For Quick Alerts
ALLOW NOTIFICATIONS  
For Daily Alerts
 

World Cup 2023: ಏಕದಿನ ವಿಶ್ವಕಪ್‌ಗೆ ಆಸೀಸ್‌ನ ಇಬ್ಬರು ಪ್ರಮುಖ ಆಟಗಾರರನ್ನು ಆಯ್ಕೆ ಮಾಡಿದ ರಿಕಿ ಪಾಂಟಿಂಗ್

ಇದೇ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಬಹುತೇಕ ತಂಡಗಳು ತಮ್ಮ ಅತ್ಯುತ್ತಮ ಆಡುವ 11ರ ಬಳಗವನ್ನು ಸಿದ್ಧಪಡಿಸುತ್ತಿವೆ. ಅಲ್ಲದೇ, ಅಷ್ಟರೊಳಗೆ ಆಟಗಾರರು ಗಾಯಕ್ಕೆ ತುತ್ತಾಗದಂತೆ ಎಚ್ಚರವಹಿಸಿ, ಪ್ರತಿ ಪ್ರಮುಖ ಆಟಗಾರರ ಮೇಲೆ ನಿಗಾ ಇರಿಸಿವೆ.

ಮುಂಬರುವ ಅಕ್ಟೋಬರ್ 5ರಿಂದ ಭಾರತದಲ್ಲಿ ಪೂರ್ಣ ಸಾಮರ್ಥ್ಯದ ಏಕದಿನ ವಿಶ್ವಕಪ್ ಪಂದ್ಯಾವಳಿ ಪ್ರಾರಂಭವಾಗಲಿದೆ. ಇದೇ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು 2023ರ ಏಕದಿನ ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರ ವಹಿಸುವ ಆಸ್ಟ್ರೇಲಿಯಾದ ಇಬ್ಬರು ಪ್ರಮುಖ ಆಟಗಾರರನ್ನು ಹೆಸರಿಸಿದ್ದಾರೆ.

World Cup 2023: Ricky Ponting Picks Two Key Players For Australia For ODI World Cup

ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಏಕದಿನ ವಿಶ್ವಕಪ್ ಪ್ರಶಸ್ತಿ ಗೆಲ್ಲಬೇಕಾದರೆ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಸ್ಪಿನ್ನರ್ ಆಡಮ್ ಝಂಪಾ ಉತ್ತಮ ಪ್ರದರ್ಶನ ನೀಡಬೇಕು ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, ಮಿಚೆಲ್ ಸ್ಟಾರ್ಕ್ ಕಳೆದ ಎರಡು ಏಕದಿನ ವಿಶ್ವಕಪ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 2015ರ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪ್ರಮುಖ ಪಾತ್ರ ವಹಿಸಿ, ಎಂಟು ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಪಡೆದಿದ್ದರು.

ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಪ್ರಕಾರ, "ವೈಟ್-ಬಾಲ್ ಕ್ರಿಕೆಟ್‌ನಲ್ಲಿ ದೀರ್ಘಕಾಲದವರೆಗೆ ಮಿಚೆಲ್ ಸ್ಟಾರ್ಕ್ ಪರಿಣಾಮಕಾರಿ ಬೌಲರ್ ಆಗಲಿದ್ದಾರೆ. ಭಾರತ ವಿರುದ್ಧದ ಇತ್ತೀಚಿನ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಎರಡು ಬಾರಿ ಔಟ್ ಮಾಡಿದ್ದನ್ನು ಎತ್ತಿ ಹೇಳಿದರು. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಮಿಚೆಲ್ ಸ್ಟಾರ್ಕ್ ಅಂಕಿಅಂಶ ಅಸಾಧಾರಣವಾಗಿವೆ," ಎಂದು ತಿಳಿಸಿದರು.

World Cup 2023: Ricky Ponting Picks Two Key Players For Australia For ODI World Cup

ಗಮನಾರ್ಹವಾಗಿ, 32 ವರ್ಷದ ಮಿಚೆಲ್ ಸ್ಟಾರ್ಕ್ ಭಾರತದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮೂರು ಪಂದ್ಯಗಳ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಎಂಟು ವಿಕೆಟ್ ಕಬಳಿಸಿದರು. ಅದರಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಸೇರಿದೆ.

"ಎಡಗೈ ಬೌಲರ್ ಮಿಚೆಲ್ ಸ್ಟಾರ್ಕ್ ಆರು ಅಡಿ, ಐದು ಇಂಚು ಇದ್ದು, ಗಂಟೆಗೆ 140 ಕಿಮೀ ವೇಗದಲ್ಲಿ ಬೌಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹೊಸ ಚೆಂಡಿನಲ್ಲಿ ರಿವರ್ಸ್ ಸ್ವಿಂಗ್ ಮಾಡುತ್ತಾರೆ ಮತ್ತು ಅವರು ಫಾರ್ಮ್‌ನಲ್ಲಿದ್ದಾಗ ಯಾರೊಬ್ಬರು ಅವರನ್ನು ಎದುರಿಸಲು ಭಯ ಪಡುತ್ತಾರೆ," ಎಂದು ಐಸಿಸಿ ವಿಮರ್ಶೆಯ ಇತ್ತೀಚಿನ ಸಂಚಿಕೆಯಲ್ಲಿ ರಿಕಿ ಪಾಂಟಿಂಗ್ ಹೇಳಿದರು.

"ಮಿಚೆಲ್ ಸ್ಟಾರ್ಕ್ ಅವರು ವಿಶೇಷವಾಗಿ, ಬಿಳಿ-ಬಾಲ್ ಕ್ರಿಕೆಟ್‌ನಲ್ಲಿನ ಅಂಕಿಅಂಶಗಳು ಸಂಪೂರ್ಣವಾಗಿ ಅತ್ಯುತ್ತಮವಾಗಿವೆ. ಮುಂದಿನ ಏಕದಿ ವಿಶ್ವಕಪ್‌ನಲ್ಲಿ ಅವರು ಆಸ್ಟ್ರೇಲಿಯಾ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ," ಎಂದು ರಿಕಿ ಪಾಂಟಿಂಗ್ ತಿಳಿಸಿದರು.

World Cup 2023: Ricky Ponting Picks Two Key Players For Australia For ODI World Cup

ಆಡಮ್ ಝಂಪಾ ಆಸ್ಟ್ರೇಲಿಯಾದ ಟ್ರಂಪ್ ಕಾರ್ಡ್‌ ಎಂದ ರಿಕಿ ಪಾಂಟಿಂಗ್
ಇನ್ನು ಮಿಚೆಲ್ ಸ್ಟಾರ್ಕ್ ಜೊತೆಗೆ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಅವರು ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್‌ಶಿಪ್‌ನಲ್ಲಿ ಆಡಮ್ ಝಂಪಾ ಆಸ್ಟ್ರೇಲಿಯಾದ ಟ್ರಂಪ್ ಕಾರ್ಡ್‌ ಆಟಗಾರರಲ್ಲಿ ಒಬ್ಬರಾಗುತ್ತಾರೆ ಎಂದು ಎರಡು ಬಾರಿಯ ವಿಶ್ವಕಪ್ ವಿಜೇತ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದರು.

"ಮಿಚೆಲ್ ಸ್ಟಾರ್ಕ್ ಜೊತೆಗೆ ಅವರು ಬಹುಕಾಲದವರೆಗೆ ಎಲ್ಲಾ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬೌಲರ್ ಆಗಿದ್ದರು. ಸ್ಟಾರ್ಕ್ ಅದ್ಭುತವಾಗಿದ್ದಾರೆ ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಆಡಮ್ ಝಂಪಾ ಅವರು ನಿಜವಾದ ಬಹಿರಂಗಪಡಿಸಿದ್ದಾರೆ," ಎಂದು ಪಾಂಟಿಂಗ್ ಹೇಳಿದರು.

"ಕಳೆದ ನಾಲ್ಕೈದು ವರ್ಷಗಳಿಂದ ಆಡಮ್ ಝಂಪಾ ಅವರು ಆಸ್ಟ್ರೇಲಿಯಾ ಬೌಲಿಂಗ್ ದಾಳಿಯ ಬೆನ್ನೆಲುಬಾಗಿದ್ದಾರೆ. ಬಹುಶಃ ಅವರು ಭಾರತ ವಿರುದ್ಧದ ಟೆಸ್ಟ್ ಪ್ರವಾಸದಲ್ಲಿ ಆಯ್ಕೆಯಾಗದೆ ಸ್ವಲ್ಪ ನಿರಾಶೆಗೊಂಡಿದ್ದಾರೆ. ಸ್ಥಿರ ಪ್ರದರ್ಶನ ನೀಡುವ ಲೆಗ್-ಸ್ಪಿನ್ನರ್ ಹೊಂದಿರುವ ತಂಡಗಳು ಬಹಳ ಅಪರೂಪ. ಖಚಿತವಾಗಿ ಆಡಮ್ ಝಂಪಾ ಆಸ್ಟ್ರೇಲಿಯಾದ ಟ್ರಂಪ್ ಕಾರ್ಡ್‌ಗಳಲ್ಲಿ ಒಬ್ಬನಾಗುತ್ತಾನೆ," ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

Story first published: Tuesday, April 4, 2023, 16:10 [IST]
Other articles published on Apr 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+