For Quick Alerts
ALLOW NOTIFICATIONS  
For Daily Alerts
 

ICC World Cup 2023 Qualifiers: ಪೂರನ್, ಶಾಯ್ ಹೋಪ್ ಶತಕದಾಟ; ನೇಪಾಳ ವಿರುದ್ಧ ವೆಸ್ಟ್ ಇಂಡೀಸ್‌ಗೆ ಗೆಲುವು

ಗುರುವಾರ, ಜೂನ್ 22ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ಕ್ವಾಲಿಫೈಯರ್ ಪಂದ್ಯದಲ್ಲಿ ದುರ್ಬಲ ನೇಪಾಳ ತಂಡದ ವಿರುದ್ಧ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ 101 ರನ್‌ಗಳ ಬೃಹತ್ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಕೋಲಸ್ ಪೂರನ್ ಮತ್ತು ಶಾಯ್ ಹೋಪ್ ಅವರ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 339 ರನ್‌ಗಳನ್ನು ಸ್ಕೋರ್ ಬೋರ್ಡ್‌ನಲ್ಲಿ ಕಲೆಹಾಕಿತು.

World Cup 2023 Qualifiers: Pooran, Shai Hope Century; West Indies Beat Nepal By 101 Runs

ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ 129 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 132 ರನ್ ಗಳಿಸಿದರೆ, ಮತ್ತೊಬ್ಬ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ 94 ಎಸೆತಗಳಲ್ಲಿ 10 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಮೇತ 115 ರನ್ ಬಾರಿಸಿದರು.

ಇದಕ್ಕೂ ಮುನ್ನ ಆರಂಭಿಕ ಬ್ಯಾಟ್ಸ್‌ಮನ್ ಬ್ರೆಂಡನ್ ಕಿಂಗ್ 42 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 32 ರನ್ ಗಳಿಸಿದರೆ, ರೋವ್ಮನ್ ಪೊವೆಲ್ 14 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 29 ರನ್ ಬಾರಿಸಿದರು. ಜೇಸನ್ ಹೋಲ್ಡರ್ 10 ಎಸೆತಗಳಲ್ಲಿ 15 ರನ್ ಗಳಿಸಿದರು.

ಬೌಲಿಂಗ್‌ನಲ್ಲಿ ನೇಪಾಳ ತಂಡದ ಪರ ಲಲಿತ್ ರಾಜ್‌ಬನ್ಶಿ 10 ಓವರ್‌ಗಳಲ್ಲಿ 52 ರನ್ ನೀಡಿ 3 ವಿಕೆಟ್ ಪಡೆದರೆ, ಉಳಿದಂತೆ ಕರಣ್ ಕೆಸಿ, ಗುಲ್ಸನ್ ಜಾ, ಸಂದೀಪ್ ಲಾಮಿಚ್ಚಾನೆ, ದೀಪೇಂದ್ರ ಐರೆ ತಲಾ ಒಂದೊಂದು ವಿಕೆಟ್ ಪಡೆದರು.

World Cup 2023 Qualifiers: Pooran, Shai Hope Century; West Indies Beat Nepal By 101 Runs

ನಂತರ, 340 ರನ್‌ಗಳ ಬೃಹತ್ ಮೊತ್ತ ಬೆನ್ನತ್ತಿದ ನೇಪಾಳ ತಂಡ 49.4 ಓವರ್‌ಗಳಲ್ಲಿ 238 ರನ್ ಗಳಸಿ ಆಲೌಟ್ ಆಯಿತು. ತಂಡದ ಪರ ಆರಿಫ್ ಶೇಕ್ 93 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 63 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು.

ಉಳಿದಂತೆ, ರೋಹಿತ್ ಪೌಡೆಲ್ 43 ಎಸೆತಗಳಲ್ಲಿ 3 ಬೌಂಡರಿ ಮೂಲಕ 30 ರನ್ ಗಳಿಸಿದರೆ, ಗುಲ್ಸನ್ ಜಾ 58 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 42 ರನ್ ಬಾರಿಸಿದರು. ದೀಪೇಂದ್ರ ಐರೆ 20 ಎಸೆತಗಳಲ್ಲಿ 23 ರನ್, ಕರಣ್ ಕೆಸಿ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 28 ರನ್ ಬಾರಿಸಿದರು. ಆದರೆ ತಮ್ಮ ತಂಡಕ್ಕೆ ಗೆಲುವು ತಂದು ಕೊಡಲಾಗಲಿಲ್ಲ.

ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಪರ ಜೇಸನ್ ಹೋಲ್ಡರ್ 10 ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್ ಪಡೆದರೆ, ಅಲ್ಜಾರಿ ಜೋಸೆಫ್ 10 ಓವರ್‌ಗಳಲ್ಲಿ 45 ರನ್ ನೀಡಿ 2 ವಿಕೆಟ್, ಕೀಮೋ ಪೌಲ್ 10 ಓವರ್‌ಗಳಲ್ಲಿ 63 ರನ್ ನೀಡಿ 2 ವಿಕೆಟ್, ಅಕೇಲ್ ಹೊಸೈನ್ 10 ಓವರ್‌ಗಳಲ್ಲಿ 49 ರನ್ ನೀಡಿ 2 ವಿಕೆಟ್ ಪಡೆದರೆ, ಕೇಲ್ ಮೇಯರ್ಸ್ ಒಂದು ವಿಕೆಟ್ ಪಡೆದು ಮಿಂಚಿದರು.

ಭರ್ಜರಿ ಶತಕ ಬಾರಸಿದ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Story first published: Thursday, June 22, 2023, 23:01 [IST]
Other articles published on Jun 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+