Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Cup 2023: ಪಾಕಿಸ್ತಾನ vs ನೆದರ್ಲ್ಯಾಂಡ್ಸ್ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ, ಲೈವ್ ಸ್ಕೋರ್

ಶುಕ್ರವಾರ, ಅಕ್ಟೋಬರ್ 6ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2023ರ ಏಕದಿನ ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿವೆ.

ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

World Cup 2023: Pakistan vs Netherlands Match Toss Report, Playing 11 And Live Score Details

ಉಭಯ ತಂಡಗಳು ಹೈದರಾಬಾದ್‌ ನಗರದಲ್ಲಿ ಹೆಚ್ಚಿನ ಸಮಯವನ್ನು ಕಳೆದಿವೆ ಮತ್ತು ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿವೆ. ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಲಘುವಾಗಿ ಪರಿಗಣಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ. ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ತಂಡವು ನಿರೀಕ್ಷಿತ ಫಲಿತಾಂಶ ನೀಡುವ ಸಾಧ್ಯತೆ ಇದೆ.

ಪಾಕಿಸ್ತಾನ ತಂಡದ ಪ್ರಮುಖ ಸಮಸ್ಯೆಯೆಂದರೆ ಅದು ಅಗ್ರ ಕ್ರಮಾಂಕದ ಬ್ಯಾಟಿಂಗ್. ಇಮಾಮ್-ಉಲ್-ಹಕ್ ಮತ್ತು ಫಖರ್ ಜಮಾನ್ ಕಳಪೆ ಫಾರ್ಮ್‌ನಲ್ಲಿದ್ದಾರೆ.

World Cup 2023: Pakistan vs Netherlands Match Toss Report, Playing 11 And Live Score Details

ಇಬ್ಬರು ಬ್ಯಾಟರ್‌ಗಳು ಅಭ್ಯಾಸ ಪಂದ್ಯದಲ್ಲಿ ಕ್ಲಿಕ್ ಆಗದಿರುವುದು ಪಾಕಿಸ್ತಾನದ ಆಡಳಿತಕ್ಕೆ ದೊಡ್ಡ ಚಿಂತೆಯಾಗಿದೆ. ಪಾಕಿಸ್ತಾನ ತಂಡಕ್ಕೆ ಇನ್ನೊಂದು ಚಿಂತೆಯೆಂದರೆ ಸ್ಪಿನ್ನರ್‌ಗಳ ಫಾರ್ಮ್.

ಪ್ರಮುಖ ಸ್ಪಿನ್ನರ್ ಶಾದಾಬ್ ಖಾನ್ ಫಾರ್ಮ್‌ನಿಂದ ಹೊರಗುಳಿದಿದ್ದರೆ, ಮೊಹಮ್ಮದ್ ನವಾಜ್ ಮತ್ತು ಉಸಾಮಾ ಮಿರ್ ಅನುಭವಿಗಳಲ್ಲ. ಶಾದಾಬ್ ಖಾನ್ ವಿಶ್ವಕಪ್‌ನಲ್ಲಿ ಉತ್ತಮ ಫಾರ್ಮ್‌ಗೆ ಮರಳುತ್ತಾರೆ ಎಂದು ಪಾಕಿಸ್ತಾನ ತಂಡ ಭಾವಿಸುತ್ತದೆ. ಇಲ್ಲದಿದ್ದರೆ ಮಧ್ಯಮ ಓವರ್‌ಗಳನ್ನು ನಿರ್ವಹಿಸುವುದು ತಂಡಕ್ಕೆ ದೊಡ್ಡ ಚಿಂತೆಯಾಗಿ ಪರಿಣಮಿಸಬಹುದು.

ಮತ್ತೊಂದೆಡೆ, ನೆದರ್ಲ್ಯಾಂಡ್ಸ್ ತಮ್ಮ ಅವಕಾಶಗಳ ಬಗ್ಗೆ ಸಾಕಷ್ಟು ಆತ್ಮವಿಶ್ವಾಸದಿಂದ ಕೂಡಿದೆ ಮತ್ತು ಸೆಮಿಫೈನಲ್‌ನಲ್ಲಿ ಸ್ಥಾನವನ್ನು ಪಡೆಯಲು ವಿಶ್ವಕಪ್‌ಗೆ ಬಂದಿದ್ದೇವೆ ಎಂದು ಹೇಳಿದೆ.

ಪಾಕಿಸ್ತಾನ vs ನೆದರ್ಲ್ಯಾಂಡ್ಸ್ ಆಡುವ 11ರ ಬಳಗ
ನೆದರ್ಲ್ಯಾಂಡ್ಸ್ ತಂಡ: ವಿಕ್ರಮಜೀತ್ ಸಿಂಗ್, ಮ್ಯಾಕ್ಸ್ ಒ'ಡೌಡ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಕಾಲಿನ್ ಅಕರ್ಮನ್, ಸ್ಕಾಟ್ ಎಡ್ವರ್ಡ್ಸ್ (ನಾಯಕ/ವಿಕೆಟ್ ಕೀಪರ್), ಲೋಗನ್ ವ್ಯಾನ್ ಬೀಕ್, ಸಾಕಿಬ್ ಜುಲ್ಫಿಕರ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಪಾಲ್ ವ್ಯಾನ್ ಮೀರ್ಕೆರೆನ್, ಆರ್ಯನ್ ದತ್.

ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್.

Story first published: Friday, October 6, 2023, 13:41 [IST]
Other articles published on Oct 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+