World Cup 2023: ಅಫ್ಘಾನಿಸ್ತಾನ vs ನೆದರ್ಲ್ಯಾಂಡ್ಸ್ ಪಂದ್ಯದ ವಿವರ, ಹೆಡ್-ಟು-ಹೆಡ್ ದಾಖಲೆ; ಸಂಭಾವ್ಯ ಆಡುವ ಬಳಗ
ಶುಕ್ರವಾರ, ನವೆಂಬರ್ 3ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್‌ನ 34ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.
ಇದೂ ಕೂಡ ಹೊನಲು ಬೆಳಕಿನ ಪಂದ್ಯವಾಗಿದೆ ಮತ್ತು ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುತ್ತದೆ. ಆರು ಪಂದ್ಯಗಳಿಂದ 4 ಅಂಕಗಳೊಂದಿಗೆ ನೆದರ್ಲ್ಯಾಂಡ್ಸ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ಆರು ಪಂದ್ಯಗಳಿಂದ 6 ಅಂಕಗಳೊಂದಿಗೆ ಅಫ್ಘಾನಿಸ್ತಾನ 6ನೇ ಸ್ಥಾನದಲ್ಲಿದೆ.\

ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ತನ್ನ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ನೆದರ್ಲ್ಯಾಂಡ್ಸ್ 87 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಈ ಪಂದ್ಯಕ್ಕೆ ಬರುತ್ತಿದೆ.
ಮತ್ತೊಂದೆಡೆ, ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಅಫ್ಘಾನಿಸ್ತಾನ ತಂಡ 2023ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಏಕದಿನ ಕ್ರಿಕೆಟ್‌ನಲ್ಲಿ ನೆದರ್ಲ್ಯಾಂಡ್ಸ್ vs ಅಫ್ಘಾನಿಸ್ತಾನ ಹೆಡ್-ಟು-ಹೆಡ್ ದಾಖಲೆ
ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ಏಕದಿನ ಸ್ವರೂಪದಲ್ಲಿ ಒಂಬತ್ತು ಬಾರಿ ಮುಖಾಮುಖಿಯಾಗಿದ್ದು, ಅಫ್ಘಾನಿಸ್ತಾನ ತಂಡವು ಇದರಲ್ಲಿ 7-2 ಅಂತರದ ಮುನ್ನಡೆ ಸಾಧಿಸಿದೆ.

ಆಗಸ್ಟ್ 2009ರಲ್ಲಿ ನೆದರ್ಲ್ಯಾಂಡ್ಸ್ ತಂಡವು ಈ ಮುಖಾಮುಖಿಯ ಮೊದಲ ಪಂದ್ಯವನ್ನು ಗೆದ್ದಿತು. ಆದರೆ, ಅಫ್ಘಾನಿಸ್ತಾನ ತಂಡವು ನಂತರ ಪ್ರಾಬಲ್ಯ ಸಾಧಿಸಿದೆ.
ಏಕದಿನ ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್ vs ಅಫ್ಘಾನಿಸ್ತಾನ ಮುಖಾಮುಖಿ ದಾಖಲೆ
ನೆದರ್ಲ್ಯಾಂಡ್ಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಒಮ್ಮೆಯೂ ಮುಖಾಮುಖಿಯಾಗಿಲ್ಲ. ಉಭಯ ತಂಡಗಳು ಸೆಮಿಫೈನಲ್ ರೇಸ್‌ನಲ್ಲಿ ಜೀವಂತವಾಗಿರಲು ಬಯಸುತ್ತಿರುವ ಕಾರಣ ಶುಕ್ರವಾರ ಗೆಲುವು ದಾಖಲಿಸಲು ಎದುರು ನೋಡುತ್ತಿವೆ.
ಅಫ್ಘಾನಿಸ್ತಾನ vs ನೆದರ್ಲ್ಯಾಂಡ್ಸ್ ಸಂಭಾವ್ಯ ಆಡುವ 11ರ ಬಳಗ
ನೆದರ್ಲ್ಯಾಂಡ್ಸ್ ತಂಡ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಒ'ಡೌಡ್, ವೆಸ್ಲಿ ಬ್ಯಾರೆಸಿ, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ/ ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ಸೈಬ್ರಾಂಡ್ ಎಂಗೆಲ್‌ಬ್ರೆಕ್ಟ್, ಲೋಗನ್ ವ್ಯಾನ್ ಬೀಕ್, ರಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.
ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications