For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಪಂದ್ಯಕ್ಕೆ ಬಾಬರ್ ಅಜಂ ತಂಡದ ಸಂಭಾವ್ಯ ಆಡುವ ಬಳಗ

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಕೆಲವೇ ಕ್ಷಣಗಳು ಮಾತ್ರವೇ ಬಾಕಿಯಿದೆ. ಎರಡು ತಂಡಗಳು ಕೂಡ ಈ ಪಂದ್ಯದಲ್ಲಿ ಗೆಲುವಿಗಾಗಿ ಜಿದ್ದಿಗೆ ಬಿದ್ದು ಕಾದಾಟ ನಡೆಸಲಿದೆ. ಹಾಗಾಗಿ ಈ ಪಂದ್ಯದಲ್ಲಿ ಎರಡು ತಮಡಗಳ ಆಡುವ ಬಳಗ ಹೇಗಿರಲಿದೆ ಎನ್ನುವ ಕುತೂಹಲ ಸಹಜವಾಗಿಯೇ ಅಭಿಮಾನಿಗಳಲ್ಲಿದೆ.

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡ ಭಾರತದ ವಿರುದ್ಧದ ಪಂದ್ಯಕ್ಕೆ ಸತತ ಎರಡು ಗೆಲುವುಗಳೊಂದಿಗೆ ಆಗಮಿಸಿದೆ. ಮೊದಲಿಗೆ ನೆದರ್ಲೆಂಡ್ಸ್ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿದ್ದ ಪಾಕ್ ಬಳಿಕ ಶ್ರೀಲಂಕಾ ವಿರುದ್ಧ 300ಕ್ಕೂ ಅಧಿಕ ರನ್‌ಗಳ ಗುರಿಯನ್ನು ಬೆನ್ನಟ್ಟಿ ಭಾರೀ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಇದಕ್ಕೂ ಮುನ್ನ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದಾಗ ಭಾರತ ಎರಡು ಬಾರಿಯೂ ಪಾಕಿಸ್ತಾನ ತಂಡವನ್ನು ಮಣಿಸಿದೆ.

World cup 2023 : Babar Azam led Pakistan teams probable playing XI for match against India

ಹಾಗಾದರೆ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯಬಹುದಾದ ಪಾಕಿಸ್ಥಾನದ ಆಡುವ ಬಳಗ ಹೇಗಿರಲಿದೆ? ಇಲ್ಲಿದೆ ಸಂಭಾವ್ಯ ತಂಡ.

ಆರಂಭಿಕ ಆಟಗಾರರು
ಪಾಕಿಸ್ತಾನ ತಂಡದ ಆರಂಭಿಕ ಆಟಗಾರರಾಗಿ ಅಬ್ದುಲ್ ಶಫೀಕ್ ಹಾಗೂ ಇಮಾಮ್ ಉಲ್ ಹಕ್ ಕಣಕ್ಕಿಳಿಯುವುದು ಖಚಿತ. ಪ್ರತಿಭಾನ್ವಿತ ಆಟಗಾರರಾದ ಈ ಇಬ್ಬರು ತಂಡಕ್ಕೆ ಉತ್ತಮ ಆರಂಭ ನೀಡುವ ವಿಶ್ವಾಸದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಅಬ್ದುಲ್ ಶಫೀಕ್ 113 ರನ್‌ಗಳನ್ನು ಗಳಿಸಿದ್ದರು. ಅದೇ ಫಾರ್ಮ್ ಭಾರತದ ವಿರುದ್ಧವೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಇಮಾಮ್ ಉಲ್ ಹಕ್ ಫಾರ್ಮ್ ಕಂಡುಕೊಳ್ಳಬೇಕಿದೆ.

ಮಧ್ಯಮ ಕ್ರಮಾಂಕ: ಬಾಬರ್ ಆಜಮ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್
ಪಾಕಿಸ್ತಾನ ತಂಡದ ಬ್ಯಾಟಿಂಗ್ ಅಸ್ತ್ರ ತಂಡದ ನಾಯಕ ಬಾಬರ್ ಅಜಂ ಈ ಬಾರಿಯ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ವಿಫಲವಾಗಿದ್ದು ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಇನ್ನು ಏಕದಿನ ಮಾದರಿಯಲ್ಲಿ ಬಾಬರ್ ಅಜಂ ಪ್ರದರ್ಶನ ಭಾರತದ ವಿರುದ್ಧ ಕಳಪೆಯಾಗಿದೆ. ಹೀಗಾಗಿ ಪಾಕ್ ನಾಯಕ ಮೇಲೆ ಸಹಜವಾಗಿಯೇ ಒತ್ತಡವಿದೆ. ಇನ್ನು ಮೊಹಮ್ಮದ್ ರಿಜ್ವಾನ್ ಎರಡು ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ಒಂದು ಅರ್ಧ ಶತಕ ಹಾಗೂ ಒಂದು ಶತಕ ಬಾರಿಸಿ ಉತ್ತಮ ಲಯದಲ್ಲಿದ್ದಾರೆ. ಇನ್ನು ಸೌದ್ ಶಕೀಲ್ ಕೂಡ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

ಆಲ್‌ರೌಂಡರ್‌ಗಳು: ಇಫ್ತಿಕಾರ್ ಅಹ್ಮದ್, ಶದಬ್ ಖಾನ್, ಮೊಹಮ್ಮದ್ ನವಾಜ್
ಪಾಕಿಸ್ತಾನದ ಮೂವರು ಆಲ್‌ರೌಂಡರ್‌ಗಳ ಪ್ರದರ್ಶನ ಈವರೆಗೆ ಹೇಳುಕೊಳ್ಳುವಂತಿಲ್ಲ. ಶ್ರೀಲಂಕಾ ವಿರುದ್ಧ ಇಫ್ತಿಕಾರ್ ಅಹ್ಮದ್ ಅವರಿಂದ ಉತ್ತಮವಾಗ ಕ್ಯಾಮಿಯೋ ಪ್ರದರ್ಶನ ಬಂದಿತ್ತು. ಆದರೆ ಶದಬ್ ಖಾನ್ ಹಾಗೂ ಮೊಹಮ್ಮದ್ ಸವಾಜ್ ಅವರಿಂದ ಸಾಮರ್ಥ್ಯಕ್ಕೆ ತಕ್ಕನಾದ ಪ್ರದರ್ಶನ ಬಾರದಿರುವುದು ತಂಡದ ಒತ್ತಡ ಹೆಚ್ಚಿಸಿದೆ.

ಬೌಲರ್‌ಗಳು: ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್
ನಸೀಮ್ ಶಾ ಬದಲಿಗೆ ಹಸನ್ ಅಲಿ ವಿಶ್ವಕಪ್‌ನ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ವಿರುದ್ಧ ವಿಎಕಟ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರೂ ದುಬಾರಿಯಾಗಿದ್ದಾರೆ. ಇನ್ನು ಶಾಹೀನ್ ಶಾ ಅಫ್ರಿದಿ ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕನಾದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಹ್ಯಾರಿಸ್ ರೌಫ್ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ.

ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹಾರಿಸ್ ರೌಫ್

Story first published: Saturday, October 14, 2023, 11:17 [IST]
Other articles published on Oct 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+