For Quick Alerts
ALLOW NOTIFICATIONS  
For Daily Alerts
 

World Cup 2023: ವಿಶ್ವಕಪ್‌ನಲ್ಲಿ ಈತನೇ ಭಾರತಕ್ಕೆ ಪ್ರಮುಖ ಪಾತ್ರ ವಹಿಸಲಿರುವ ಆಟಗಾರ; ವಾಸಿಂ ಜಾಫರ್

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಐಸಿಸಿ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಎಲ್ಲಾ ಹತ್ತು ತಂಡಗಳು ಈಗಾಗಲೇ ತಯಾರಿ ನಡೆಸಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 5ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

World Cup 2023: Jasprit Bumrah To Play Key Role For India In World Cup Says Wasim Jaffer

ಇನ್ನು ಅಕ್ಟೋಬರ್ 8ರಂದು ಟೀಂ ಇಂಡಿಯಾ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಅನಂತರ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವೂ ನಡೆಯಲಿದೆ.

ಇನ್ನು 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ವೇಗಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.

ಬೆನ್ನು ನೋವಿನ ಗಾಯದಿಂದಾಗಿ ಸೆಪ್ಟೆಂಬರ್ 2022ರಿಂದ ಜಸ್ಪ್ರೀತ್ ಬುಮ್ರಾ ಅವರು ಕ್ರಿಕೆಟ್‌ನಿಂದ ದೂರವಿದ್ದು, ಸದ್ಯ ಬೆಂಗಳೂರಿನ ಎನ್‌ಸಿಎನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚಿಗೆ ಬಿಸಿಸಿಐ ನವೀಕರಣದ ಪ್ರಕಾರ, 29 ವರ್ಷದ ವೇಗದ ಬೌಲರ್ ತನ್ನ ಪುನರ್ವಸತಿಯ ಅಂತಿಮ ಹಂತದಲ್ಲಿದ್ದಾರೆ ಮತ್ತು ನೆಟ್ಸ್‌ನಲ್ಲಿ ತನ್ನ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ.

ಜಿಯೋಸಿನಿಮಾದಲ್ಲಿ ನಡೆದ ಮಾತುಕತೆಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಪುನರಾಗಮನಕ್ಕಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳೂ ಹೆಚ್ಚು ಕಾಯಬೇಕೇ ಎಂದು ವಾಸಿಂ ಜಾಫರ್‌ಗೆ ಪ್ರಶ್ನಿಸಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ವಾಸಿಂ ಜಾಫರ್, 29 ವರ್ಷದ ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್ ದಾಳಿಯ ದೊಡ್ಡ ಭಾಗವಾಗಿದ್ದಾರೆ ಮತ್ತು ಪ್ರತಿಯೊಬ್ಬರೂ ಡೆತ್ ಓವರ್‌ಗಳಲ್ಲಿ ಅವರ ಬೌಲಿಂಗ್ ಕಳೆದುಕೊಳ್ಳುತ್ತಿದ್ದಾರೆ.

ಪುನರಾಗಮನ ಮಾಡಿದ ನಂತರ ಅದೇ ವೇಗದಲ್ಲಿ ಬೌಲಿಂಗ್ ಮಾಡಿದರೆ, ಅವರಿಗಿಂತ ಉತ್ತಮ ಯಾರೂ ಇರುವುದಿಲ್ಲ ಎಂದು ಭಾರತದ ಮಾಜಿ ಆರಂಭಿಕ ವಾಸಿಂ ಜಾಫರ್ ಅಭಿಪ್ರಾಯಪಟ್ಟರು.

"ಜಸ್ಪ್ರೀತ್ ಬುಮ್ರಾ ಭಾರತದ ಬೌಲಿಂಗ್ ದಾಳಿಯ ದೊಡ್ಡ ಭಾಗವಾಗಿದ್ದಾರೆ. ಅವರು ವಿಶ್ವಕಪ್‌ನಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಡೆತ್ ಓವರ್‌ಗಳಲ್ಲಿ ನಾವು ಈ ಇಡೀ ವರ್ಷ ಅವರನ್ನು ಕಳೆದುಕೊಂಡಿದ್ದೇವೆ," ಎಂದರು.

"ಆತ ಮತ್ತೆ ಫಿಟ್‌ನೆಸ್‌ಗೆ ಮರಳಬೇಕಾಗಿದ್ದು, ಅದೇ ವೇಗದಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗುವುದೇ ಎಂಬ ಪ್ರಶ್ನೆ ಎದುರಾಗಲಿದೆ. ಒಂದು ವೇಳೆ ಹಳೆಯ ಮೊನಚು ತೋರಿಸಿದರೆ, ಅದಕ್ಕಿಂತ ಉತ್ತಮವಾದದ್ದೇನೂ ಇರುವುದಿಲ್ಲ," ಎಂದು ವಾಸಿಂ ಜಾಫರ್ ತಿಳಿಸಿದರು.

ಎಲ್ಲಾ ಸ್ವರೂಪಗಳಿಗೆ ಜಸ್ಪ್ರೀತ್ ಬುಮ್ರಾ ಬಹಳ ಮುಖ್ಯ: ಇಶಾಂತ್ ಶರ್ಮಾ
ಇದೇ ವೇಳೆ ಭಾರತ ತಂಡದ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು ಮುಂಬರುವ 2023ರ ವಿಶ್ವಕಪ್‌ನಲ್ಲಿ ಭಾರತಕ್ಕೆ ಜಸ್ಪ್ರೀತ್ ಬುಮ್ರಾ ಅವರ ಮಹತ್ವದ ಬಗ್ಗೆ ಗಮನ ಸೆಳೆದರು.

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಎಲ್ಲಾ ಸ್ವರೂಪಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಬಹುದು ಮತ್ತು ಅವರು ತಮ್ಮ ಫಿಟ್‌ನೆಸ್ ಅನ್ನು ಮರಳಿ ಪಡೆಯಬೇಕಾಗಿದೆ ಎಂದರು.

"ಕೇವಲ ಒಂದು ಸ್ವರೂಪಕ್ಕಲ್ಲ, ಎಲ್ಲಾ ಫಾರ್ಮ್ಯಾಟ್‌ಗಳಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ವಿಶ್ವಕಪ್ ಪಂದ್ಯಾವಳಿಗೆ ಅವರು ಬಹಳ ಪ್ರಮುಖ ಆಟಗಾರರಾಗಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಭಾರತವನ್ನು ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ," ಎಂದು ಇಶಾಂತ್ ಶರ್ಮಾ ಹೇಳಿದರು.

"ಬುಮ್ರಾ ಹಿರಿಯ ಆಟಗಾರನೂ ಹೌದು. ಅವರು ಟೆಸ್ಟ್ ಪಂದ್ಯದಲ್ಲಿ ತಂಡದ ನಾಯಕರಾಗಿದ್ದರು. ಆದ್ದರಿಂದ ನನ್ನ ಪ್ರಕಾರ, ಜಸ್ಪ್ರೀತ್ ಬುಮ್ರಾ ವಿಶ್ವಕಪ್‌ನಲ್ಲಿ ಆಯ್ಕೆಯಾಗಬಹುದು. ಹಾಗಾಗಿ ಅವರು ಫಿಟ್ ಆಗುವುದು ಬಹಳ ಮುಖ್ಯ," ಎಂದು ಇಶಾಂತ್ ಶರ್ಮಾ ಅಭಿಪ್ರಾಯಪಟ್ಟರು.

Story first published: Sunday, July 23, 2023, 17:06 [IST]
Other articles published on Jul 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+