ವಿಶ್ವಕಪ್: ಪಾಕಿಸ್ತಾನಕ್ಕೆ ಶರಣಾದ ದಕ್ಷಿಣ ಆಫ್ರಿಕಾ

ಲಂಡನ್, ಜೂನ್ 23: ಸೆಮಿಫೈನಲ್ಸ್ ಹಂತಕ್ಕೇರಬೇಕಾದರೆ ತನ್ನ ಪಾಲಿನ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಪಾಕಿಸ್ತಾನ ತಂಡ, ತನ್ನ ಸಾಮರ್ಥ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ಅಪಾಯಕಾರಿ ದಕ್ಷಿಣ ಆಫ್ರಿಕಾ ಎದುರು 49 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಇಲ್ಲಿನ ಇತಿಹಾಸ ಪ್ರಸಿದ್ಧ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಮೊದಲ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತನ್ನ ಪಾಲಿನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 308 ರನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಹರಿಣ ಪಡೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 259 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಸೋಲಿಗೆ ಶರಣಾಯಿತು.
ಶೊಯೇಬ್ ಮಲಿಕ್ ಅವರ ಸ್ಥಾನದಲ್ಲಿ ಆಡುವ 11ರ ಬಳಗಕ್ಕೆ ಕಾಲಿಟ್ಟ ಹ್ಯಾರಿಸ್ ಸೊಹೇಲ್ 59 ಎಸೆತಗಳಲ್ಲಿ 9 ಫೋರ್ ಮತ್ತು 3 ಸಿಕ್ಸರ್ ಒಳಗೊಂಡ 89 ರನ್‌ಗಳನ್ನು ಸಿಡಿಸಿ ಪಾಕ್ ಗೆಲುವಿನ ರೂವಾರಿ ಎನಿಸುವ ಮೂಲಕ ಪಂದ್ಯ ಶ್ರೇಷ್ಠ ಗೌರವ ಪಡೆದರು. ಬೌಲಿಂಗ್‌ನಲ್ಲಿ ಮೊಹಮ್ಮದ್ ಆಮಿರ್ 49ಕ್ಕೆ 2 ವಿಕೆಟ್ ಪಡೆದು ಉತ್ತಮ ಆರಂಭ ಒದಗಿಸಿದರೆ, ವಹಾಬ್ ರಿಯಾಝ್ (46ಕ್ಕೆ 3) ಮತ್ತು ಶದಾಬ್ ಖಾನ್ (50ಕ್ಕೆ 3) ತಲಾ ಮೂರು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಾಕ್ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಇಮಾಮ್ ಉಲ್ ಹಕ್ (44) ಮತ್ತು ಫಖರ್ ಝಮಾನ್ (44) ಮೊದಲ ವಿಕೆಟ್‌ಗೆ 81 ರನ್‌ಗಳನ್ನು ಗಳಿಸುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಾಬರ್ ಅಝಾಮ್ (69) ಮತ್ತು ಹ್ಯಾರಿಸ್ ಸೊಹೇಲ್ (89) ಅವರ ಜವಾಬ್ದಾರಿಯುತ ಅರ್ಧಶತಕಗಳ ನೆರವಿನಿಂದ 300+ ರನ್‌ಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಯಿತು.
ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ (64ಕ್ಕೆ 3) ಯಶಸ್ವಿ ಬೌಲರ್ ಎನಿಸಿದರೆ, ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ 41ಕ್ಕೆ 2 ವಿಕೆಟ್ ಪಡೆದು ಉತ್ತಮ ಸಾಥ್ ನೀಡಿದರು.
ಪಂದ್ಯದಲ್ಲಿ ಪಾಕಿಸ್ತಾನ ಎರಡು ಬದಲಾವಣೆಗಳನ್ನು ತಂದುಕೊಂಡಿದ್ದು, ಅನುಭವಿಗಳಾದ ಶೊಯೇಬ್ ಮಲಿಕ್ ಮತ್ತು ಆಸಿಫ್ ಅಲಿ ಅವರ ಬದಲಾಗಿ ಹ್ಯಾರಿಸ್ ಸೊಹೇಲ್ ಮತ್ತು ಶಹೀನ್ ಶಾ ಅಫ್ರಿದಿ ಅವರನ್ನು ಕಣಕ್ಕಿಳಿಸಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧ ಆಡಿದ ತಂಡವನ್ನೇ ದಕ್ಷಿಣ ಆಫ್ರಿಕಾ ಕಾಯ್ದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 50 ಓವರ್‌ಗಳಲ್ಲಿ 308/7 (ಇಮಾಮ್ ಉಲ್ ಹಕ್ 44, ಫಖರ್ ಝಮಾನ್ 44, ಹ್ಯಾರಿಸ್ ಸೊಹೇಲ್ 89, ಬಾಬರ್ ಅಝಾಮ್ 69; ಲುಂಗಿ ಎನ್ಗಿಡಿ 64ಕ್ಕೆ 3, ತಾಹಿರ್ 41ಕ್ಕೆ 2).
ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 259/9 (ಕ್ವಿಂಟನ್ ಡಿ'ಕಾಕ್ 47, ಫಾಫ್ ಡು'ಪ್ಲೆಸಿಸ್ 63, ಫೆಹ್ಲುಕ್ವಾಯೊ ಔಟಾಗದೆ 46; ಮೊಹಮ್ಮದ್ ಆಮಿರ್ 49ಕ್ಕೆ 2 , ವಹಾಬ್ ರಿಯಾಝ್ 46ಕ್ಕೆ 3, ಶದಾಬ್ ಖಾನ್ 50ಕ್ಕೆ 3).
ತಂಡಗಳ ವಿವರ
ಪಾಕಿಸ್ತಾನ (ಪ್ಲೇಯಿಂಗ್ 11): ಇಮಾಮ್ ಉಲ್ ಹಕ್, ಫಖರ್ ಝಮಾನ್, ಬಾಬರ್ ಅಝಾಮ್, ಮೊಹಮ್ಮದ್ ಹಫೀಝ್, ಸರ್ಫರಾಝ್ ಅಹ್ಮದ್ (ವಿಕೆಟ್‌ಕೀಪರ್ ಮತ್ತು ಕ್ಯಾಪ್ಟನ್), ಹ್ಯಾರಿಸ್ ಸೊಹೇಲ್, ಇಮಾದ್ ವಾಸಿಮ್, ಶದಾಬ್ ಖಾನ್, ವಹಾಬ್ ರಿಯಾಝ್, ಶಹೀನ್ ಶಾ ಅಫ್ರಿದಿ, ಮೊಹಮ್ಮದ್ ಆಮಿರ್.
ದಕ್ಷಿಣ ಆಫ್ರಿಕಾ (ಪ್ಲೇಯಿಂಗ್ 11): ಕ್ವಿಂಟನ್ ಡಿ'ಕಾಕ್(ವಿಕೆಟ್‌ಕೀಪರ್), ಹಶೀಮ್ ಆಮ್ಲಾ, ಫಾಫ್ ಡು'ಪ್ಲೆಸಿಸ್ (ನಾಯಕ), ಏಡೆನ್ ಮಾರ್ಕ್ರಮ್, ರಾಸಿ ವ್ಯಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಆಂಡಿಲ್ ಫೆಹ್ಲುಕ್ವಾಯೊ, ಕ್ರಿಸ್ ಮಾರಿಸ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಇಮ್ರಾನ್ ತಾಹಿರ್.
{headtohead_cricket_5_6}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications