World Cup 2023 Qualifiers: ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ಟಾಸ್ ವರದಿ, ಆಡುವ 11ರ ಬಳಗ
ಶನಿವಾರ, ಜುಲೈ 1ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ 2023ರ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಸೂಪರ್ 6 ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ.
ಟಾಸ್ ಗೆದ್ದ ಸ್ಕಾಟ್ಲೆಂಡ್ ತಂಡದ ನಾಯಕ ರಿಚಿ ಬೆರಿಂಗ್ಟನ್ ಮೊದಲು ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ಶಾಯ್ ಹೋಪ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.

ಹರಾರೆಯಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ 6 ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಗೆಲ್ಲಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಯಾನಿಕ್ ಕ್ಯಾರಿಯಾ ಗಾಯಗೊಂಡ ನಂತರ ಕೆವಿನ್ ಸಿಂಕ್ಲೇರ್ ಅವರನ್ನು ನಿರ್ಣಾಯಕ ಸೂಪರ್ ಸಿಕ್ಸ್ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಎರಡು ಪ್ರಮುಖ ಗುಂಪು ಪಂದ್ಯಗಳಲ್ಲಿ ಸೋತಿದ್ದಾರೆ. ಆದ್ದರಿಂದ ಸೂಪರ್ ಸಿಕ್ಸ್ ಹಂತದಲ್ಲಿ ಶ್ರೀಲಂಕಾ, ಸ್ಕಾಟ್ಲೆಂಡ್ ಮತ್ತು ಓಮನ್ ವಿರುದ್ಧ ಜಯ ಗಳಿಸುವ ಮೂಲಕ ತಮ್ಮ ವಿಶ್ವಕಪ್ ಅರ್ಹತಾ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳುವ ಗುರಿ ಹೊಂದಿದೆ.

ಮತ್ತೊಂದೆಡೆ, ಶ್ರೀಲಂಕಾ ವಿರುದ್ಧದ ಸೋಲಿನ ಹಿನ್ನೆಲೆಯಿಂದ ಬಂದಿರುವ ಸ್ಕಾಟ್ಲೆಂಡ್ ತಂಡಕ್ಕೂ ಈ ಪಂದ್ಯದಲ್ಲಿ ಪುಟಿದೇಳಲು ಎದುರು ನೋಡುತ್ತಿದೆ.
ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್ ಆಡುವ 11ರ ಬಳಗ
ವೆಸ್ಟ್ ಇಂಡೀಸ್: ಬ್ರ್ಯಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಶಮರ್ ಬ್ರೂಕ್ಸ್, ಶಾಯ್ ಹೋಪ್ (ನಾಯಕ/ವಿಕೆಟ್ ಕೀಪರ್), ನಿಕೋಲಸ್ ಪೂರನ್, ಕೈಲ್ ಮೇಯರ್ಸ್, ಕೆವಿನ್ ಸಿಂಕ್ಲೇರ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೇಲ್ ಹೋಸೇನ್, ಅಲ್ಜಾರಿ ಜೋಸೆಫ್.
ಸ್ಕಾಟ್ಲೆಂಡ್: ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ಕ್ರಿಸ್ಟೋಫರ್ ಮ್ಯಾಕ್‌ಬ್ರೈಡ್, ಬ್ರಾಂಡನ್ ಮೆಕ್‌ಮುಲ್ಲೆನ್, ಜಾರ್ಜ್ ಮನ್ಸೆ, ರಿಚಿ ಬೆರಿಂಗ್‌ಟನ್ (ನಾಯಕ), ತೋಮಸ್ ಮ್ಯಾಕಿಂತೋಷ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಸಫ್ಯಾನ್ ಷರೀಫ್, ಕ್ರಿಸ್ ಸೋಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications