ವಿಶ್ವಕಪ್: ರೂಟ್ ಶತಕ, ವಿಂಡೀಸ್ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

ಸೌಥಂಪ್ಟನ್, ಜೂನ್ 14: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್‌ಗಿಂತಲೂ ಮಳೆಯಾಟವೇ ಹೆಚ್ಚಾಗಿದ್ದು, ಪಂದ್ಯ ನಡೆಯಲು ಸಾಧ್ಯವಾದರೆ ಗೆದ್ದು ಸಂಪೂರ್ಣ ಅಂಕಗಳನ್ನು ಬಾಚಿಕೊಳ್ಳುವ ತುಡಿತದಲ್ಲಿದ್ದ ಆತಿಥೇಯ ಇಂಗ್ಲೆಂಡ್ ತಂಡ ಅಪಾಯಕಾರಿ ವೆಸ್ಟ್ ಇಂಡೀಸ್ ತಂಡವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದಿದೆ.
ವಿಶ್ವಕಪ್: ವೆಸ್ಟ್ ಇಂಡೀಸ್ vs ಇಂಗ್ಲೆಂಡ್ ಪಂದ್ಯದ ಲೈವ್ ಸ್ಕೋರ್ ಕಾರ್ಡ್
ಜೋ ರೂಟ್ ಅವರ ಅಜೇಯ ಶತಕದ (100* ರನ್, 94 ಎಸೆತ) ಬಲದಿಂದ 213 ರನ್‌ಗಳ ಗುರಿಯನ್ನು ಕೇವಲ 2 ವಿಕೆಟ್ ನಷ್ಟದಲ್ಲಿ 33.1 ಓವರ್‌ಗಳಲ್ಲಿ ಪೂರೈಸಿದ ಇಂಗ್ಲೆಂಡ್ ತಂಡ ಸಂಪೂರ್ಣ ಎರಡು ಅಂಕಗಳನ್ನು ಜೇಬಿಗಳಿಸಿದೆ. ರೂಟ್‌ಗೆ ಉತ್ತಮ ಸಾಥ್ ನೀಡಿದ ಜಾನಿ ಬೈರ್‌ಸ್ಟೋವ್ (45) ಮತ್ತು ಕ್ರಿಸ್ ವೋಕ್ಸ್ (40) ಉಪಯುಕ್ತ ರನ್‌ಗಳ ಕಾಣಿಕೆ ನೀಡಿದರು.
ಇದಕ್ಕೂ ಮುನ್ನ ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಅನಗತ್ಯ ಹೊಡೆತಗಳಿಗೆ ಕೈ ಹಾಕಿ ವಿಕೆಟ್‌ಗಳನ್ನು ಒಪ್ಪಿಸಿದರ ಪರಿಣಾಮ 44.4 ಓವರ್‌ಗಳಲ್ಲಿ 212 ರನ್‌ಗಳಿಗೆ ಆಲ್‌ಔಟ್ ಆಯಿತು. ಇಂಗ್ಲೆಂಡ್ ಪರ ಭರ್ಜರಿ ಬೌಲಿಂಗ್ ಸಂಘಟಿಸಿದ ವೇಗಿಗಳಾದ ಮಾರ್ಕ್ ವುಡ್ (18ಕ್ಕೆ 3) ಮತ್ತು ಜೋಫ್ರಾ ಆರ್ಚರ್ (30ಕ್ಕೆ 3) ವಿಂಡೀಸ್ ಪಡೆಯ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನವಾದರು.
ಕೆರಿಬಿಯನ್ ಪಡೆಯ ಪರ ನಿಕೋಲಸ್ ಪೂರನ್ 78 ಎಸೆತಗಳಲ್ಲಿ 63 ರನ್‌ಗಳನ್ನು ಗಳಿಸಿ ತಂಡದ ಮೊತ್ತ 200ರ ಗಡಿ ದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ವೆಸ್ಟ್ ಇಂಡೀಸ್: 44.4 ಓವರ್‌ಗಳಲ್ಲಿ 212/10 (ಕ್ರಿಸ್ ಗೇಲ್ 36, ನಿಕೋಲಸ್ ಪೂರನ್ 63, ಶಿಮ್ರಾನ್ ಹೆಟ್ಮಾಯೆರ್ 39; ಮಾರ್ಕ್ ವುಡ್ 18ಕ್ಕೆ 3, ಜೋಫ್ರಾ ಆರ್ಚರ್ 30ಕ್ಕೆ 3).
ಇಂಗ್ಲೆಂಡ್: 33.1 ಓವರ್‌ಗಳಲ್ಲಿ 213/2 (ಬೈರ್‌ಸ್ಟೋವ್ 45, ರೂಟ್ ಅಜೇಯ 100*, ವೋಕ್ಸ್ 40; ಶನಾನ್ ಗೇಬ್ರಿಯೆಲ್ 49ಕ್ಕೆ 2).
ತಂಡಗಳ ವಿವರ
ವೆಸ್ಟ್ ಇಂಡೀಸ್ (ಪ್ಲೇಯಿಂಗ್ ಇಲೆವೆನ್): ಕ್ರಿಸ್ ಗೇಲ್, ಎವಿನ್ ಲೂಯಿಸ್, ಶೇಯ್ ಹೋಪ್ (ವಿಕೆಟ್‌ಕೀಪರ್), ನಿಕೊಲಾಸ್ ಪೂರನ್, ಶಿಮ್ರಾನ್ ಹೆಟ್ಮಾಯೆರ್, ಜೇಸನ್‌ಹೋಲ್ಡರ್ (ನಾಯಕ), ಆಂಡ್ರೆ ರಸೆಲ್, ಕಾರ್ಲೋಸ್ ಬ್ರಾತ್‌ವೇಟ್, ಶೆಲ್ಡನ್ ಕಾಟ್ರೆಲ್, ಶನಾನ್ ಗೇಬ್ರಿಯಲ್, ಒಶೇನ್ ಥಾಮಸ್.
ಇಂಗ್ಲೆಂಡ್ (ಪ್ಲೇಯಿಂಗ್ ಇಲೆವೆನ್): ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಐಯಾನ್ ಮಾರ್ಗನ್, ಜೋಸ್ ಬಟ್ಲರ್ (ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್, ಜೋಫ್ರಾ ಆರ್ಚರ್, ಆದಿಲ್ ರಶೀದ್. ಮಾರ್ಕ್ ವುಡ್.
{headtohead_cricket_8_2}
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications