Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಸಹಾಯ ಮಾಡ್ತಿದ್ದಾರೆ: ಪಾಕ್ ನಾಯಕನ ಅಳಲು

ICC World Cup 2019 : ಎಲ್ಲರೂ ಭಾರತಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಬೇಜಾರಾದ ಪಾಕಿಸ್ತಾನ..?
world cup 2019 Pakistan captain Sarfraz Ahmed India friendly tracks

ಲಂಡನ್, ಜೂನ್ 13: ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಭಾರತ ವಿಶ್ವಕಪ್‌ನಲ್ಲಿ ಉತ್ತಮ ಆರಂಭ ಪಡೆದಿದೆ. ಅತ್ತ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋಲು ಅನುಭವಿಸಿ ಚಿಂತೆಗೊಳಗಾಗಿದೆ. ಅದರ ಒಂದು ಪಂದ್ಯ ಮಳೆಗೆ ಆಹುತಿಯಾಗಿತ್ತು.

ಅದರಲ್ಲಿಯೂ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ದ ಪಾಕ್, ತೀವ್ರ ಟೀಕೆಗೆ ಒಳಗಾಗಿತ್ತು. ಒಶೇನ್ ಥಾಮಸ್, ಶೆಲ್ಡನ್ ಕಾಟ್ರೆಲ್, ಜೇಸನ್ ಹೋಲ್ಡರ್, ಆಂಡ್ರೂ ರಸೆಲ್ ಅವರಂತಹ ವೇಗಿಗಳ ದಾಳಿಗೆ ತತ್ತರಿಸಿದ್ದ ಪಾಕಿಸ್ತಾನದ ಬ್ಯಾಟಿಂಗ್ ಲೈನಪ್, ಕಳಪೆ ಆಟ ಪ್ರದರ್ಶಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚೇತರಿಸಿಕೊಂಡು ಭರ್ಜರಿ ಆಟವಾಡಿ ಗೆಲುವು ಸಾಧಿಸಿತ್ತು. ಆದರೆ, ಆಸ್ಟ್ರೇಲಿಯಾ ವಿರುದ್ಧ ಮತ್ತೆ ಸೋಲಿನ ಹಾದಿಗೆ ಮರಳಿದೆ.

ಇತ್ತ ಭಾರತ ಬಲಿಷ್ಠ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಆರಂಭದಲ್ಲಿ ಬ್ಯಾಟಿಂಗ್ ವಿಭಾಗ ನಡುಗಿದರೂ ಬಳಿಕ ಚೇತರಿಸಿಕೊಂಡು ವಿಜಯದ ಗುರಿ ತಲುಪವಲ್ಲಿ ಯಶಸ್ವಿಯಾಗಿತ್ತು. ಆಸ್ಟ್ರೇಲಿಯಾ ವಿರುದ್ಧವಂತೂ ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ಅಬ್ಬರಿಸಿದ್ದರು.

ಭಾರತಕ್ಕೆ ಅನುಕೂಲಕರ

ಭಾರತಕ್ಕೆ ಅನುಕೂಲಕರ

ಭಾರತಕ್ಕೆ ಅನುಕೂಲಕರವಾದ ರೀತಿಯಲ್ಲಿ ಪಿಚ್‌ಗಳನ್ನು ಮಾಡಲಾಗುತ್ತಿದೆ ಎಂದು ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಆರೋಪಿಸಿರುವುದಾಗಿ ಲಂಡನ್‌ನ 'ಜಾಂಗ್' ಪತ್ರಿಕೆ ವರದಿ ಮಾಡಿದೆ.

ಭಾರತಕ್ಕೆ ಮಾತ್ರ ಯಾವಾಗಲೂ ಬ್ಯಾಟಿಂಗ್ ಸ್ನೇಹಿ ಮತ್ತು ಅವರ ಶಕ್ತಿಯಾದ ನಿಧಾನಗತಿಯ ಬೌಲರ್‌ಗಳಿಗೆ ಪೂರಕವಾಗುವಂತಹ ಪಿಚ್‌ಗಳೇ ಯಾವಾಗಲೂ ಸಿಗುತ್ತಿವೆ ಎಂದು ಅವರು ಅಳಲು ತೋಡಿಕೊಂಡಿರುವುದಾಗಿ ವರದಿಯಾಗಿದೆ.

ಟಾಂಟಾನ್ ಪಿಚ್ ಬಗ್ಗೆ ದೂರು

ಟಾಂಟಾನ್ ಪಿಚ್ ಬಗ್ಗೆ ದೂರು

ಬುಧವಾರ ಆಸ್ಟ್ರೇಲಿಯಾ ವಿರುದ್ಧ ಟಾಂಟಾನ್‌ನಲ್ಲಿ ನಡೆದ ಪಂದ್ಯದ ಪಿಚ್ ಪರಿಶೀಲಿಸಿದ ಬಳಿಕ ಸರ್ಫರಾಜ್ ಅಸಮಾಧಾನ ವ್ಯಕ್ತಪಡಿಸಿದ್ದರು. ಪಿಚ್ ಹೆಚ್ಚರು ಹುಲ್ಲಿನಿಂದ ಕೂಡಿದ್ದು, ಬೌನ್ಸ್, ವೇಗ ಪಡೆದುಕೊಳ್ಳುವುದರಿಂದ ವೇಗದ ಬೌಲರ್‌ಗಳಿಗೆ ನೆರವಾಗುವುದು ಸ್ಪಷ್ಟ ಎಂದಿದ್ದರು. ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ಆಡುವ ಮಾದರಿಗೆ ಅನುಕೂಲಕರವಾದ ಪಿಚ್‌ಗಳು ಸಿಗುತ್ತಿಲ್ಲ ಎಂದು ಸರ್ಫರಾಜ್ ಹೇಳಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ವಾರ್ನರ್ ಮಾಡಿದ್ದೇನು ಗೊತ್ತೇ?

ನಮಗೆ ಮಾತ್ರ ಕಷ್ಟದ ಪಿಚ್

ನಮಗೆ ಮಾತ್ರ ಕಷ್ಟದ ಪಿಚ್

'ಭಾರತೀಯರು ಬ್ಯಾಟಿಂಗ್‌ಗೆ ಅನುಕೂಲಕರವಾದ ಮತ್ತು ಸ್ಪಿನ್ನರ್‌ಗಳಿಗೆ ಸೂಕ್ತವಾದ ಪಿಚ್‌ಗಳನ್ನು ಹೇಗೆ ಪಡೆಯುತ್ತಾರೆ ಎಂದು ಪಾಕಿಸ್ತಾನದ ನಾಯಕ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂತಹ ಪಿಚ್‌ಗಳು ಏಷ್ಯಾದ ತಂಡಗಳಿಗೆ ಪೂರಕವಾಗಿರುತ್ತವೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡವು ಯಾವಾಗಲೂ ಟಾಂಟಾನ್‌ನಂತಹ ಸವಾಲಿನ ಹಾಗೂ ಕ್ಲಿಷ್ಟಕರ ಪಿಚ್‌ಗಳಲ್ಲಿಯೇ ಆಡುವಂತಾಗುತ್ತದೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ' ಎಂದು ಸರ್ಫರಾಜ್ ಅವರ ಆಪ್ತರ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿವೆ.

ಭಾರತ-ಪಾಕಿಸ್ತಾನ ಪಂದ್ಯ

ಭಾರತ-ಪಾಕಿಸ್ತಾನ ಪಂದ್ಯ

ಪ್ರಸಕ್ತ ವಿಶ್ವಕಪ್‌ನಲ್ಲಿ ಪಾಕಿಸ್ತಾನ ನಾಲ್ಕು ಪಂದ್ಯಗಳನ್ನು ಆಡಿದ್ದು, ಮೂರು ಅಂಕಗಳೊಂದಿಗೆ ಎಂಟನೆಯ ಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯ ಕಾರಣ ರದ್ದುಗೊಂಡಿತ್ತು. ಪಾಕಿಸ್ತಾನವು ಜೂನ್ 16ರಂದು ನಡೆಯಲಿರುವ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ. ಸರ್ಫರಾಜ್ ಆರೋಪದ ನಡುವೆ ಈ ಹೈವೋಲ್ಟೇಜ್ ಪಂದ್ಯ ಎರಡೂ ತಂಡಗಳಿಗೆ ಪ್ರತಿಷ್ಠೆಯಾಗಿದೆ.

ಭಾರತ vs ನ್ಯೂಜಿಲ್ಯಾಂಡ್: ವಿಶ್ವದಾಖಲೆಗೆ ಕೊಹ್ಲಿಗೆ ಕೇವಲ 57 ರನ್‌ ಬೇಕು!

Story first published: Thursday, June 13, 2019, 16:26 [IST]
Other articles published on Jun 13, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+