For Quick Alerts
ALLOW NOTIFICATIONS  
For Daily Alerts
 

ಗೆದ್ದಿದ್ದು ಪಾಕಿಸ್ತಾನ, ಸೆಮಿಫೈನಲ್‌ ತಲುಪಿದ್ದು ನ್ಯೂಜಿಲೆಂಡ್‌!

World Cup 2019 Live: Pakistan vs Bangladesh, Match-43

ಲಂಡನ್‌, ಜುಲೈ 05: ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲ್ಸ್‌ ಹಂತಕ್ಕೇರಬೇಕಾದರೆ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ 310+ ರನ್‌ಗಳ ಅಂತರದ ಜಯ ದಾಖಲಿಸಲೇ ಬೇಕಾದ ಸ್ಥಿತಿಯಲ್ಲಿದ್ದ ಪಾಕಿಸ್ತಾನ ತಂಡ, ಶುಕ್ರವಾರ ಬಾಂಗ್ಲಾದೇಶ ವಿರುದ್ಧ 94 ರನ್‌ಗಳ ಅಂತರದ ಜಯ ದಕ್ಕಿಸಿಕೊಳ್ಳಲಷ್ಟೇ ಶಕ್ತವಾಗಿ ಸ್ಪಧರ್ಧೆಯಿಂದ ಅಧಿಕೃತವಾಗಿ ಹೊರಬಿದ್ದಿತು. ಇದರೊಂದಿಗೆ ನ್ಯೂಜಿಲೆಂಡ್‌ ತಂಡಕ್ಕೆ ಸೆಮಿಫೈನಲ್ಸ್‌ ಸ್ಥಾನ ಖಾತ್ರಿಯಾಗಿದೆ.

ವಿಶ್ವಕಪ್‌: ಪಾಕಿಸ್ತಾನ vs ಬಾಂಗ್ಲಾದೇಶ ಪಂದ್ಯದ ಲೈವ್‌ ಸ್ಕೋರ್‌ಕಾರ್ಡ್‌

1
43686

ಇಲ್ಲಿನ ಇತಿಹಾಸ ಪ್ರಸಿದ್ಧ ಹಾಗೂ ಕ್ರಿಕೆಟ್‌ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ 50 ಓವರ್‌ಗಳಲ್ಲಿ 315/9 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಆದರೆ, ಸೆಮಿಫೈನಲ್ಸ್‌ ಅರ್ಹತೆ ಪಡೆಯಲು ಪಾಕಿಸ್ತಾನ ಕನಿಷ್ಠ 450+ ರನ್‌ ಗಳಿಸಿ ಭಾಂಗ್ಲಾ ತಂಡವನ್ನು 100ರ ಒಳಗೆ ಆಲ್‌ಔಟ್‌ ಮಾಡಬೇಕಿತ್ತು.

ಬಳಿಕ ಗುರಿ ಬೆನ್ನತ್ತಿದ ಬಾಂಗ್ಲಾದೇಶ ತಂಡ ಶಾಕಿಬ್‌ ಅಲ್‌ ಹಸನ್‌ (64) ಅವರ ಹೋರಾಟದ ಹೊರತಾಗಿಯೂ 44.1 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲ್‌ಔಟ್‌ ಆಯಿತು. ಪಂದ್ಯದಲ್ಲಿ ಪಾಕಿಸ್ತಾನ ಪರ ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ಯುವ ವೇಗಿ ಶಹೀನ್‌ ಶಾ ಅಫ್ರಿದಿ 9.1 ಓವರ್‌ಗಳಲ್ಲಿ 354ಕ್ಕೆ 6 ವಿಕೆಟ್‌ ಪಡೆದು ಮಿಂಚಿದರು. ಅಲ್ಲದೆ ವಿಶ್ವಕಪ್‌ ಇತಿಹಾಸದಲ್ಲಿ ಇನಿಂಗ್ಸ್‌ ಒಂದರಲ್ಲಿ 5+ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಅತ್ಯಂತ ಕಿರಿಯ ವಯಸ್ಸಿನ ಬೌಲರ್‌ ಎಂಬ ದಾಖಲೆಯನ್ನೂ ಬರೆದರು.

ಅಂದಹಾಗೆ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕ್‌ ತಂಡದ ನಾಯಕ ಸರ್ಫರಾಝ್‌ ಅಹ್ಮದ್‌ ತಮ್ಮ ತಂಡ 500 ರನ್‌ಗಳನ್ನು ಗಳಿಸುವ ಪ್ರಯತ್ನ ನಡೆಸಲಿದೆ ಎಂದು ಹೇಳಿದ್ದಾರು. ಆದರೆ, ವಾಸ್ತವದಲ್ಲಿ ಪಾಕ್‌ ಪಡೆ 185 ರನ್‌ಗಳ ಹಿನ್ನಡೆ ಅನುಭವಿಸಿತು.

ಪಾಕಿಸ್ತಾನ ತಂಡದ ಪರ ಇಮಾಮ್‌ ಉಲ್‌ ಹಕ್‌ (100) ವಿಶ್ವಕಪ್‌ ಟೂರ್ನಿಯಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರೆ, ಇನ್‌ಫಾರ್ಮ್‌ ಬ್ಯಾಟ್ಸ್‌ಮನ್‌ ಬಾಬರ್‌ ಆಝಮ್‌ (96) ನಾಲ್ಕು ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. ಇನಿಂಗ್ಸ್‌ ಅಂತ್ಯದಲ್ಲಿ ಇಮಾದ್‌ ವಾಸಿಂ (26 ಎಸೆತಗಳಲ್ಲಿ 43 ರನ್‌) ಉಪಯುಕ್ತ ಕಾಣಿಕೆ ನೀಡಿ ತಂಡ ಮೊತ್ತವನ್ನು 300ರ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌

ಪಾಕಿಸ್ತಾನ: 50 ಓವರ್‌ಗಳಳಲ್ಲಿ 315/9 (ಇಮಾಮ್‌ ಉಲ್‌ ಹಕ್‌ 100, ಬಾಬರ್‌ ಆಝಮ್‌ 96, ಮೊಹಮ್ಮದ್‌ ಹಫೀಝ್‌ 27, ಇಮಾದ್‌ ವಾಸಿಂ 43; ಮುಸ್ಥಾಫಿಝುರ್‌ ರೆಹಮಾನ್‌ 75ಕ್ಕೆ 5, ಮೊಹಮ್ಮದ್‌ ಸೈಫುದ್ದೀನ್‌ 77ಕ್ಕೆ 3).

ಬಾಂಗ್ಲಾದೇಶ: 44.1 ಓವರ್‌ಗಳಲ್ಲಿ 221/10 (ಸೌಮ್ಯ ಸಕರ್ಕಾರ್‌ 22, ಶಾಕಿಬ್‌ ಅಲ್‌ ಹಸನ್‌ 64, ಲಿಟನ್‌ ದಾಸ್‌ 32, ಮಹ್ಮೂದುಲ್ಲ 29; ಶಹೀನ್‌ ಶಾ ಅಫ್ರಿದಿ 35ಕ್ಕೆ 6, ಶದಾಬ್‌ ಖಾನ್‌ 59ಕ್ಕೆ 2).

ತಂಡಗಳ ವಿವರ
ಪಾಕಿಸ್ತಾನ (ಪ್ಲೇಯಿಂಗ್‌ 11): ಫಖರ್‌ ಝಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಆಝಮ್‌, ಮೊಹಮ್ಮದ್‌ ಹಫೀಝ್‌, ಹ್ಯಾರಿಸ್‌ ಸೊಹೇಲ್‌, ಸರ್ಫರಾಝ್‌ ಅಹ್ಮದ್‌(ವಿಕೆಟ್‌ ಕೀಪರ್‌/ನಾಯಕ), ಇಮಾದ್‌ ವಾಸಿಂ, ಶದಾಬ್‌ ಖಾನ್‌, ವಹಾಬ್‌ ರಿಯಾಝ್‌, ಮೊಹಮ್ಮದ್‌ ಆಮಿರ್‌, ಶಹೀನ್‌ ಶಾ ಅಫ್ರಿದಿ.

ಬಾಂಗ್ಲಾದೇಶ (ಪ್ಲೇಯಿಂಗ್‌ 11): ತಮಿಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಶಾಕಿಬ್‌ ಅಲ್‌ ಹಸನ್‌, ಮುಷ್ಫಿಕರ್‌ ರಹೀಮ್‌ (ವಿಕೆಟ್‌ಕೀಪರ್‌), ಮಹ್ಮೂದುಲ್ಲಾ, ಲಿಟನ್‌ ದಾಸ್‌, ಮೊಸಾದೆಕ್‌ ಹುಸೇನ್‌, ಮೊಹಮ್ಮದ್‌ ಸೈಫುದ್ದೀನ್‌, ಮೆಹ್ದಿ ಹಸನ್‌, ಮಶ್ರಫೆ ಮೊರ್ತಾಝ (ನಾಯಕ), ಮುಸ್ತಾಫಿಝುರ್‌ ರೆಹಮಾನ್‌.

{headtohead_cricket_5_10}

Story first published: Friday, July 5, 2019, 23:12 [IST]
Other articles published on Jul 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+