ಸಮಯೋಚಿತವಾಗಿ ತಮ್ಮ ವೀಸಾ ಸಮಸ್ಯೆಯನ್ನು ಬಗೆಹರಿಸಿಕೊಂಡ ನಂತರ, ಪಾಕಿಸ್ತಾನ ಕ್ರಿಕೆಟ್ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ಮುನ್ನ ಬುಧವಾರ, ಸೆಪ್ಟೆಂಬರ್ 27ರಂದು ಹೈದರಾಬಾದ್‌ಗೆ ಬಂದಿಳಿಯಿತು.
ಬಾಬರ್ ಅಜಂ ನಾಯಕತ್ವದ 15 ಸದಸ್ಯರ ತಂಡವು ಪಾಕಿಸ್ತಾನದಿಂದ ದುಬೈ ಮಾರ್ಗವಾಗಿ ದೆಹಲಿಗೆ ಪ್ರಯಾಣ ಬೆಳೆಸಿತು. ನಂತರ ಹೈದರಾಬಾದ್‌ಗೆ ಬಂದಿಳಿಯಿತು. ಅಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡಕ್ಕೆ ಅದ್ಧೂರಿ ಸ್ವಾಗತ ದೊರೆಯಿತು.
ಕೇಸರಿ ಶಲ್ಯ ಹೊದಿಸಿ ಸ್ವಾಗ ಮಾಡಲಾಯಿತು ಮತ್ತು ನೆರೆಯ ದೇಶದ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಇದೀಗ ಪಾಕಿಸ್ತಾನ ತಂಡದ ಕ್ರಿಕೆಟಿಗರು ಕರ್ನಾಟಕದ ನಂದಿನಿ ಗುಡ್ ಲೈಫ್ ಹಾಲನ್ನು ಕುಡಿಯುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹೈದರಾಬಾದ್‌ನ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ಪಾಕಿಸ್ತಾನಿ ಆಟಗಾರರು ನಂದಿನಿ ಹಾಲು ಕುಡಿದಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರುವ ನೆಟ್ಟಿಗರು, "ನಾನು ನಂದಿನಿ, ಈಗ ಹೈದರಾಬಾದಲ್ಲಿ ಇದೀನಿ, ಸದ್ಯಕ್ಕೆ ಇವರ ಹೊಟ್ಟೆ ಸೇರ್ತಿದೀನಿ," ಅಂತಾ ತಮಾಷೆ ಮಾಡಿದ್ದಾರೆ.
ಹಲವು ಪಾಕಿಸ್ತಾನದ ಆಟಗಾರರು ತಮಗೆ ದೊರೆತ ಭವ್ಯ ಸ್ವಾಗತದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡರು. ಹೈದರಾಬಾದ್‌ನಲ್ಲಿ ಪಾಕಿಸ್ತಾನ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಮೊದಲ ಪಂದ್ಯ ಅಕ್ಟೋಬರ್ 6ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆಯಲಿದೆ.
ಪಾಕಿಸ್ತಾನ ಕ್ರಿಕೆಟ್ ಎಕ್ಸ್ (ಟ್ವಿಟರ್)ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ರಾಷ್ಟ್ರೀಯ ತಂಡವು ಅವರ ಮೊದಲ ನೆಟ್ಸ್ ಸೆಷನ್ ಮತ್ತು ಅಭ್ಯಾಸ ಸೆಷನ್‌ನಲ್ಲಿ ತರಬೇತಿ ಪಡೆಯುತ್ತಿರುವುದನ್ನು ತೋರಿಸಿದೆ.

ಭಾರತದಲ್ಲಿ ತಮ್ಮ ಮೊದಲ ಅಭ್ಯಾಸ ಅವಧಿಯನ್ನು ಪಾಕಿಸ್ತಾನ ಆಟಗಾರರು ಖಂಡಿತವಾಗಿಯೂ ಆನಂದಿಸಿದರೆ, ಅವರಿಗೆ ಬಡಿಸಿದ ಆಹಾರವು ಅವರನ್ನು ತೃಪ್ತಿಪಡಿಸಿತು.
ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ಇತರ ಒಂಬತ್ತು ತಂಡಗಳಿಗೆ ಗೋಮಾಂಸ ಲಭ್ಯವಿಲ್ಲದ ಕಾರಣ, ಪಾಕಿಸ್ತಾನ ತಂಡವು ತಮ್ಮ ದೈನಂದಿನ ಪ್ರೋಟೀನ್ ಸೇವನೆಗಾಗಿ ಕೋಳಿ, ಕುರಿ ಮತ್ತು ಮೀನುಗಳನ್ನು ಅವಲಂಬಿಸಿದೆ.
ಪಿಟಿಐ ಪ್ರಕಾರ, ಪಾಕಿಸ್ತಾನ ತಂಡದ ಡಯಟ್ ಚಾರ್ಟ್‌ನಲ್ಲಿ ಗ್ರಿಲ್ಡ್ ಲ್ಯಾಂಬ್ ಚಾಪ್ಸ್, ಮಟನ್ ಕರಿ, ಹೆಚ್ಚು ಜನಪ್ರಿಯವಾಗಿರುವ ಬಟರ್ ಚಿಕನ್ ಮತ್ತು ಗ್ರಿಲ್ಡ್ ಫಿಶ್ ಸೇರಿವೆ.
ಪಿಟಿಐ ವರದಿಯಲ್ಲಿ, ತಮ್ಮ ಕಾರ್ಬೋಹೈಡ್ರೇಟ್ ಸೇವನೆಗಾಗಿ, ಪಾಕಿಸ್ತಾನ ತಂಡವು ಸ್ಟೇಡಿಯಂ ಕ್ಯಾಟರರ್‌ಗೆ ಸ್ಟೀಮ್ಡ್ ಬಾಸ್ಮತಿ ರೈಸ್, ಬೊಲೊಗ್ನೀಸ್ ಸಾಸ್‌ನಲ್ಲಿರುವ ಸ್ಪಾಗೆಟ್ಟಿ, ಶ್ರೇಷ್ಠ ಶೇನ್ ವಾರ್ನ್‌ನ ನೆಚ್ಚಿನ ಮತ್ತು ಸಸ್ಯಾಹಾರಿ ಪಲಾವ್ ಅನ್ನು ಕೇಳಿದೆ.
ಪಾಕಿಸ್ತಾನ ತಂಡ ಸುಮಾರು ಎರಡು ವಾರಗಳ ಕಾಲ ಇಲ್ಲಿರುವುದರಿಂದ, ಸ್ಥಳೀಯ ಭೋಜನ ಪ್ರಸಿದ್ಧ ಹೈದರಾಬಾದಿ ಬಿರಿಯಾನಿಯನ್ನು ಒಳಗೊಂಡಿರುತ್ತದೆ.