Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ 2019: ಭಾರತ-ವಿಂಡೀಸ್ vs ಮಳೆ, ಯಾರ ಆಟ ನಡೆಯಲಿದೆ?!

World Cup 2019: West Indies vs India, Match 34-Preview

ಮ್ಯಾನ್ಚೆಸ್ಟರ್, ಜೂನ್ 27: ಏಕದಿನ ವಿಶ್ವಕಪ್ ನಲ್ಲಿ ಎರಡು ಸಾರಿ ಚಾಂಪಿಯನ್ ಎನಿಸಿರುವ ತಂಡಗಳಾದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು (ಜೂನ್ 27) ಕುತೂಹಲಕಾರಿ ಕದನ ನಡೆಯಲಿದೆ. ಆದರೆ ಇತ್ತಂಡಗಳ ಪಂದ್ಯ ನಡೆಯುತ್ತಾ ಇಲ್ಲ ಮಳೆ ಆಟ ಶುರು ಮಾಡುತ್ತಾ?!

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಲಭ್ಯ ಹವಾಮಾನ ಮಾಹಿತಿ ಪ್ರಕಾರ ವೆಸ್ಟ್ ಇಂಡೀಸ್ vs ಭಾರತ ಪಂದ್ಯವೇ ನಡೆಯಲಿದೆ. ಬುಧವಾರ (ಜೂನ್ 26) ಮಳೆಯ ಕಾರಣಕ್ಕಾಗಿ ಪಾಕಿಸ್ತಾನ-ನ್ಯೂಜಿಲೆಂಡ್ ಪಂದ್ಯದ ಟಾಸ್ ವಿಳಂಬವಾಗಿತ್ತು. ಗುರುವಾರದ ಪಂದ್ಯಕ್ಕೂ ಮಳೆ ಅಡ್ಡಿಪಡಿಸಲಿದೆ ಎಂದು ಭಾವಿಸಲಾಗಿತ್ತು. ಆದರೆ ಸದ್ಯದ ಮಾಹಿತಿಯಂತೆ ಭಾರತ-ವಿಂಡೀಸ್ ಪಂದ್ಯಕ್ಕೆ ಮಳೆಯ ಭೀತಿಯಿಲ್ಲ.

ವೆಸ್ಟ್ ಇಂಡೀಸ್ vs ಭಾರತ, ಜೂನ್ 27, Live ಸ್ಕೋರ್‌ಕಾರ್ಡ್

1
43677

ವಿರಾಟ್ ಕೊಹ್ಲಿ ಬಳಗ ಈವರೆಗೆ ಆಡಿರುವ ಯಾವ ಪಂದ್ಯಗಳಲ್ಲೂ ಸೋತಿಲ್ಲ. 5ರಲ್ಲಿ 4 ಗೆಲುವುಗಳೊಂದಿಗೆ ಭಾರತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡ 6ರಲ್ಲಿ ಒಂದೇ ಗೆಲುವು ದಾಖಲಿಸಿದ್ದು, 8ನೇ ಸ್ಥಾನದಲ್ಲಿದೆ.

ಹಿಂದಿನ ವಿಶ್ವಕಪ್ ಮುಖಾಮುಖಿಗಳಲ್ಲಿ 8 ಪಂದ್ಯಗಳಲ್ಲಿ ಭಾರತ 5ರಲ್ಲಿ ಜಯ ಗಳಿಸಿತ್ತು. ಇಂದಿನ ಪಂದ್ಯದಲ್ಲೂ ಕೊಹ್ಲಿ ಪಡೆ ಜೇಸನ್ ಹೋಲ್ಡರ್ ಬಳಗವನ್ನು ಸೋಲಿಸುವ ನಿರೀಕ್ಷೆಯಿದೆ. ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ 34ನೇ ಪಂದ್ಯ ಎಣಿಕೆಯಂತೆ ಮಳೆ ಬಾರದಿದ್ದರೆ ಮಾಮೂಲಿ 3 pmಗೆ ಆರಂಭಗೊಳ್ಳಲಿದೆ.

ವೆಸ್ಟ್ ಇಂಡೀಸ್ ತಂಡ: ಕ್ರಿಸ್ ಗೇಲ್, ಎವಿನ್ ಲೆವಿಸ್, ಶೈ ಹೋಪ್, ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೈಯರ್, ಜೇಸನ್ ಹೋಲ್ಡರ್, ಕಾರ್ಲೋಸ್ ಬ್ರಾಥ್‌ವೇಟ್, ಆ್ಯಶ್ಲೇ ನರ್ಸ್, ಶೆಲ್ಡನ್ ಕಾಟ್ರೇಲ್, ಕೆಮರ್ ರೋಚ್, ಓಶಾನೆ ಥಾಮಸ್.

ಭಾರತ ತಂಡ: ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ವಿಜಯ್ ಶಂಕರ್, ಎಂ.ಎಸ್. ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್‌ ಬೂಮ್ರಾ.

{headtohead_cricket_3_8}

Story first published: Thursday, June 27, 2019, 13:04 [IST]
Other articles published on Jun 27, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+