ಪಾಕಿಸ್ತಾನ ತಂಡದ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಸ್ಪೋಟಕ ಶತಕ ಸಿಡಿಸಿದ್ದಾರೆ. ಮಿಚೆಲ್ ಮಾರ್ಶ್ ಜೊತೆಗೂಡಿ ಭರ್ಜರಿ 259 ರನ್‌ಗಳ ಜೊತೆಯಾಟದಲ್ಲಿಯೂ ಡೇವಿಡ್ ವಾರ್ನರ್ ಭಾಗಿಯಾಗಿದ್ದು ಬರೊಬ್ಬರಿ 163 ರನ್‌ಗಳನ್ನು ಈ ಪಂದ್ಯದಲ್ಲಿ ಸಿಡಿಸಿದ್ದಾರೆ. ಈ ಅಮೋಘ ಪ್ರದರ್ಶನ ಪಾಕಿಸ್ತಾನದ ವಿರುದ್ಧ 62 ರನ್‌ಗಳ ಅಂತರದಿಂದ ಗೆಲುವು ಸಾಧಿಸಲು ಸಹಕಾರಿಯಾಗಿದೆ.
ಇನ್ನು ಈ ಪಂದ್ಯದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್ ಏಕದಿನ ಕ್ರಿಕೆಟ್‌ನಲ್ಲಿ ರನ್ ವೇಗವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎನ್ನುವುದನ್ನು ನಾನು ಐಪಿಎಲ್‌ನಿಂದ ಕಲಿತೆ ಎನ್ನುವ ಅಂಶವನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್‌ನಲ್ಲಿ ವಿಶೇಷವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾಗ ಅದನ್ನು ಅಳವಡಿಸಿಕೊಂಡಿದ್ದು ಏಕದಿನ ಕ್ರಿಕೆಟ್‌ನಲ್ಲಿ ಅದು ತನಗೆ ಹೆಚ್ಚು ಫಲ ನೀಡುತ್ತಿದೆ ಎಂದಿದ್ದಾರೆ ಡೇವಿಡ್ ವಾರ್ನರ್.

"ಟಿ20 ಮಾದರಿಯಲ್ಲಿ ಹೋಲಿಸಿದರೆ ಏಕದಿನ ಮಾದರಿಯಲ್ಲಿ ನಮಗೆ ಯೋಚಿಸಲು ಹೆಚ್ಚಿನ ಅವಕಾಶಗಳು ದೊರೆಯುತ್ತದೆ. ಇಲ್ಲಿ ಹಂತ ಹಂತವಾಗಿ ನಿಮ್ಮ ವೇಗವನ್ನು ಹೆಚ್ಚುಗೊಳಿಸುತ್ತಾ ಹೋಗಬಹುದು. ಐಪಿಎಲ್‌ನಿಂದಾಗಿ ನಾನು ಸಾಕಷ್ಟು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಇಲ್ಲಿ ಏಕದಿನ ಮಾದರಿಯಾಗಿರುವ ಕಾರಣ ಹೆಚ್ಚಿನ ಕಾಲಾವಕಾಶಗಳು ಯೋಚಲು ಮಾಡಲು ದೊರೆಯುತ್ತದೆ" ಎಂದಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ವಾರ್ನರ್ ಈ ಮೈದಾನದಲ್ಲಿ ಮತ್ತಷ್ಟು ಹೆಚ್ಚುನ ರನ್‌ಗಳಿಸುವ ಅವಕಾಶವಿತ್ತು. ನಾವು ಅದನ್ನು ಕೈಚೆಲ್ಲಿದ್ದೇವೆ. ಉತ್ತಮವಾಗಿ ಆಟವನ್ನು ಮುಂದುವರಿಸಿದ್ದರೆ ನಾನು ನಾಲ್ನೂರಕ್ಕೂ ಅಧಿಕ ರನ್‌ಗಳನ್ನು ಇಲ್ಲಿ ಗಳಿಸಬಹುದಾಗಿತ್ತು. ಆದರೆ ಅದು ಸಾರ್ಧಯವಾಗಲಿಲ್ಲ ಎಂದಿದ್ದಾರೆ.
ಆಸ್ಟ್ರೇಲಿಯಾದ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಶ್ ಇಬ್ಬರು ಕೂಡ ಬೃಹತ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಪಂದ್ಯದ ಆರಂಭದಲ್ಲಿ ಜೀವದಾನ ಪಡೆದ ವಾರ್ನರ್ ಈ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು. 124 ಎಸೆತಗಳನ್ನು ಎದುರಿಸಿದ ವಾರ್ನರ್ 163 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಅವರಿಗೆ ಅಮೋಘವಾಗಿ ಸಾಥ್ ನೀಡಿದ ಮಾರ್ಶ್ 108 ಎಸೆತಗಳಲ್ಲಿ 121 ರನ್‌ಗಳನ್ನು ಬಾರಿಸಿದರು.
ತಂಡದ ಮೊತ್ತ 259 ರನ್‌ಗಳಾಗಿದ್ದಾಗ ಮಿಚಲ್ ಮಾರ್ಶ್ ಔಟ್ ಆಗುವ ಮೂಲಕ ಈ ಜೋಡಿ ಬೇರ್ಪಟ್ಟಿತು. ಅದಾದ ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಮುಂದಿನ ಎಸೆತದಲ್ಲಿಉಏ ಔಟ್ ಆಗುವ ಮೂಲಕ ಪಾಕ್ ತಂಡಕ್ಕೆ ಮತ್ತೊಂದು ಮೇಲುಗೈ ದೊರೆಯಿತು. ಅದಾದ ಬಳಿಕ ಪಾಕಿಸ್ತಾನದ ಬೌಲರ್‌ಗಳು ಆಸ್ಟ್ರೇಲಿಯಾದ ವಿರುದ್ಧ ಉತ್ತಮವಾಗಿ ಮೇಲುಗೈ ಸಾಧಿಸಿದರು. ಡೇವಿಡ್ ವಾರ್ನರ್ 163 ರನ್‌ಗಳಿಗೆ ವಿಕೆಟ್ ಕಳೆದುಕೊಂಡ ನಂತರ ಪಾಕಿಸ್ತಾನ ತಂಡದ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸಿತು.
ಆಸ್ಟ್ರೇಲಿಯಾ ನೀಡಿದ 368 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ ಅದ್ಭುತ ಆರಂಭವನ್ನು ಪಡೆದುಕೊಂಡಿತು. ಮೊದಲ ವಿಕೆಟ್‌ಗೆ 134ನ್‌ಗಳ ಭರ್ಜರಿ ಆರಂಭವನ್ನು ಪಡೆದ ಪಾಕಿಸ್ತಾನ ದಿಟ್ಟವಾಗಿ ರನ್ ಬೆನ್ನಟ್ಟುವ ಮುನ್ಸೂಚನೆ ನೀಡಿತ್ತು. ಆದರೆ ಮಧ್ಯಮ ಕ್ರಮಾಂಕದಿಂದ ನಿರೀಕ್ಷಿರ ಬೆಂಬಲ ದೊರೆಯದ ಕಾರಣ 305 ರನ್‌ಗಳಿಗೆ ಪಾಕ್ ಆಲೌಟ್ ಆಗುವ ಮೂಲಕ ಸೋಲು ಅನುಭವಿಸಿದೆ.