For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಜಯ

World Cup 2019: West Indies beat New Zealand by 91 runs in warm-up game

ಬ್ರಿಸ್ಟೋಲ್‌, ಮೇ 28: ಶೇಯ್‌ ಹೋಪ್‌ (101) ಅವರ ಶತಕದೊಂದಿಗೆ ಬ್ಯಾಟಿಂಗ್‌ ಪರಾಕ್ರಮ ಮೆರೆದ ವೆಸ್ಟ್‌ ಇಂಡೀಸ್‌ ತಂಡ ಇಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್‌ ವಿರುದ್ಧ 91 ರನ್‌ಗಳ ಭರ್ಜರಿ ಜಯ ದಾಖಲಿಸಿತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಪ್ರಿಡಿಕ್ಷನ್‌

ಇಲ್ಲಿನ ಕೌಂಟಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವೆಸ್ಟ್‌ ಇಂಡೀಸ್‌ ತಂಡ 49.2 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡರೂ ಬರೋಬ್ಬರಿ 421 ರನ್‌ಗಳ ಬೃಹತ್‌ ಮೊತ್ತವನ್ನೇ ದಾಖಲಿಸಿತ್ತು. ಎಲ್ಲಾ ಬೌಲರ್‌ಗಳು ಬೆಂಡೆತ್ತಿಸಿಕೊಂಡರೆ, ಗಮನಾರ್ಹ ಬೌಲಿಂಗ್‌ ಪ್ರದರ್ಶಿಸಿದ ಎಡಗೈ ವೇಗಿ ಟ್ರೆಂಟ್‌ ಬೌಲ್ಟ್‌ 50ಕ್ಕೆ 4 ವಿಕೆಟ್‌ಗಳನ್ನು ಉರುಳಿಸಿ ವಿಶ್ವಕಪ್‌ಗೆ ಭರ್ಜರಿ ಸಿದ್ದತೆ ಕೈಗೊಂಡಿದ್ದಾರೆ.

ಬಳಿಕ ಗೆಲುವು ಅಸಾಧ್ಯವಾಗಿದ್ದ ಗುರಿಯನ್ನು ಬೆನ್ನತ್ತಿದ ಕಳೆದ ಬಾರಿ ವಿಶ್ವಕಪ್‌ ರನ್ನರ್ಸ್‌ಅಪ್‌ ತಂಡ ನ್ಯೂಜಿಲೆಂಡ್‌, 47.2 ಓವರ್‌ಗಳಲ್ಲಿ 330 ರನ್‌ಗಳಿಗೆ ಆಲ್‌ಔಟ್‌ ಆಯಿತು. ನ್ಯೂಜಿಲೆಂಡ್‌ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಈ ಬಾರಿಯ ಪ್ರಶಸ್ತಿ ಫೇವರಿಟ್‌ ಭಾರತ ವಿರುದ್ಧ 6 ವಿಕೆಟ್‌ ಜಯ ದಾಖಲಿಸಿತ್ತು. ಆದರೆಮ ವೆಸ್ಟ್‌ ಇಂಡೀಸ್‌ನ ಬ್ಯಾಟಿಂಗ್‌ ವೈಭವದ ಎದುರು ಮಂಗಳವಾರ ಸೋಲೊಪ್ಪಿಕೊಂಡಿತು.

ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಪರ ಶೇಯ್‌ ಹೋಪ್‌, 86 ಎಸೆತಗಳಲ್ಲಿ 8 ಫೋರ್‌ ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡ 11 ರನ್‌ಗಳನ್ನು ಸಿಡಿಸಿ , ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಸದ್ಭುತ ಫಾರ್ಮ್‌ ಮುಂದುವರಿಸಿದ್ದಾರೆ. ಮತ್ತೊಂದೆಡೆ ನ್ಯೂಜಿಲೆಂಡ್‌ ಪರ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಟಾಮ್‌ ಬ್ಲಂಡಲ್‌ 89 ಎಸೆತಗಳಲ್ಲಿ 8 ಫೋರ್‌ ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡ 106 ರನ್‌ಗಳನ್ನು ಸಿಡಿಸಿದರಾದರೂ, ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡ ಜೂನ್‌ 1ರಂದು (ಶನಿವಾರ) ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದ್ದು, ವೆಸ್ಟ್‌ ಇಂಡೀಸ್‌ ತಂಡ ಮೇ 31ರಂದು (ಶುಕ್ರವಾರ) ಪಾಕಿಸ್ತಾನ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್‌ ಇಂಡೀಸ್‌: 49.2 ಓವರ್‌ಗಳಲ್ಲಿ 421/10 (ಕ್ರಿಸ್‌ ಗೇಲ್‌ 36, ಎವಿನ್‌ ಲೂಯಿಸ್‌ 50, ಶೇಯ್‌ ಹೋಪ್‌ 101, ಜೇಸನ್‌ ಹೋಲ್ಡರ್‌ 47, ಆಂಡ್ರೆ ರಸೆಲ್‌ 54; ಟ್ರೆಂಟ್‌ ಬೌಲ್ಟ್‌ 50ಕ್ಕೆ 4).

ನ್ಯೂಜಿಲೆಂಡ್‌: 47.2 ಓವರ್‌ಗಳಲ್ಲಿ 330/10 (ಕೇನ್‌ ವಿಲಿಯಮ್ಸನ್‌ 85, ಟಾಮ್‌ ಬ್ಲಂಡಲ್‌ 106, ಇಶ್‌ ಸೋಧಿ 39; ಕಾರ್ಲೋಸ್‌ ಬ್ರಾತ್‌ವೇಟ್‌ 75ಕ್ಕೆ 3, ಫಾಬಿಯಾನ್‌ ಆಲೆನ್‌ 47ಕ್ಕೆ 2).

Story first published: Tuesday, May 28, 2019, 23:52 [IST]
Other articles published on May 28, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+