತಿ ನಟಿಸಿದರು. ಗಮ್ಮತ್ತಂದ್ರೆ ವಿರಾಟ್ ಕೊಹ್ಲಿ ಕೂಡ ಪಂದ್ಯದ ವೇಳೆ ಹೀಗೇ ಸೆಲ್ಯೂಟ್ ಆ್ಯಕ್ಷನ್ ಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಅರ್ಧಶತಕದ ನೆರವಿನೊಂದಿಗೆ 268 ರನ್ ಬಾರಿಸಿತ್ತು. ವೆಸ್ಟ್ ಇಂಡೀಸ್ ಇನ್ನಿಂಗ್ಸ್ ನಲ್ಲಿ ಶಮಿ 4, ಜಸ್‌ಪ್ರೀತ್ ಬೂಮ್ರಾ 2, ಯುಜುವೇಂದ್ರ ಚಾಹಲ್ 2 ವಿಕೆಟ್ ಪಡೆದು ಕಾಡಿದ್ದರಿಂದ 143 ರನ್‌ಗೆ ಶರಣಾಗುವ ಮೂಲಕ ವಿಂಡೀಸ್ 125 ರನ್ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಭಾರತ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ಏಕಮಾತ್ರ ತಂಡವಾಗಿ ಗುರುತಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications