World Cup 2023: ಶ್ರೀಲಂಕಾ ವಿರುದ್ಧ ಅಫ್ಘಾನ್ ಗೆಲುವನ್ನು ಭಜ್ಜಿ ಜೊತೆ ಡ್ಯಾನ್ಸ್ ಮೂಲಕ ಆಚರಿಸಿದ ಇರ್ಫಾನ್ ಪಠಾಣ್!
ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು ತಮ್ಮ ಮಾಜಿ ಸಹ ಆಟಗಾರ ಹಾಗೂ ಲೆಜೆಂಡರಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರೊಂದಿಗೆ ಡ್ಯಾನ್ಸ್ ಮಾಡುವ ಮೂಲಕ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ತಂಡದ ಗೆಲುವನ್ನು ಆಚರಿಸಿದರು.
ಸೋಮವಾರ, ಅಕ್ಟೋಬರ್ 30ರಂದು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.
ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಹರ್ಭಜನ್ ಸಿಂಗ್ ಜೊತೆ ಕಾಲು ಬಿಚ್ಚಿ ಇರ್ಫಾನ್ ಪಠಾಣ್ ಮತ್ತೊಮ್ಮೆ ತಮ್ಮ ನೃತ್ಯದ ಹೆಜ್ಜೆ ಹಾಕಿದರು. ಅಫ್ಘಾನಿಸ್ತಾನ ತಂಡದ ಗೆಲುವಿಗಾಗಿ ಅಭಿನಂದಿಸುತ್ತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನೃತ್ಯದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

"ಅಫ್ಘಾನಿಸ್ತಾನ ತಂಡದಿಂದ ಎಂತಹ ಅದ್ಭುತ ಗೆಲುವು. ವಿಶ್ವಕಪ್‌ನಲ್ಲಿ ನಿಮ್ಮ 3ನೇ ಗೆಲುವಿಗೆ ಅಭಿನಂದನೆಗಳು. 3 ಮಾಜಿ ವಿಶ್ವ ಚಾಂಪಿಯನ್‌ಗಳನ್ನು ಸೋಲಿಸಿದ್ದೀರಿ," ಎಂದು ಇರ್ಫಾನ್ ಪಠಾಣ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಗೆಲುವಿನೊಂದಿಗೆ, ಅಫ್ಘಾನಿಸ್ತಾನ ತಂಡವು 2023ರ ವಿಶ್ವಕಪ್ ಅಂಕಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿತು ಮತ್ತು ಸೆಮಿಫೈನಲ್ ರೇಸ್‌ನ ಸ್ಪರ್ಧಿಗಳಲ್ಲಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್, 1992ರ ಚಾಂಪಿಯನ್ ಪಾಕಿಸ್ತಾನ ಮತ್ತು 1996ರ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ತಂಡವು ಸದ್ಯ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಸೋಲಿಸುವ ಮೂಲಕ ದೈತ್ಯ ತಂಡಗಳಿಗೆ ಆಘಾತ ನೀಡಿದೆ.
ಇರ್ಫಾನ್ ಪಠಾಣ್ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿ, ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ ತಂಡ ಸಂಪೂರ್ಣ ನಿಯಂತ್ರಣದಲ್ಲಿತ್ತು ಎಂದು ಹೇಳಿದರು. ಪುಣೆಯಲ್ಲಿ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ 7 ವಿಕೆಟ್ ಮತ್ತು 20 ಎಸೆತಗಳು ಬಾಕಿ ಇರುವಂತೆಯೇ 242 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು.
"ಅಫ್ಘಾನಿಸ್ತಾನ ತಂಡದಿಂದ ಚೇಸಿಂಗ್ ಎಷ್ಟು ನಿಯಂತ್ರಿಸಲ್ಪಟ್ಟಿದೆಯೆಂದರೆ, ಪ್ರತಿ ಸಮಯದಲ್ಲಿ ಅವರು ಸಂಪೂರ್ಣ ನಿಯಂತ್ರಣದಲ್ಲಿದ್ದರು. ಇದು ವೃತ್ತಿಪರ ವಿಷಯವಾಗಿದೆ. ಭಾರತೀಯ ಪರಿಸ್ಥಿತಿಗಳಲ್ಲಿ ಸ್ಪಿನ್ ಚೆನ್ನಾಗಿ ಆಡುವುದು ಮತ್ತು ಚೆನ್ನಾಗಿ ಬೌಲ್ ಮಾಡುವುದು ಹೇಗೆ ಎಂದು ನಿಮಗೆ ತಿಳಿದಿದ್ದರೆ, ನೀವು ಆಟದಲ್ಲಿ ಇರುತ್ತೀರಿ. ಅಫ್ಘಾನ್‌ಗಳು ಖಂಡಿತವಾಗಿಯೂ ಈಗ ಆ ಗುಣಗಳನ್ನು ಹೊಂದಿದ್ದಾರೆ," ಎಂದು ಇರ್ಫಾನ್ ಪಠಾಣ್ ಪೋಸ್ಟ್ ಮಾಡಿದ್ದಾರೆ.
ಕಳೆದ ವಾರ ಪಾಕಿಸ್ತಾನ ವಿರುದ್ಧ ಗೆದ್ದ ನಂತರ ಇರ್ಫಾನ್ ಪಠಾಣ್ ಅವರು ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅವರೊಂದಿಗೆ ಡ್ಯಾನ್ಸ್ ಮಾಡಲು ಮೈದಾನಕ್ಕಿಳಿದಿದ್ದರು. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ತಂಡವು ನೆರೆಯ ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತ್ತು.
ಶ್ರೀಲಂಕಾ ವಿರುದ್ಧದ ಗೆಲುವಿನ ನಂತರ, ಅಫ್ಘಾನಿಸ್ತಾನ ತಂಡವು ತನ್ನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಗಮನವನ್ನು ಹರಿಸಲಿದೆ. ಶುಕ್ರವಾರ, ನವೆಂಬರ್ 3ರಂದು ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications