For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ತಾಣಗಳ ವಿಚಾರದಲ್ಲಿ ಪಾಕ್ ಪದೇ ಪದೇ ಖ್ಯಾತೆ: ಪಿಸಿಬಿ ಮನವಿ ತಿರಸ್ಕರಿಸಿದ BCCI ಮತ್ತು ICC

ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ತಾಣಗಳ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಖ್ಯಾತೆ ಮುಂದುವರಿದಿದೆ. ಇದೀಗ ಈ ವಿಚಾರವಾಗಿ ವಿಶ್ವಕಪ್ ಆಯೋಜನೆ ಮಾಡುವ ಬಿಸಿಸಿಐ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಖಡಕ್ ನಿರ್ಧಾರವೊಂದಕ್ಕೆ ಬಂದಂತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿರುವ ಎರಡು ಪಂದ್ಯಗಳ ತಾಣಗಳನ್ನು ಬದಲಾಯಿಸುವಂತೆ ಮಾಡಿರುವ ಮನವಿಯನ್ನು ಐಸಿಸಿ ಹಾಗೂ ಬಿಸಿಸಿಐ ಎರಡು ಕೂಡ ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಕ್ರಿಕೆಟ್ ಬಜ್ ವರದಿ ಮಾಡಿದ್ದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಮಾಡಿರುವ ಮನವಿಯ ಕುರಿತಾಗಿ ಐಸಿಸಿ ಹಾಗೂ ಬಿಸಿಸಿಐ ಜೂನ್ 20ರಂದು ಸಭೆ ನಡೆಸಿದ್ದು ಈ ಸಂದರ್ಭದಲ್ಲಿ ಪಾಕಿಸ್ತಾನದ ಮನವಿಯನ್ನು ತಿರಸ್ಕರಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

 Pakistans request to relocate two matches is denied by the BCCI and ICC

ವಿಶ್ವಕಪ್ ಟೂರ್ನಿಯ ಆಯೋಜನೆಗೆ ಸಂಬಂಧಿಸಿದಂತೆ ಪಂದ್ಯದ ತಾತ್ಕಾಲಿಕ ವೇಳಾಪಟ್ಟಿ ಹಾಗೂ ತಾಣಗಳ ಬಗ್ಗೆ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ದೇಶಗಳಿಗೂ ಮಾಹಿತಿ ರವಾನಿಸಲಾಗಿದೆ. ಇದರಂತೆ ಪಾಕಿಸ್ತಾನ ಆಸ್ಟ್ರೇಲಿಯಾ ವಿರುದ್ದದ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿದರೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಆದರೆ ಈ ಎರಡು ಪಂದ್ಯಗಳ ತಾಣಗಳನ್ನು ಅದಲು ಬದಲು ಮಾಡಿಕೊಳ್ಳುವಂತೆ ಪಾಕಿಸ್ತಾನ ಮಂಡಳಿ ಮನವಿ ಮಾಡಿತ್ತು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಬೆಂಗಳೂರಿನಲ್ಲಿಯೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಚೆನ್ನೈನಲ್ಲಿಯೂ ಆಯೋಜಿಸುವಂತೆ ಮನವಿ ಮಾಡಿತ್ತು ಎನ್ನಲಾಗಿದೆ. ಆದರೆ ಈ ಮನವಿಯನ್ನು ಬಿಸಿಸಿಐ ಹಾಗೂ ಐಸಿಸಿ ತಿರಸ್ಕರಿಸಿದೆ. ಹಾಗಾಗಿ ಈ ಹಿಂದೆ ನಿಗದಿಯಾಗಿರುವಂತೆಯೇ ಅಂತಿಮ ವೇಳಾಪಟ್ಟಿಯಲ್ಲಿಯೂ ಮುಂದುವರಿಯುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಹ್ಮದಾಬಾದ್‌ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧದ ಪಂದ್ಯಕ್ಕೆ ಅಕ್ಷೇಪಿಸಿತ್ತು. ಅಹ್ಮದಾಬಾದ್ ಬದಲಿಗೆ ಬೇರೆ ಸ್ಥಳದಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಆಯೋಜಿಸುವಂತೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಕೂಡ ಬಿಸಿಸಿಐ ಹಾಗೂ ಐಸಿಸಿ ತಿರಸ್ಕರಿಸಿದೆ ಎನ್ನಲಾಗಿದೆ.

ಇಎಸ್‌ಪಿಎಲ್ ಕ್ರಿಕ್‌ಇನ್‌ಫೋ ಪ್ರಕಾರ ಪಾಕಿಸ್ತಾನವು ತನ್ನ ವಿಶ್ವಕಪ್ ಅಭಿಯಾನದಲ್ಲಿ ಮೊದಲ ಎರಡು ಪಂದ್ಯಗಳನ್ನು ಅರ್ಹತಾ ಸುತ್ತಿನಿಂದ ಬಂದ ತಮಡಗಳ ವಿರುದ್ಧ ಆಡುವ ಮೂಲಕ ಪ್ರಾರಂಭಿಸುವ ಸಾಧ್ಯತೆಯಿದೆ. ಇದು ಅಕ್ಟೋಬರ್ 6 ಮತ್ತು 12 ರಂದು ಹೈದರಾಬಾದ್‌ನಲ್ಲಿ ಆಯೋಜನೆಯಾಗಲಿದೆ. ಇನ್ನು ಭಾರತದ ವಿರುದ್ಧದ ಬಹು ನಿರೀಕ್ಷಿತ ಪಂದ್ಯ ಅಕ್ಟೋಬರ್ 15ರಂದು ನಿಗದಿಪಡಿಸಲಾಗಿದೆ. ನಂತರ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳನ್ನು ಅಕ್ಟೋಬರ್ 20 ಮತ್ತು 23 ರಂದು ನಿಗದಿಪಡಿಸಲಾಗಿದೆ.

Story first published: Thursday, June 22, 2023, 15:31 [IST]
Other articles published on Jun 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+