ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಶ್ರೀಲಂಕಾ-ವೆಸ್ಟ್ ಇಂಡೀಸ್ ಪಾಲಿಗೆ ಔಪಚಾರಿಕ ಪಂದ್ಯ!?

World cup 2019: Sri Lanka vs West Indies, Match 39-Preview

ಲಂಡನ್, ಜುಲೈ 1: ಐಸಿಸಿ ವಿಶ್ವಕಪ್ 2019ರಲ್ಲಿ ಸೆಮಿಫೈನಲ್ ಪ್ರವೇಶಿಸುವ ಶ್ರೀಲಂಕಾ ಆಸೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ದೊಡ್ಡ ಹೊಡೆತ ನೀಡಿದೆ. ಸೋಮವಾರ (ಜುಲೈ 1) ಶ್ರೀಲಂಕಾಕ್ಕೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕು. ಈ ಫಲಿತಾಂಶ ಲಂಕಾ ಹಣೆಬರಹ ನಿರ್ಧರಿಸಲಿದೆ. ಹಾಗಂತ ಪಂದ್ಯ ಗೆದ್ದರೂ ಲಂಕಾ ಸೆಮಿಫೈನಲ್ ಪ್ರವೇಶಿಸುತ್ತೆ ಅನ್ನೋದಕ್ಕೆ ಗ್ಯಾರಂಟಿಯಿಲ್ಲ!

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಸೋಮವಾರ ಚೆಸ್ಟರ್-ಲೆ-ಸ್ಟ್ರೀಟ್ ನಲ್ಲಿರುವ ರಿವರ್ಸ್‌ಸೈಡ್ ಗ್ರೌಂಡ್‌ನಲ್ಲಿ ವಿಶ್ವಕಪ್ 39ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಆಡಿರುವ 7ರಲ್ಲಿ 1 ಗೆಲುವು ದಾಖಲಿಸಿರುವ ವಿಂಡೀಸ್‌ಗೆ ಇದು ಔಪಚಾರಿಕ ಪಂದ್ಯವೆ. 7ರಲ್ಲಿ 2 ಗೆಲುವು ಕಂಡಿರುವ ಲಂಕಾ ಪಾಲಿಗೂ ಇದು ಒಂದರ್ಧದಲ್ಲಿ ಔಪಚಾರಿಕವೇ.

ಶ್ರೀಲಂಕಾ vs ವೆಸ್ಟ್ ಇಂಡೀಸ್, ಜುಲೈ 1, Live ಸ್ಕೋರ್‌ಕಾರ್ಡ್

1
43682

ಸದ್ಯ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ (14 ಪಾಯಿಂಟ್ಸ್), ಭಾರತ (11), ನ್ಯೂಜಿಲೆಂಡ್ (11), ಇಂಗ್ಲೆಂಡ್ (10) ತಂಡಗಳಿವೆ. ಈ ನಾಲ್ಕೂ ತಂಡಗಳ ನೆಟ್ ರನ್ ರೇಟ್ ಕೂಡ ಚೆನ್ನಾಗಿಯೇ ಇದೆ. ಹೀಗಾಗಿ ಶ್ರೀಲಂಕಾ-ವಿಂಡೀಸ್ ಪಂದ್ಯದ ಫಲಿತಾಂಶವೂ ಅಗ್ರ ನಾಲ್ಕು ಸ್ಥಾನಿಗಳಿಗೆ ಅಂಥದ್ದೇನೂ ಪರಿಣಾಮ ಬೀರಲಾರದು.

ವೆಸ್ಟ್ ಇಂಡೀಸ್ ತಂಡ: ಕ್ರಿಸ್ ಗೇಲ್, ಸುನಿಲ್ ಆ್ಯಬ್ರಿಸ್, ಶೈ ಹೋಪ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೈರ್, ಜೇಸನ್ ಹೋಲ್ಡರ್, ಕಾರ್ಲೋಸ್ ಬ್ರಾಥ್‌ವೇಟ್, ಫ್ಯಾಬಿಯನ್ ಅಲೆನ್, ಕೆಮರ್ ರೋಚ್, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್.

ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ, ಕುಸಾಲ್ ಪೆರೆರಾ, ಅವಿಷ್ಕಾ ಫರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಜೀವನ್ ಮೆಂಡಿಸ್/ಮಿಲಿಂಡಾ ಸಿರಿವರ್ಧನ, ಧನಂಜಯ ಡಿ ಸಿಲ್ವಾ, ಥಿಸೆರಾ ಪೆರೆರಾ, ಇಸುರು ಉದಾನ, ಸುರಂಗ ಲಕ್ಮಲ್, ಲಸಿತ್ ಮಾಲಿಂಗ.

{headtohead_cricket_7_8}

Story first published: Monday, July 1, 2019, 16:29 [IST]
Other articles published on Jul 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X