ಭಾರತ vs ವಿಂಡೀಸ್: ಹಿಂದಿನ ವಿಶ್ವಕಪ್ ಕದನಗಳಲ್ಲಿ ಮೇಲುಗೈ ಯಾರದ್ದು?!

ಮ್ಯಾನ್ಚೆಸ್ಟರ್, ಜೂನ್ 27: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರಲ್ಲಿ ಏಕಮಾತ್ರ ಅಜೇಯ ತಂಡವಾಗಿ ಉಳಿದಿರುವ ಟೀಮ್ ಇಂಡಿಯಾ ಗುರುವಾರ (ಜೂನ್ 27) ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ನಲ್ಲಿ ವೆಸ್ಟ್ ಇಂಡೀಸ್ ಸವಾಲು ಸ್ವೀಕರಿಸಲಿದೆ. ತಲಾ 2 ಸಾರಿ ವಿಶ್ವಕಪ್ ಗೆದ್ದಿರುವ ಇತ್ತಂಡಗಳ ಕದನ ಕುತೂಹಲ ಮೂಡಿಸಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಭಾರತ ಇಲ್ಲೀವರೆಗೆ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 1 ಪಂದ್ಯ ರದ್ದಾಗಿತ್ತು. ವೆಸ್ಟ್ ಇಂಡೀಸ್ 6ರಲ್ಲಿ ಕೇವಲ 1 ಪಂದ್ಯ ಗೆದ್ದು, 1 ಪಂದ್ಯ ರದ್ದು, 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಆದರೆ ವೆಸ್ಟ್ ಇಂಡೀಸ್ ತಂಡ +0.190 ನೆಟ್ ರನ್ ರೇಟ್ ಹೊದಿರುವುದರಿಂದ ಸೆಮಿಫೈನಲ್ ಪ್ರವೇಶದ ಆಶಾಭಾವನೆ ಉಳಿಸಿಕೊಂಡಿದೆ.
ವೆಸ್ಟ್ ಇಂಡೀಸ್ vs ಭಾರತ, ಜೂನ್ 27, Live ಸ್ಕೋರ್‌ಕಾರ್ಡ್
ಭಾರತ ವಿರುದ್ಧದ ಪಂದ್ಯವನ್ನು ಗೆದ್ದರೆ ವೆಸ್ಟ್ ಇಂಡೀಸ್‌ನ ನೆಟ್ ರನ್ ರೇಟ್ ಇನ್ನೂ ಚೇತರಿಕೆ ಕಾಣಲಿದೆ. ಹೀಗಾಗಿ ಈ ಪಂದ್ಯದ ಗೆಲುವು ಕೆರಿಬಿಯನ್ನರ ಪಾಲಿಗೆ ಅನಿವಾರ್ಯವಾಗಿದೆ. ಹಾಗಂತ ಭಾರತವೂ ಪಂದ್ಯ ಸೋತು ಇಕ್ಕಟ್ಟಿಗೆ ಸಿಲುಕಲು ತಯಾರಿಲ್ಲ. ಹೀಗಾಗಿಯೇ ಪಂದ್ಯ ಕುತೂಹಲಕಾರಿಯೆನಿಸಿದೆ.
ಭಾರತ-ವೆಸ್ಟ್ ಇಂಡೀಸ್ ಹಿಂದಿನ ವಿಶ್ವಕಪ್ ಮುಖಾಮುಖಿಗಳನ್ನು ಗಮನಿಸಿದರೆ ಭಾರತವೇ ಮೇಲುಗೈ ಸಾಧಿಸಿದ್ದು ಕಂಡುಬರುತ್ತದೆ. ಎರಡೂ ತಂಡಗಳು ಒಟ್ಟು 8 ಸಾರಿ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 5 ಪಂದ್ಯದಲ್ಲಿ, ವಿಂಡೀಸ್ 3 ಪಂದ್ಯಗಳಲ್ಲಿ ಗೆಲುವನ್ನಾಚರಿಸಿತ್ತು.
ಸದ್ಯ ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿ, ವೆಸ್ಟ್ ಇಂಡೀಸ್ 8ನೇ ಸ್ಥಾನದಲ್ಲಿದೆ. ಮಳೆಯ ತೊಂದರೆಯಿಲ್ಲದೆ ಪಂದ್ಯ ನಡೆದರೆ ಭಾರತ ಗೆಲ್ಲುವ ನಿರೀಕ್ಷೆ ಹೆಚ್ಚು. ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾಗೆ ದಾಖಲೆ ಬರೆಯಲು ಅವಕಾಶಗಳಿಗೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications