For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್ ಅವರನ್ನು ಕೊಹ್ಲಿ ಈಗಾಗಲೇ ಮೀರಿದ್ದಾರೆ ಎಂದ ಮಾಜಿ ಕ್ರಿಕೆಟಿಗ

ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಲಯದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಪ್ರಸ್ತುತ 48 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆ 49 ಶತಕಗಳ ಸಾಧನೆಯನ್ನು ಹಿಂದಿಕ್ಕಲು ಕೇವಲ ಎರಡು ಶತಕಗಳಿಂದ ಹಿಂದಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಪ್ರಿಕಾದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಗ್ರೇಮ್ ಸ್ಮಿತ್ ಮಾತನಾಡಿದ್ದು ವಿರಾಟ್ ಕೊಹ್ಲಿ ಸಾಧನೆಯನ್ನು ಹಾಡಿಹೊಗಳಿದ್ದಾರೆ. ಇದೇ ಸಂದರ್ಭದಲ್ಲಿ ಕೊಹ್ಲಿ ಸಚಿನ್ ತೆಂಡೂಲ್ಕರ್ ಈಗಾಗಲೇ ಮೀರಿ ನಿಂತಿದ್ದಾರೆ ಎಂದಿದ್ದಾರೆ.

"ವಿರಾಟ್ ಕೊಹ್ಲಿಯ ವೃತ್ತಿ ಜೀವನ ನಿಜಕ್ಕೂ ಅಮೋಘ. ಅದರಲ್ಲೂ ಅವರ ಏಕದಿನ ಕ್ರಿಕೆಟ್‌ನ ದಾಖಲೆಗಳನ್ನು ಅಂಕಿಅಂಶಗಳನ್ನು ನೋಡಿದಾಗ ನಿಜಕ್ಕೂ ಅದ್ಭುತವೆನಿಸುತ್ತದೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಅವರಿಂದ ಬಂದಿರುವ ಗುಣಮಟ್ಟದ ಪ್ರದರ್ಶನವನ್ನು ನೋಡಿದಾಗ ನನ್ನ ಪ್ರಕಾರ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಮೀರಿ ನಿಂತಿದ್ದಾರೆ" ಎಂದಿದ್ದಾರೆ ದಕ್ಷಿಣ ಆಪ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್.

World Cup 2023: Graeme Smith Said Virat Kohli already exceeds Sachin Tendulkar

ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಲು ಕೊಹ್ಲಿ ಕೇವಲ ಒಂದು ಶತಕ ದೂರದಲ್ಲಿದ್ದಾರೆ. ಇನ್ನು ಈ ವರ್ಷ ಕೊಹ್ಲಿ 22 ಇನ್ನಿಂಗ್ಸ್‌ಗಳಲ್ಲಿ 966 ರನ್ ಗಳಿಸಿ ಅಬ್ಬರಿಸಿದ್ದು ಏಕದಿನ ಮಾದರಿಯಲ್ಲಿ ಈಗಾಗಲೇ ನಾಲ್ಕು ಶತಕ ಸಿಡಿಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಗ್ರೇಮ್ ಸ್ಮಿತ್ ರನ್ ಬೆನ್ನಟ್ಟುವಾಗ ವಿರಾಟ್ ಕೊಹ್ಲಿಯ ಪ್ರದರ್ಶನದ ಬಗ್ಗೆ ಮತ್ತಷ್ಟು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. "ವಿರಾಟ್ ಕೊಹ್ಲಿ ನಿಜಕ್ಕೂ ಅದ್ಭುತ ವಿಶೇಷವಾಗಿ ರನ್ ಬೆನ್ನಟ್ಟುವ ವಿಚಾರದಲ್ಲಿ. ಆತ ರನ್ ಚೇಸ್ ಮಾಡುವಾಗ ಎಂಥಾದ್ದೇ ಪರಿಸ್ಥಿತಿಯಿದ್ದರೂ ನಿಯಂತ್ರಣ ಸಾಧಿಸುವ ರೀತಿ ಅಮೋಘ. ಏಕದಿನ ಪಂದ್ಯವನ್ನು ಆಡುವ ಅವರ ಸಾಮರ್ಥ್ಯ ಮತ್ತು ಮ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಒತ್ತಡವನ್ನು ನಿರ್ವಹಿಸುವ ವಿಷಯದಲ್ಲಿ ರೋಹಿತ್ ಶರ್ಮಾ ಜೊತೆಗೆ ಕ್ರಮಾಂಕದ ಅಗ್ರಸ್ಥಾನದಲ್ಲಿರುವ ಪ್ರಮುಖ ವ್ಯಕ್ತಿಯಾಗಿದ್ದಾರೆ. ನಿಜಕ್ಕೂ ಆತ ಸೂಪರ್ ಸ್ಟಾರ್" ಎಂದು ವಿರಾಟ್ ಕೊಹ್ಲಿಯನ್ನು ಕೊಂಡಾಡಿದ್ದಾರೆ ಗ್ರೇಮ್ ಸ್ಮಿತ್.

ಈ ಬಾಎರಿಯ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರು ಕೂಡ ಅಮೋಘ ಫಾರ್ಮ್ ಪ್ರದರ್ಶಿಸಿದ್ದು ನಿರ್ಣಾಯಕ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಕಳೆದ ಆರು ಪಂದ್ಯಗಳಲ್ಲಿ ರೋಹಿತ್ ಶರ್ಮಾ 398 ರನ್ ಮತ್ತು ವಿರಾಟ್ ಕೊಹ್ಲಿ 354 ರನ್ ಗಳಿಸಿದ್ದು ಇಬ್ಬರು ದಿಗ್ಗಜ ಆಟಗಾರರು ಕ್ರಮವಾಗಿ 66.33 ಮತ್ತು 88.50ರ ಅದ್ಭುತವಾದ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ.

ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಅಮೋಘ ಪ್ರದರ್ಶನ ಮುಂದುವರಿದಿದೆ. ಆಡಿರುವ 6 ಪಂದ್ಯಗಳ ಪೈಕಿ ಆರು ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಗುರುವಾರ ಆಡಲಿದ್ದು ಆ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಸಿದ್ಧತೆ ಆರಂಭಿಸಿದೆ.

Story first published: Tuesday, October 31, 2023, 17:48 [IST]
Other articles published on Oct 31, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+