For Quick Alerts
ALLOW NOTIFICATIONS  
For Daily Alerts
 

ICC World Cup 2023 Qualifiers: ಓಮನ್ ವಿರುದ್ಧ ಗೆದ್ದು ವಿಶ್ವಕಪ್ ಅಭಿಯಾನ ಮುಗಿಸಿದ ವೆಸ್ಟ್ ಇಂಡೀಸ್

ಬುಧವಾರ, ಜುಲೈ 5ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2023ರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ಸ್ ಸೂಪರ್ ಸಿಕ್ಸ್ ಪಂದ್ಯದಲ್ಲಿ ವೆಸ್ಟ್ ಇಡೀಸ್ ತಂಡವು ದುರ್ಬಲ ಓಮನ್ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿ ಅಭಿಯಾನ ಕೊನೆಗೊಳಿಸಿತು.

ಭಾರತದಲ್ಲಿ ನಡೆಯುವ ಮುಖ್ಯ ವಿಶ್ವಕಪ್‌ ವೇದಿಕೆಗೆ ಅರ್ಹತೆ ಪಡೆಯಲು ವಿಫಲವಾದ ನಂತರ, ಶಾಯ್ ಹೋಪ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಸಮಾಧಾನ ಪಡೆಯಲು ಓಮನ್ ವಿರುದ್ಧ ಗೆದ್ದು ಬೀಗಿತು. ಜಿಂಬಾಬ್ವೆ, ನೆದರ್ಲ್ಯಾಂಡ್ಸ್ ಮತ್ತು ಸ್ಕಾಟ್ಲೆಂಡ್ ವಿರುದ್ಧದ ಸೋತ ನಂತರ ಸೋಲಿನ ಸರಪಳಿಯನ್ನು ಕಳೆದುಕೊಂಡರು.

World Cup 2023 Qualifier Super 6

ಓಮನ್ ನೀಡಿದ್ದ 222 ರನ್‌ಗಳ ಗುರಿಯನ್ನು ವೆಸ್ಟ್ ಇಂಡೀಸ್ ತಂಡ 3 ವಿಕೆಟ್ ಕಳೆದುಕೊಂಡು ಇನ್ನೂ 62 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಕೆರಿಬಿಯನ್ ತಂಡದ ಪರ ಬ್ರಾಂಡನ್ ಕಿಂಗ್ ಅವರು ತಮ್ಮ ಎರಡನೇ ಏಕದಿನ ಶತಕವನ್ನು ಗಳಿಸಿದರು. ಎಡಗೈ ವೇಗದ ಬೌಲರ್ ಬಿಲಾಲ್ ಖಾನ್ ಅವರಿಗೆ ವಿಕೆಟ್ ಒಪ್ಪಿಸುವ ಮುನ್ನ ಬಲಗೈ ಬ್ಯಾಟರ್ ಬ್ರಾಂಡನ್ ಕಿಂಗ್ 104 ಎಸೆತಗಳಲ್ಲಿ 15 ಬೌಂಡರಿಗಳ ಸಮೇತ 100 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ತಂಡದ ಆರಂಭಿಕ ಜಾನ್ಸನ್ ಚಾರ್ಲ್ಸ್ ಅವರ ವಿಕೆಟ್ ಕಳೆದುಕೊಂಡ ನಂತರ, ಬ್ರಾಂಡನ್ ಕಿಂಗ್ ಹಾಗೂ ಕೀಸಿ ಕಾರ್ಟಿ ಎರಡನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ನೀಡಿದರು. ಕಾರ್ಟಿ ರನೌಟ್ ಆದ ನಂತರ, ಬ್ರಾಂಡನ್ ಕಿಂಗ್ ಹಾಗೂ ನಾಯಕ ಹೋಪ್ ಮೂರನೇ ವಿಕೆಟ್‌ಗೆ 96 ರನ್‌ಗಳ ಜೊತೆಯಾಟ ನೀಡಿದರು.

ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ನೇಪಾಳ ವಿರುದ್ಧದ ಶತಕ ಬಾರಿಸಿದ್ದ ಶಾಯ್ ಹೋಪ್ 65 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 63 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ನಿಕೋಲಸ್ ಪೂರನ್ 14 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಮೇತ ಅಜೇಯ 19 ರನ್ ಗಳಸಿ ಔಟಾಗದೆ ಉಳಿದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಓಮನ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 221 ರನ್‌ ಗಳಿಸಲಷ್ಟೇ ಶಕ್ತವಾಯಿತು. ಶೋಯೆಬ್ ಖಾನ್ 54 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು.

ಸೂರಜ್ ಕುಮಾರ್ 65 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿ ಓಮನ್ ತಂಡ 200ರ ರನ್ ಗಡಿ ದಾಟಲು ನೆರವಾದರು. ಉಳಿದಂತೆ ಆರಂಭಿಕ ಬ್ಯಾಟರ್ ಕಶ್ಯಪ್ 31 ರನ್, ಆಯಾನ್ ಖಾನ್ 30 ರನ್, ಮೊಹಮ್ಮದ್ ನದೀಮ್ 20 ರನ್ ಗಳಿಸಿದರು.

ವೆಸ್ಟ್ ಇಂಡೀಸ್ ತಂಡದ ಪರ ರೊಮಾರಿಯೊ ಶೆಫರ್ಡ್ ಅವರು 10 ಓವರ್‌ಗಳಲ್ಲಿ 44 ರನ್ ನೀಡಿ 3 ವಿಕೆಟ್‌ ಪಡೆದು ಮಿಂಚಿದರು. ಕೈಲ್ ಮೇಯರ್ಸ್ ಮತ್ತು ಅಕಿಬ್ ಇಲ್ಯಾಸ್ ಮತ್ತು ಜೇ ಒಡೆದ್ರಾ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

Story first published: Wednesday, July 5, 2023, 22:29 [IST]
Other articles published on Jul 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+