For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2023: ಭಾರತ vs ಪಾಕಿಸ್ತಾನ ಅಲ್ಲ, ಇದು ದೊಡ್ಡ ಪಂದ್ಯವಾಗಿರಲಿದೆ; ಸೌರವ್ ಗಂಗೂಲಿ

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ವಿಶ್ವದ ಪ್ರಮುಖ 10 ತಂಡಗಳು ಈ ದೊಡ್ಡ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.

ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ರೋಮಾಂಚಕಾರಿ ಪಂದ್ಯಗಳಲ್ಲಿ ಒಂದಾಗಿದೆ. ಆಧುನಿಕ ದಿನಗಳಲ್ಲಿ ಈ ತಂಡಗಳ ನಡುವಿನ ಪ್ರತಿ ಪಂದ್ಯವನ್ನು ನಿರೀಕ್ಷಿತ ಕುತೂಹಲ ಮತ್ತು ತೀವ್ರ ಪೈಪೋಟಿಯಿಂದ ಕೂಡಿರುತ್ತದೆ.

ವಿಶ್ವದ ಅತಿದೊಡ್ಡ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಏಕದಿನ ವಿಶ್ವಕಪ್ ವೇಳಾಪಟ್ಟಿಯಲ್ಲಿ ಇರಿಸಲಾಗಿದೆ. ಇದು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ.

World Cup 2023

1999 ಹಾಗೂ 2003ರಲ್ಲಿ ನಡೆದ ಹೈ-ವೋಲ್ಟೇಜ್ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಗಳ ಭಾಗವಾಗಿದ್ದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ಬಹಳ ಕುತೂಹಲಕಾರಿ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪಾಕಿಸ್ತಾನ ತಂಡದ ವಿರುದ್ಧ ಭಾರತ ತಂಡದ ಪ್ರಾಬಲ್ಯ ಸಾಧಿಸಿದ್ದು, ಇದು ಪಂದ್ಯದ ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ ಎಂದು ಪ್ರತಿಪಾದಿಸಿದರು.

"ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಹೆಚ್ಚು ಪ್ರಚಾರವಿದೆ. ಆದರೆ ಗುಣಮಟ್ಟವು ದೀರ್ಘಕಾಲದವರೆಗೆ ಉತ್ತಮವಾಗಿಲ್ಲ. ಭಾರತ ಏಕಪಕ್ಷೀಯವಾಗಿ ಗೆಲ್ಲುತ್ತಲೇ ಬರುತ್ತಿತ್ತು. ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಭಾರತವನ್ನು ಸೋಲಿಸಿದೆ," ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಮಾಜಿ ನಾಯಕ ಹೇಳಿದರು.

ದುಬೈನಲ್ಲಿ ಪಾಕಿಸ್ತಾನ ತಂಡದ 10 ವಿಕೆಟ್‌ಗಳ ಗೆಲುವು ಆ ಪಂದ್ಯಾವಳಿಯಲ್ಲಿ ಭಾರತ ತಂಡಕ್ಕೆ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಕಳೆದ ವರ್ಷ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡವು ಮೊದಲು ಲೀಗ್‌ನಲ್ಲಿ ಸೋತರೂ, ಸೆಮಿಫೈನಲ್ ಹಂತದಲ್ಲಿ ಭಾರತ ಸೋಲು ಕಂಡಿತು.

World Cup 2023

ಏಷ್ಯಾ ಕಪ್‌ನಲ್ಲಿ ಭಾರತ ಸೋತ ನಂತರ, 2022ರ ವಿಶ್ವಕಪ್‌ನಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ವಿರಾಟ್ ಕೊಹ್ಲಿ ಹೋರಾಟದಿಂದ ಪಾಕಿಸ್ತಾನ ವಿರುದ್ಧ ಅಮೋಘ ಗೆಲುವು ಸಾಧಿಸಿತು. ಆದರೆ, ಪಾಕಿಸ್ತಾನ ತಂಡ ಭಾರತ ವಿರುದ್ಧ ಮೆಲ್ಬೋರ್ನ್‌ನಲ್ಲಿ ಸೋಲಿನ ಹೊರತಾಗಿಯೂ ಫೈನಲ್‌ ತಲುಪಿತು.

"2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ಉತ್ತಮವಾಗಿ ಆಡಲಿಲ್ಲ. ಆದರೆ ನನ್ನ ಪ್ರಕಾರ, 2023ರ ಪಂದ್ಯಾವಳಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವು ಹೈ-ವೋಲ್ಟೇಜ್‌ನಿಂದ ಕೂಡಿರಲಿದೆ. ಏಕೆಂದರೆ ಗುಣಮಟ್ಟ ಉತ್ತಮವಾಗಿದೆ," ಎಂದು ಸೌರವ್ ಗಂಗೂಲಿ ತಿಳಿಸಿದರು.

ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನ ವಿರುದ್ಧ ಪ್ರಾಬಲ್ಯ ಸಾಧಿಸುತ್ತಲೇ ಬರುತ್ತಿದೆ. ಕಳೆದ ಏಳು ಆವೃತ್ತಿಗಳಲ್ಲಿ ಭಾರತ ಎಂದೂ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಸೋತಿಲ್ಲ ಎಂಬುದನ್ನೂ ಗಂಗೂಲಿ ಒತ್ತಿಹೇಳಿದರು.

ಏಕದಿನ ಸ್ವರೂಪದಲ್ಲಿ 2010ರಿಂದ ಪಾಕಿಸ್ತಾನದ ನಾಲ್ಕು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ತಂಡ 10 ಏಕದಿನ ಪಂದ್ಯಗಳನ್ನು ಗೆದ್ದಿದೆ. ಆದರೆ, ಪಾಕಿಸ್ತಾನ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಭಾರತವನ್ನು ಸೋಲಿಸಿತು.

ದೀರ್ಘ ಸ್ವರೂಪದಲ್ಲಿಯೂ ತಮ್ಮ ಪ್ರತಿಸ್ಪರ್ಧಿಗಳನ್ನು ಸೋಲಿಸುವ ಸಾಮರ್ಥ್ಯವನ್ನು ಪಾಕಿಸ್ತಾನ ಸಾಬೀತುಪಡಿಸಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳು ಉತ್ತಮ ಗುಣಮಟ್ಟದ ಮುಖಾಮುಖಿಯಾಗುವುದಿಲ್ಲ ಎಂಬ ಸೌರವ್ ಗಂಗೂಲಿಯವರ ಮಾತನ್ನು ಅನೇಕರು ಒಪ್ಪುವುದಿಲ್ಲ ಎಂಬುದಂತೂ ಸತ್ಯ.

2022ರ ಟಿ20 ವಿಶ್ವಕಪ್‌ನಲ್ಲಿನ ಮೆಲ್ಬೋರ್ನ್ ಪಂದ್ಯವು ಭಾರತದ ಅತ್ಯಂತ ಪ್ರಸಿದ್ಧ ಟಿ20 ಗೆಲುವುಗಳಲ್ಲಿ ಒಂದಾಗಿದೆ. ಏಕೆಂದರೆ, ಕೊನೆಯ ಎಸೆತದವರೆಗೂ ಪಂದ್ಯ ತೆಗೆದುಕೊಂಡು ಹೋಯಿತು ಮತ್ತು ಭಾರತ ವೀರೋಚಿತ ಗೆಲುವು ಕಂಡಿತು.

ಅದೇನೇ ಇದ್ದರೂ, ಅಕ್ಟೋಬರ್ 15ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಜಗತ್ತಿನ ಕಣ್ಣುಗಳು ಕಾಯುತ್ತಿವೆ.

Story first published: Monday, July 3, 2023, 20:59 [IST]
Other articles published on Jul 3, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+