Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

World Cup 2023 Qualifiers: ವೆಸ್ಟ್ ಇಂಡೀಸ್ vs ಯುಎಸ್ಎ ಪಂದ್ಯದ ವಿವರ, ಪೂರ್ಣ ತಂಡ, ಲೈವ್ ಸ್ಟ್ರೀಮಿಂಗ್

ಭಾನುವಾರ, ಜೂನ್ 18ರಂದು ಹರಾರೆಯಲ್ಲಿನ ತಕಾಶಿಂಗ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ (ಯುಎಸ್ಎ) ತಂಡಗಳು ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯದ 2ನೇ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.

ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯುವಲ್ಲಿ ವಿಫಲವಾಗಿರುವ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ, ಗೆಲುವಿನ ಮೂಲಕ ಪಂದ್ಯಾವಳಿಯನ್ನು ಪ್ರಾರಂಭಿಸುವ ಗುರಿ ಹೊಂದಿದೆ. ಯುಎಸ್ಎ ತಂಡ ಸಹ ಪ್ರತಿಭಾವಂತ ಆಟಗಾರರನ್ನು ಹೊಂದಿದೆ.

World Cup 2023 Qualifiers: West Indies vs USA Match Details, Full Squad, Live Streaming


ಮೊದಲ ಎರಡು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿದ್ದ ವೆಸ್ಟ್ ಇಂಡೀಸ್ ತಂಡವು ಶಾಯ್ ಹೋಪ್ ನಾಯಕತ್ವದಲ್ಲಿ ಫೇವರಿಟ್ ಆಗಿ ಅರ್ಹತಾ ಸುತ್ತಿಗೆ ಪ್ರವೇಶಿಸಿದೆ.

ಮತ್ತೊಂದೆಡೆ, ಯುಎಸ್‌ಎ ತಂಡವನ್ನು ವಿಕೆಟ್‌ಕೀಪರ್-ಬ್ಯಾಟರ್ ಮೊನಾಂಕ್ ಪಟೇಲ್ ಮುನ್ನಡೆಸಸಲಿದ್ದಾರೆ. ಯುಎಸ್ಎ ತಂಡವೂ ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಎದುರು ನೋಡುತ್ತಿದೆ. ಇದೇ ಮೊದಲ ಬಾರಿಗೆ ಯುಎಸ್ಎ ತಂಡ ತಮ್ಮ ನೆರೆಯ ವೆಸ್ಟ್ ಇಂಡೀಸ್ ತಂಡವನ್ನು ಏಕದಿನ ಪಂದ್ಯದಲ್ಲಿ ಎದುರಿಸುತ್ತಿದ್ದಾರೆ.

ವೆಸ್ಟ್ ಇಂಡೀಸ್ vs ಯುಎಸ್ಎ ಪಂದ್ಯದ ವಿವರ

ಸ್ಥಳ ಮತ್ತು ದಿನಾಂಕ: ವೆಸ್ಟ್ ಇಂಡೀಸ್ vs ಯುಎಸ್ಎ ನಡುವಿನ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯವು ಜಿಂಬಾಬ್ವೆಯ ಹರಾರೆಯಲ್ಲಿನ ತಕಾಶಿಂಗ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾನುವಾರ, ಜೂನ್ 18ರಂದು ನಡೆಯಲಿದೆ.

ಪಂದ್ಯದ ಸಮಯ: ವೆಸ್ಟ್ ಇಂಡೀಸ್ vs ಯುಎಸ್ಎ ಪಂದ್ಯವು ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆ ಮತ್ತು ಭಾರತೀಯ ಕಾಲಮಾನ ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗಲಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ವೆಸ್ಟ್ ಇಂಡೀಸ್ vs ಯುಎಸ್ಎ ಪಂದ್ಯವನ್ನು ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಫ್ಯಾನ್‌ಕೋಡ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.

ಹರಾರೆ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ತಂಡವು ಅನುಕೂಲಕವನ್ನು ಪಡೆಯುತ್ತದೆ. ಆರಂಭಿಕ ಓವರ್‌ಗಳಲ್ಲಿ ಪಿಚ್ ಸಾಕಷ್ಟು ಬೌನ್ಸ್ ನೀಡುತ್ತದೆ ಮತ್ತು ವೇಗದ ಬೌಲರ್‌ಗಳು ಹೊಸ ಚೆಂಡಿನ ಲಾಭವನ್ನು ಪಡೆಯಲಿದ್ದಾರೆ.

ವೆಸ್ಟ್ ಇಂಡೀಸ್ ಪೂರ್ಣ ತಂಡ

ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಮರ್ ಬ್ರೂಕ್ಸ್, ಶಾಯ್ ಹೋಪ್ (ನಾಯಕ/ವಿಕೆಟ್ ಕೀಪರ್), ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಕೀಮೋ ಪೌಲ್, ಜಾನ್ಸನ್ ಚಾರ್ಲ್ಸ್, ಕೀಸಿ ಕಾರ್ಟಿ, ರೋಸ್ಟನ್ ಚೇಸ್.

ಯುಎಸ್ಎ ಪೂರ್ಣ ತಂಡ

ಸ್ಟೀವನ್ ಟೇಲರ್, ಸುಶಾಂತ್ ಮೊದಾನಿ, ಸೈತೇಜ ಮುಕ್ಕಮಲ್ಲ, ಮೊನಾಂಕ್ ಪಟೇಲ್ (ನಾಯಕ/ವಿಕೆಟ್ ಕೀಪರ್), ಆರನ್ ಜೋನ್ಸ್, ಗಜಾನಂದ್ ಸಿಂಗ್, ನಿಸರ್ಗ್ ಪಟೇಲ್, ಜಸ್‌ದೀಪ್ ಸಿಂಗ್, ನೋಸ್ತೂಶ್ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್, ಕೈಲ್ ಫಿಲಿಪ್, ಶಯಾನ್ ಜಹಾಂಗೀರ್, ಶಯಾನ್ ಜಹಾಂಗೀರ್, ಉಸ್ಮಾನ್ ರಫೀಕ್.

Story first published: Sunday, June 18, 2023, 11:46 [IST]
Other articles published on Jun 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+