World Cup 2023: ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಗಾಯದ ಮೇಲೆ ಪಾಕಿಸ್ತಾನಕ್ಕೆ ದಂಡದ ಬರೆ ಹಾಕಿದ ಐಸಿಸಿ!
ಶುಕ್ರವಾರ, ಅಕ್ಟೋಬರ್ 27ರಂದು ಚೆನ್ನೈನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ರೋಚಕ ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡ 1 ವಿಕೆಟ್‌ನಿಂದ ಸೋಲು ಅನುಭವಿಸಿತು.
ತೆಂಬಾ ಬವುಮಾ ಪಡೆಗೆ ನೀಡಿದ್ದ 271 ರನ್‌ಗಳ ಗುರಿಯನ್ನು ರಕ್ಷಿಸಿಕೊಳ್ಳಲು ವಿಫಲವಾದ ಕಾರಣ ಬಾಬರ್ ಅಜಂ ಪಡೆ ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಸೋಲು ಕಂಡಿತು.
ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ ಐಸಿಸಿಯಿಂದ ದಂಡ ಹಾಕಿಸಿಕೊಂಡು, ಸೋಲಿನ ಗಾಯದ ಮೇಲೆ ಬರೆ ಹಾಕಿಸಿಕೊಂಡಂತಾಗಿದೆ ಪಾಕಿಸ್ತಾನ ಕ್ರಿಕೆಟ್ ತಂಡದ ಪರಿಸ್ಥಿತಿ.

ಕುಂಟುತ್ತಾ ಸಾಗುತ್ತಿರುವ ಪಾಕಿಸ್ತಾನ ತಂಡದ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಭಿಯಾನವು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್‌ಗೆ ಐಸಿಸಿಯಿಂದ ದಂಡದ ಶಿಕ್ಷೆ ಪಡೆಯುವುದರೊಂದಿಗೆ ಮತ್ತಷ್ಟು ಹೊಡೆತವನ್ನು ಪಡೆದುಕೊಂಡಿದೆ.
ಚೆನ್ನೈನಲ್ಲಿ ನಡೆದ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಸಮಯ ಮೀರಿದ್ದಾಗಲೂ ಪಾಕಿಸ್ತಾನ ತಂಡವು ಇನ್ನೂ 4 ಓವರ್‌ಗಳ ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿತು ಮತ್ತು ಪಾಕಿಸ್ತಾನ ಆಟಗಾರರ ಪಂದ್ಯದ ಶುಲ್ಕದ ಶೇಕಡಾ 20ರಷ್ಟು ದಂಡವನ್ನು ವಿಧಿಸಲಾಯಿತು.
ಚೆನ್ನೈನಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ನಾಲ್ಕು ಓವರ್‌ಗಳ ಕಡಿಮೆಯಿರುವುದು ಕಂಡುಬಂದಿದೆ ಮತ್ತು ಅವರ ಪಂದ್ಯದ ಶುಲ್ಕದ 20 ಪ್ರತಿಶತದಷ್ಟು ದಂಡವನ್ನು ಹಾಕಲಾಗಿದೆ ಎಂದು ಐಸಿಸಿ ಅಧಿಕೃತ ಸೈಟ್ ತಿಳಿಸಿದೆ.

"ಪಾಕಿಸ್ತಾನ ತಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಅಭಿಯಾನದ ದಕ್ಷಿಣ ಆಫ್ರಿಕಾ ವಿರುದ್ಧದ ಅವರ ಇತ್ತೀಚಿನ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್‌ಗೆ ದಂಡ ನೀಡುವುದರೊಂದಿಗೆ ಮತ್ತಷ್ಟು ಹೊಡೆತವನ್ನು ಪಡೆದುಕೊಂಡಿದೆ," ಎಂದು ಐಸಿಸಿಯ ಅಧಿಕೃತ ವೆಬ್‌ಸೈಟ್ ಬರೆದುಕೊಂಡಿದೆ.
ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯದ ಶುಲ್ಕದ ಶೇಕಡಾ 5ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಐಸಿಸಿ ನೀತಿ ಸಂಹಿತೆ ಹೇಳುತ್ತದೆ. ನಿಧಾನಗತಿಯ ಓವರ್ ರೇಟ್‌ಗೆ ಐಸಿಸಿ ವಿಧಿಸಿರುವ ದಂಡವನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಒಪ್ಪಿಕೊಂಡರು.
ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ಸೋತ ನಂತರ ಆನ್-ಫೀಲ್ಡ್ ಅಂಪೈರ್‌ಗಳಾದ ಅಲೆಕ್ಸ್ ವಾರ್ಫ್ ಮತ್ತು ಪಾಲ್ ರೀಫೆಲ್ ಅವರು ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ನಾಲ್ಕನೇ ಅಂಪೈರ್ ರಿಚರ್ಡ್ ಕೆಟಲ್‌ಬರೋ ಅವರಿಗೆ ಆರೋಪ ಸಲ್ಲಿಸಿದರು.
ಪಾಕಿಸ್ತಾನ ತಂಡವು ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಆರು ಪಂದ್ಯಗಳಿಂದ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಮೇಲುಗೈ ಸಾಧಿಸಿದೆ ಮತ್ತು 1992ರ ಚಾಂಪಿಯನ್ಸ್ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಯಾವುದೇ ಅವಕಾಶವನ್ನು ಪಡೆಯಲು ತಮ್ಮ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಮಂಗಳವಾರ, ಅಕ್ಟೋಬರ್ 31ರಂದು ಕೋಲ್ಕತ್ತಾದಲ್ಲಿ ಆಡಲಿದೆ. ಪಾಕಿಸ್ತಾನವು ಬಾಂಗ್ಲಾದೇಶ ತಂಡವನ್ನು ಎದುರಿಸುವ ಕಾರಣ ಗೆಲ್ಲಲೇಬೇಕಾದ ಮುಖಾಮುಖಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications