14 ಪಂದ್ಯಗಳು, 4 ವಿಶ್ವದಾಖಲೆಗಳು: ಈ ಬಾರಿಯ ವಿಶ್ವಕಪ್‌ನಲ್ಲಿ ಈವರೆಗೆ ಮುರಿದ ವಿಶ್ವದಾಖಲೆಗಳಿದು!
ಭಾರತದ ಆತಿಥ್ಯದಲ್ಲಿ ಐಸಿಸಿ ವಿಶ್ವಕಪ್ ಟೂರ್ನಿ ಭರ್ಜರಿಯಾಗಿ ಸಾಗುತ್ತಿದೆ. ಟೀಮ್ ಇಂಡಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ತಂಡಗಳು ಈವರೆಗಿನ ಸೆಣಸಾಟದಲ್ಲಿ ಭಾರೀ ಯಶಸ್ಸು ಸಾಧಿಸಿ ಎಲ್ಲರ ಗಮನಸೆಳೆಯುತ್ತಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳು ಭಾರೀ ಕಳಪೆ ಪ್ರದರ್ಶನ ನೀಡುತ್ತಿದ್ದು ಭಾರೀ ಹಿನ್ನಡೆಯಲ್ಲಿದೆ. ಪಂದ್ಯಗಳು ಮತ್ತಷ್ಟು ತೀವ್ರವಾಗಲಿದ್ದು ಮುಂದಿನ ದಿನಗಳಲ್ಲಿ ಈ ಕಾದಾಟ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಇನ್ನು ಈ ಟೂರ್ನಿಯಲ್ಲಿ ಈಗಾಗಲೇ 14 ಪಂದ್ಯಗಳು ಆಯೋಜನೆಯಾಗಿದ್ದು ಸಾಕಷ್ಟು ಮನರಂಜನೆ ಅಭಿಮಾನಿಗಳಿಗೆ ದೊರೆತಿದೆ. ಇದೇ ಸಂದರ್ಭದಲ್ಲಿ ಈಗಾಗಲೇ ಕೆಲ ಪ್ರಮುಖ ವಿಶ್ವದಾಖಲೆಗಳು ಭಗ್ನವಾಗಿದ್ದು ಹೊಸ ವಿಶ್ವದಾಖಲೆಗಳು ಬರೆಯಲ್ಪಟ್ಟಿದೆ. ಈ ವರದಿಯಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಮುರಿಯಲ್ಪಟ್ಟ ನಾಲ್ಕು ಪ್ರಮುಖ ವಿಶ್ವದಾಖಲೆಗಳ ಪಟ್ಟಿಯ ವಿವರವಿದೆ. ಮುಂದೆ ಓದಿ..

ದಾಖಲೆ 1: ವಿಶ್ವಕಪ್‌ನಲ್ಲಿ ಅತಿ ಹೆಚ್ಚಿನ ಸ್ಕೋರ್
ವಿಶ್ವಕಪ್ ಟೂರ್ನಿಯ ಒಂದು ಇನ್ನಿಂಗ್ಸ್‌ನಲ್ಲಿ ಇದಕ್ಕೂ ಮುನ್ನ 417/6 ಅತಿ ಹೆಚ್ಚಿನ ಸ್ಕೋರ್ ಎನಿಸಿಕೊಂಡಿತ್ತು. 2015ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನದ ವಿರುದ್ಧ ಈ ದಾಖಲೆ ಬರೆದುಕೊಂಡಿತ್ತು. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಈ ದಾಖಲೆಯನ್ನು ಮುರಿದಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬರೊಬ್ಬರಿ 428/5 ರನ್‌ಗಳನ್ನು ಕಲೆಹಾಕಿತು. ಇದು ಈಗ ವಿಶ್ವಕಪ್‌ನ ಅತಿ ಹೆಚ್ಚಿನ ಸ್ಕೋರ್ ಎನಿಸಿಕೊಂಡಿದೆ. ಇನ್ನು ದಕ್ಷಿಣ ಆಫ್ರಿಕಾ ವಿಶ್ವಕಪ್‌ನಲ್ಲಿ ಈ ಮೂಲಕ ಮೂರನೇ ಬಾರಿಗೆ 400ಕ್ಕೂ ಅಧಿಕ ರನ್‌ಗಳನ್ನು ದಾಖಲಿಸಿದಂತಾಗಿದೆ.
ದಾಖಲೆ 2: ವಿಶ್ವಕಪ್‌ನ ಅತಿ ಹೆಚ್ಚಿನ ರನ್ ಚೇಸ್!!
ಇನ್ನು ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಬೆನ್ನಟ್ಟಿ ಗೆಲುವು ಸಾಧಿಸಿದ ದಾಖಲೆ ಕೂಡ ಈ ವಿಶ್ವಕಪ್‌ನಲ್ಲಿ ಮುರಿಯಲ್ಪಟ್ಟಿದೆ. ಇದಕ್ಕೂ ಮುನ್ನ ಐರ್ಲೆಂಡ್ ತಂಡ 2011ರಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಬೆಂಗಳೂರಿನಲ್ಲಿ 330 ರನ್‌ಗಳನ್ನು ಬೆನ್ನಟ್ಟಿದ್ದು ವಿಶ್ವದಾಖಲೆಯಾಗಿ ಉಳಿದುಕೊಂಡಿತ್ತು. ಆದರೆ ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿ ಪಾಕ್ ಪಡೆ ದಾಖಲೆ ಬರೆದಿದೆ. 48.2 ಓವರ್‌ಗಳಲ್ಲಿ ಪಾಕಿಸ್ತಾನ ತಂಡ 345/5 ರನ್‌ಗಳನ್ನು ಬೆನ್ನಟ್ಟು ಮೂಲಕ ಈ ವಿಶ್ವದಾಖಲೆ ನಿರ್ಮಿಸಿದೆ.
ದಾಖಲೆ 3:ಅತಿ ವೇಗದ ಶತಕ
ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ಐರ್ಲೆಂಡ್‌ನ ಕೆವಿನ್ ಒಬ್ರಿಯಾನ್ ಹೆಸರಿನಲ್ಲಿತ್ತು. 2011ರ ವಿಶ್ವಕಪ್‌ನಲ್ಲಿ ಕೆವಿನ್ ಇಂಗ್ಲೆಂಡ್ ವಿರುದ್ಧ 50 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆ ಬರೆದಿದ್ದರು. ಆದರೆ ಈ ದಾಖಲೆಯನ್ನು ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್ ಮುರಿದಿದ್ದಾರೆ. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಮಾರ್ಕ್ರಮ್ 49 ಎಸೆತಗಳಲ್ಲಿ ಶತಕ ಸಿಡಿಸಿ ಈ ದಾಖಲೆ ಬರೆದುಕೊಂಡಿದ್ದಾರೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 428/5 ರನ್‌ಗಳನ್ನು ದಾಖಲಿಸಿದೆ.
ದಾಖಲೆ 4: ವಿಶ್ವಕಪ್‌ನಲ್ಲಿ ಅತೀ ಹೆಚ್ಚಿನ ಶತಕ
ಈ ಬಾರಿಯ ವಿಶ್ವಕಪ್ ಟೂರ್ನಿಗೂ ಮುನ್ನ ಭಾರತದ ರೋಹಿತ್ ಶರ್ಮಾ ಹಾಗೂ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ 6 ಶತಕ ಸಿಡಿಸಿ ಸಮಸ್ಥಾನದಲ್ಲಿದ್ದರು. ಸಚಿನ್ ತೆಂಡೂಲ್ಕರ್ 44 ವಿಶ್ವಕಪ್ ಇನ್ನಿಂಗ್ಸ್‌ಗಳಲ್ಲಿ 6 ಶತಕ ಸಿಡಿಸಿದ್ದರೆ ರೋಹಿತ್ ಶರ್ಮಾ ಕೇವಲ 18 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಆದರೆ ದೆಹಲಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ ಶತಕ ಸಿಡಿಸಿ 7ನೇ ವಿಶ್ವಕಪ್ ಶತಕ ಸಿಡಿಸಿದಂತಾಗಿದೆ. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿರುವ ರೋಹಿತ್ ಶರ್ಮಾ ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications