For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಆಫ್ರಿದಿ ಶತಕ ವಂಚಿತ: ಬೇಡದ ದಾಖಲೆ ಬರೆದ ಪಾಕ್ ವೇಗಿ

ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಿತು. ಬ್ಯಾಟಿಂಗ್ ಸ್ವರ್ಗ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಪಾಕ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿತು. ಈ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್‌ಗಳನ್ನು ಹೀನಾಯ ಪ್ರದರ್ಶನ ನೀಡಿದರು. ಪಂದ್ಯದಲ್ಲಿ ಶಾಹೀನ್ ಶಾ ಅಫ್ರಿದಿ 10 ಓವರ್ಗಳಲ್ಲಿ 90 ರನ್ ನೀಡಿದರು. ಹ್ಯಾರಿಸ್ ರೌಫ್ 10 ಓವರ್‌ಗಳಲ್ಲಿ 85 ರನ್ ನೀಡಿ 1 ವಿಕೆಟ್ ಪಡೆದರು. ಮತ್ತು ಇವರನ್ನು ಹೊರತುಪಡಿಸಿ, ಹಸನ್ ಅಲಿ 81ಕ್ಕೆ 1 ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಶಾಹೀನ್ ಅಫ್ರಿದಿ 24 ಏಕದಿನ ಪಂದ್ಯಗಳ ನಂತರ ಮೊದಲ ಬಾರಿಗೆ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮತ್ತು ಅದೇ ಸಮಯದಲ್ಲಿ ಅವರ ಹೆಸರಿನಲ್ಲಿ ಹೀನಾಯ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಶಾಹೀನ್ ಅಫ್ರಿದಿ ಪಾಕಿಸ್ತಾನದ ಪರ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್ ಆಗಿದ್ದಾರೆ.

World cup 2023: Pakistan pacer Shaheen Afridi scripted unwanted record in match against NZ

ವಿಶ್ವಕಪ್ನ ಇನ್ನಿಂಗ್ಸ್ನಲ್ಲಿ ಪಾಕಿಸ್ತಾನದ ಬೌಲರ್ ನೀಡಿದ ಅತಿ ಹೆಚ್ಚು ರನ್
0/90 - ಶಾಹೀನ್ ಅಫ್ರಿದಿ vs ನ್ಯೂಜಿಲೆಂಡ್, ಬೆಂಗಳೂರು, (2023, 4 ನವೆಂಬರ್)
1/85 - ಹ್ಯಾರಿಸ್ ರೌಫ್ vs ನ್ಯೂಜಿಲೆಂಡ್, ಬೆಂಗಳೂರು, (2023, 4 ನವೆಂಬರ್)
1/84 - ಹಸನ್ ಅಲಿ vs ಭಾರತ, ಮ್ಯಾಂಚೆಸ್ಟರ್, 2019
3/83 - ಹ್ಯಾರಿಸ್ ರೌಫ್ vs ಆಸ್ಟ್ರೇಲಿಯಾ, ಬೆಂಗಳೂರು, 2023

ವಿಶ್ವಕಪ್ನಲ್ಲಿ ಪಾಕಿಸ್ತಾನದ ಬೌಲರ್ ನೀಡಿದ ಅತಿ ಹೆಚ್ಚು ರನ್
0/90 - ಶಾಹೀನ್ ಅಫ್ರಿದಿ vs ನ್ಯೂಜಿಲೆಂಡ್, ಬೆಂಗಳೂರು, (2023, 4 ನವೆಂಬರ್)
1/85 - ಹ್ಯಾರಿಸ್ ರೌಫ್ vs ನ್ಯೂಜಿಲೆಂಡ್, ಬೆಂಗಳೂರು, (2023, 4 ನವೆಂಬರ್)
1/84 - ಹಸನ್ ಅಲಿ vs ಭಾರತ, ಮ್ಯಾಂಚೆಸ್ಟರ್, 2019
3/83 - ಹ್ಯಾರಿಸ್ ರೌಫ್ vs ಆಸ್ಟ್ರೇಲಿಯಾ, ಬೆಂಗಳೂರು, 2023

ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ತಂಡದ ಗರಿಷ್ಠ ಸ್ಕೋರ್
444/3 - ಇಂಗ್ಲೆಂಡ್, ನಾಟಿಂಗ್ಹ್ಯಾಮ್, 2016
401/6 - ನ್ಯೂಜಿಲೆಂಡ್, ಬೆಂಗಳೂರು, (4 ನವೆಂಬರ್ 2023)
392/6 - ದಕ್ಷಿಣ ಆಫ್ರಿಕಾ, ಸೆಂಚುರಿಯನ್, 2007
373/3 - ಇಂಗ್ಲೆಂಡ್, ಸೌತಾಂಪ್ಟನ್, 2019

ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಗರಿಷ್ಠ ಸ್ಕೋರ್
ನ್ಯೂಜಿಲೆಂಡ್ 401/6, ಬೆಂಗಳೂರು, 4 ಸಂ. 2023
ಆಸ್ಟ್ರೇಲಿಯಾ 367/9, ಬೆಂಗಳೂರು, 2023
ಶ್ರೀಲಂಕಾ 344/9, ಹೈದರಾಬಾದ್, 2023
ಭಾರತ 336/5, ಮ್ಯಾಂಚೆಸ್ಟರ್, 2019
ರಚಿನ್ ರವೀಂದ್ರ (108 ರನ್) ಅವರ ಶತಕ ಮತ್ತು ನಾಯಕನೊಂದಿಗೆ ಎರಡನೇ ವಿಕೆಟ್ಗೆ 180 ರನ್ಗಳ ಜೊತೆಯಾಟದಿಂದಾಗಿ ಪಾಕಿಸ್ತಾನ ವಿರುದ್ಧದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸಾವಲಿನ ಮೊತ್ತವನ್ನು ಕಲೆ ಹಾಕಿತು. ನ್ಯೂಜಿಲೆಂಡ್ ಆರು ವಿಕೆಟ್ಗಳಿಗೆ 401 ರನ್ಗಳ ಬೃಹತ್ ಸ್ಕೋರ್ ಗಳಿಸಿತು. ಕೇನ್ ವಿಲಿಯಮ್ಸನ್. ವಿಲಿಯಮ್ಸನ್ 79 ಎಸೆತಗಳಲ್ಲಿ 95 ರನ್ಗಳ ಅರ್ಧಶತಕವನ್ನು ಬಾರಿಸಿದರು. ಪಾಕ್ ಪರ ಮೊಹಮ್ಮದ್ ವಾಸಿಮ್ ಮೂರು ವಿಕೆಟ್ ಪಡೆದರೆ, ಹಸನ್ ಅಲಿ, ಇಫ್ತಿಕರ್ ಅಹ್ಮದ್ ಮತ್ತು ಹ್ಯಾರಿಸ್ ರೌಫ್ ತಲಾ ಒಂದು ವಿಕೆಟ್ ಪಡೆದರು.

Story first published: Saturday, November 4, 2023, 16:54 [IST]
Other articles published on Nov 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+