Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೈ ಬೆರಳು ಮುರಿದರೂ ಲೆಕ್ಕಿದಸೆ ಆಡಿ ಮನ ಗೆದ್ದ ವಹಾಬ್‌ ರಿಯಾಝ್‌!

World Cup 2019: Wahab Riaz does it for Pakistan with fractured finger

ಲಂಡನ್‌, ಜುಲೈ 01: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಎಲ್ಲಾ ತಂಡಗಳು ಗಾಯದ ಸಮಸ್ಯೆಗಳ ಹೊಡೆತಕ್ಕೆ ತುತ್ತಾಗಿವೆ. ಇದೇ ವೇಳೆ ಪಾಕಿಸ್ತಾನದ ಪ್ರಮುಖ ವೇಗಿ ವಹಾಬ್‌ ರಿಯಾಝ್‌ ಕೂಡ ಗಾಯದ ಸಮಸ್ಯೆ ಎದುರಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಅಂದಹಾಗೆ ಶನಿವಾರ ನಡೆದ ಅಫಘಾನಿಸ್ತಾನ ವಿರುದ್ಧದ ಪಂದ್ಯದಕ್ಕೂ ಮೊದಲೇ ಕೈಬೆರಳಿನ ಮೂಳೆ ಮುರಿದುಕೊಂಡಿದ್ದ ವಹಾಬ್‌, ಗಾಯವನ್ನು ಬದಿಗೊತ್ತುವ ಮೂಲಕ ಎಂಟು ಓವರ್‌ ಬೌಲ್‌ ಮಾಡಿ ಕೇವಲ 29 ರನ್‌ ನೀಡಿ 2 ವಿಕೆಟ್‌ ಪಡೆದರಲ್ಲದೆ, ಬ್ಯಾಟಿಂಗ್‌ನಲ್ಲೂ ತಲಾ ಒಂದು ಸಿಕ್ಸರ್‌ ಮತ್ತು ಫೋರ್‌ನೊಂದಿಗೆ 9 ಎಸೆತಗಳಲ್ಲಿ ಅಜೇಯ 15 ರನ್‌ಗಳನ್ನು ಗಳಿಸಿ ಇಮಾದ್‌ ವಾಸಿಂ (ಅಜೇಯ 49) ಅವರೊಟ್ಟಿಗೆ ಅದ್ಭುತ ಜೊತೆಯಾಟದ ಮೂಲಕ ಅಫಘಾನಿಸ್ತಾನ ವಿರುದ್ಧ ಪಾಕ್‌ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದರು.

ಕ್ರಿಕೆಟ್‌ ಇತಿಹಾಸದಲ್ಲಿ ಈ ಹಿಂದೆಯೇ ಆಟಗಾರರು ಗಾಯಗೊಂಡರೂ ತಂಡದ ಗೆಲುವಿಗಾಗಿ ಸರ್ವವನ್ನೂ ಪಣಕ್ಕಿಟ್ಟು ಆಡಿದ ಉದಾಹರಣೆಗಳಿವೆ. ವೆಸ್ಟ್‌ ಇಂಡೀಸ್‌ ತಂಡದ ಪರ ಮಾಲ್ಕಮ್‌ ಮಾರ್ಷಲ್‌ ಕೈ ಮೂಳೆ ಮುರಿದರೂ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಮಾಡಿ ಮೆಚ್ಚುಗೆ ಗಿಟ್ಟಿಸಿದ್ದರು. ಇನ್ನು ಕನ್ನಡಿಗ ಅನಿಲ್‌ ಕುಂಬ್ಳೆ ದವಡೆ ಮೂಳೆ ಮುರಿದರೂ ಬ್ಯಾಂಡೇಜ್‌ ಧರಿಸಿ ಆಡುವ ಮೂಲಕ ಸಹ ಆಟಗಾರರಿಗೆ ಸ್ಫೂರ್ತಿಯಾಗಿದ್ದರು. ಇದೀಗ ಈ ಸಾಲಿಗೆ ವಹಾಬ್‌ ರಿಯಾಝ್‌ ಕೂಡ ಸೇರ್ಪಡೆಯಾಗಿದ್ದಾರೆ.

"ಇದನ್ನು ಹೇಳಬಾರದು. ಆದರೆ, ಈ ವಿಚಾರವಾಗಿ ಸಾಕಷ್ಟು ಚರ್ಚೆ ಶುರುವಾಗಿದೆ. ವಹಾಬ್‌ ಭಾಯ್‌ ಕೈಬೆರಳು ಮುರಿದಿದ್ದರೂ ಆಟವಾಡಿದ್ದರು. ಮೂಳೆ ಮುರಿದಿದ್ದರೂ ಅವರು ಬೌಲಿಂಗ್‌ ಮಾಡಿದರಲ್ಲದೆ, ಬ್ಯಾಟಿಂಗ್‌ನಲ್ಲಿ ಸಿಕ್ಸ್‌ ಮತ್ತು ಫೋರ್‌ ಹೊಡೆದರು. ಅವರ ಇನಿಂಗ್ಸ್‌ ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಪಾಕಿಸ್ತಾನ ತಂಡಕ್ಕಾಗಿ ಅವರ ಈ ಸೇವೆಗೆ ನನ್ನ ಸಲಾಮ್‌,'' ಎಂದು ಪಾಕ್‌ ತಂಡದ ಆಲ್‌ರೌಂಡರ್‌ ಇಮಾದ್‌ ವಾಸಿಂ ಹೇಳಿದ್ದಾರೆ.

Story first published: Monday, July 1, 2019, 17:46 [IST]
Other articles published on Jul 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+