World Cup 2023 Qualifiers: ಸ್ಕಾಟ್ಲೆಂಡ್ ವಿರುದ್ಧ ಸೋತು ಭಾರತದ ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್
ಶನಿವಾರ, ಜುಲೈ 1ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ 2023ರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಸೂಪರ್ 6 ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲೆಂಡ್ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಅಷ್ಟೇ ಅಲ್ಲದೆ, ಭಾರತದಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಿಂದ ವೆಸ್ಟ್ ಇಂಡೀಸ್ ತಂಡ ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಕೆರಿಬಿಯನ್ ತಂಡ ವಿಫಲವಾಗಿದೆ.
ಟಾಸ್ ಗೆದ್ದ ಸ್ಕಾಟ್ಲೆಂಡ್ ತಂಡದ ನಾಯಕ ರಿಚಿ ಬೆರಿಂಗ್ಟನ್ ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ಶಾಯ್ ಹೋಪ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವು ತನಗಿಂತ ಕಡಿಮೆ ಶ್ರೇಯಾಂಕದ ತಂಡ ವಿರುದ್ಧ ಸೋತು ಮತ್ತು ಆ ತಂಡಗಳೊಂದಿಗೆ ಅರ್ಹತಾ ಸುತ್ತಿನಿಂದ ಹೊರಬಿದ್ದಿದೆ. ಇನ್ನು 2023ರ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ಗಳನ್ನು ಸೋಲಿಸಿದ ಸ್ಕಾಟ್ಲೆಂಡ್ ತಂಡ ಇತಿಹಾಸ ಬರೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ 43.5 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಬ್ರೆಂಡನ್ ಕಿಂಗ್ 22 ರನ್, ಶಾಯ್ ಹೋಪ್ 13 ರನ್, ನಿಕೋಲಸ್ ಪೂರನ್ 21 ರನ್, ಜೇಸನ್ ಹೋಲ್ಡರ್ 45 ರನ್ ರೋಮರಿಯೊ ಶೆಫರ್ಡ್ 36 ರನ್, ಕೆವಿನ್ ಸಿಂಕ್ಲರ್ 10 ರನ್ ಗಳಿಸಿದರು.
ಸ್ಕಾಟ್ಲೆಂಡ್ ತಂಡದ ಪರ ಬೌಲಿಂಗ್‌ನಲ್ಲಿ ಬ್ರಾಂಡನ್ ಮೆಕ್‌ಮುಲ್ಲೆನ್ 9 ಓವರ್‌ಗಳಲ್ಲಿ 43 ರನ್ ನೀಡಿ 3 ವಿಕೆಟ್ ಪಡೆದರೆ, ಕ್ರಿಸ್ ಸೋಲ್ 2 ವಿಕೆಟ್, ಮಾರ್ಕ್ ವ್ಯಾಟ್ 2 ವಿಕೆಟ್, ಕ್ರಿಸ್ ಗ್ರೀವ್ಸ್ 2 ವಿಕೆಟ್, ಸಫ್ಯಾನ್ ಷರೀಫ್ 1 ವಿಕೆಟ್ ಪಡೆದರು.
182 ರನ್‌ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಸ್ಕಾಟ್ಲೆಂಡ್ ತಂಡ 43.3 ಓವರ್‌ಗಳಲ್ಲಿ 3 ವಿಕೆಟ್‌ಗೆ 185 ರನ್ ಗಳಿಸಿ, 7 ವಿಕೆಟ್‌ಗಳ ಅಮೋಘ ಗೆಲುವು ದಾಖಲಿಸಿತು.
ತಂಡದ ಪರ ಮ್ಯಾಥ್ಯೂ ಕ್ರಾಸ್ 107 ಎಸೆತಗಳಲ್ಲಿ 7 ಬೌಂಡರಿ 74 ರನ್ ಗಳಿಸಿದರೆ, ಬ್ರಾಂಡನ್ ಮೆಕ್‌ಮುಲ್ಲೆನ್ 106 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 69 ರನ್ ಬಾರಿಸಿದರು. ಜಾರ್ಜ್ ಮನ್ಸೆ 18 ರನ್, ರಿಚಿ ಬೆರಿಂಗ್‌ಟನ್ 13 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ವೆಸ್ಟ್ ಇಂಡೀಸ್ ತಂಡದ ಪರ ಬೌಲಿಂಗ್‌ನಲ್ಲಿ ಜೇಸನ್ ಹೋಲ್ಡರ್ 1 ವಿಕೆಟ್, ರೋಮರಿಯೊ ಶೆಫರ್ಡ್ 1 ವಿಕೆಟ್ ಮತ್ತು ಅಕೇಲ್ ಹೋಸೇನ್ 1 ವಿಕೆಟ್ ಪಡೆದರು.
ಬೌಲಿಂಗ್‌ನಲ್ಲಿ 3 ವಿಕೆಟ್ ಮತ್ತು ಬ್ಯಾಟಿಂಗ್‌ನಲ್ಲಿ 69 ರನ್ ಗಳಿಸಿದ ಬ್ರಾಂಡನ್ ಮೆಕ್‌ಮುಲ್ಲೆನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications