Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ನ್ಯೂಜಿಲೆಂಡ್ ಗೆಲುವಿನೋಟಕ್ಕೆ ಬ್ರೇಕ್ ಒತ್ತಲಿದೆಯಾ ಪಾಕ್?!

World cup 2019: New Zealand vs Pakistan, Match 33-Preview

ಬರ್ಮಿಂಗ್‌ಹ್ಯಾಮ್, ಜೂನ್ 26: ವೆಸ್ಟ್ ಇಂಡೀಸ್ ವಿರುದ್ಧ 5 ರನ್ ರೋಚಕ ಜಯ ಗಳಿಸಿರುವ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ಧವೂ ಗೆಲುವಿನ ಓಟ ಮುಂದುವರೆಸುವ ವಿಶ್ವಾಸದಲ್ಲಿದೆ. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ವಿಶ್ವಕಪ್ 33ನೇ ಪಂದ್ಯದಲ್ಲಿ ಬುಧವಾರ (ಜೂನ್ 26) ಪಾಕ್-ಕಿವೀಸ್ ಮುಖಾಮುಖಿಯಾಗುತ್ತಿವೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ನ್ಯೂಜಿಲೆಂಡ್ ಆಡಿರುವ 6ರಲ್ಲಿ 5 ಗೆಲುವುಗಳನ್ನು ದಾಖಲಿಸಿದೆ. ಒಟ್ಟು 11 ಅಂಕಗಳಿಂದ ಕಿವೀಸ್ ವಿಶ್ವಕಪ್ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಪಾಕ್ ವಿರುದ್ಧ ಗೆದ್ದರೆ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಲಿದೆ. ಇತ್ತ ಪಾಕಿಸ್ತಾನ ಆಡಿರುವ 6 ಪಂದ್ಯಗಳಲ್ಲಿ 2ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಪಾಕಿಸ್ತಾನ vs ನ್ಯೂಜಿಲೆಂಡ್, ಜೂನ್ 26, Live ಸ್ಕೋರ್‌ಕಾರ್ಡ್

1
43676

ಆದರೆ ಎರಡೂ ತಂಡಗಳ ಈ ಹಿಂದಿನ ವಿಶ್ವಕಪ್ ಮುಖಾಮುಖಿ ಗಮನಿಸಿದರೆ, ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಪಾಕಿಸ್ತಾನ ಜಯಿಸಿದೆ. ಕೇವಲ 2ರಲ್ಲಷ್ಟೇ ನ್ಯೂಜಿಲೆಂಡ್ ಗೆದ್ದಿದೆ. ಪಾಕಿಸ್ತಾನಕ್ಕೆ ಗೆಲುವು ಪ್ರತಿಷ್ಠೆಯ ಮಟ್ಟಿಗಾದರೂ ಬೇಕಾಗಿರುವುದರಿಂದ ಬುಧವಾರದ ಪಂದ್ಯದಲ್ಲಿ ಪಾಕ್ ತಂಡ ಕಿವೀಸ್‌ನ ವಿಶ್ವಕಪ್‌ ಗೆಲುವಿನೋಟಕ್ಕೆ ಬ್ರೇಕ್ ಒತ್ತಿದರೂ ಅಚ್ಚರಿಯಿಲ್ಲ.

ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದು, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಎರಡೂ ಹಿಂದಿನ ಪಂದ್ಯಗಳಲ್ಲೂ ಶತಕ ಬಾರಿಸಿ ತಂಡಕ್ಕೆ ಬಲ ತುಂಬಿದ್ದರು. ಪಾಕ್ ವಿರುದ್ಧವೂ ವಿಲಿಯಮ್ಸನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವ ನಿರೀಕ್ಷೆಯಿದೆ. ಪಂದ್ಯ pmಗೆ ಪಂದ್ಯ ಆರಂಭವಾಗಲಿದೆ.

ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಟಾಮ್ ಲಾಥಮ್ (ವಿಕೆ), ಜೇಮ್ಸ್ ನೀಶಮ್, ಕಾಲಿನ್ ಡೆ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್.

ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಝಾಮ್, ಮೊಹಮ್ಮದ್ ಹಫೀಜ್, ಹ್ಯಾರೀಸ್ ಸೊಹೈಲ್, ಸರ್ಫರಾಜ್ ಅಹ್ಮದ್ (ಸಿ & ವಿಕೆ), ಇಮಾದ್ ವಾಸಿಮ್, ವಹಾಬ್ ರಿಯಾಜ್, ಶಾದಾಬ್ ಖಾನ್, ಮೊಹಮ್ಮದ್ ಅಮೀರ್, ಶಾಹೀನ್ ಅಫ್ರಿದಿ.

{headtohead_cricket_5_4}

Story first published: Wednesday, June 26, 2019, 12:33 [IST]
Other articles published on Jun 26, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+