For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2023: ರಾಹುಲ್, ಅಯ್ಯರ್‌ಗೆ ಬ್ಯಾಕ್‌ಅಪ್ ಆಗಿ ಈತನನ್ನು ಸಿದ್ಧಪಡಿಸಲಾಗುತ್ತಿದೆ; ಆರ್ ಅಶ್ವಿನ್

ಭಾರತ ಕ್ರಿಕೆಟ್ ತಂಡವು ಮುಂಬರುವ 2023ರ ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್‌ಗೆ ಮುನ್ನ ಪ್ರಯೋಗದ ಹಂತದಲ್ಲಿದೆ. ವೆಸ್ಟ್ ಇಂಡೀಸ್ ವೈಟ್‌ಬಾಲ್ ಪ್ರವಾಸದಲ್ಲಿ ಭಾರತ ತಮ್ಮ ಬ್ಯಾಟಿಂಗ್ ಲೈನ್-ಅಪ್‌ಗಳನ್ನು ಹಲವು ಬಾರಿ ಬದಲಾವಣೆ ಮಾಡಿದೆ.

ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ನಡೆಯುತ್ತಿರುವ ಸರಣಿಯಲ್ಲಿ ಭಾರತ ತಂಡಕ್ಕೆ ಪ್ರಯೋಗಗಳ ಪ್ರಮುಖ ಅಂಶಗಳಾಗಿವೆ.

World Cup 2023: Sanju Samson As Back-up For KL Rahul, Shreyas Iyer Says Ravichandran Ashwin

ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ವೇಗದ ಅರ್ಧಶತಕ ಬಾರಿಸುವ ಮೂಲಕ ಸಂಜು ಸ್ಯಾಮ್ಸನ್ ಒಂದು ಉತ್ತಮ ಇನ್ನಿಂಗ್ಸ್ ಆಡಿದ್ದರು. ಸ್ಯಾಮ್ಸನ್ ಅವರ ಆಟದಿಂದ ವೆಸ್ಟ್ ಇಂಡೀಸ್‌ ವಿರುದ್ಧ ಭಾರತ ಅತ್ಯಧಿಕ ಏಕದಿನ (351 ರನ್) ಮೊತ್ತವನ್ನು ತಲುಪಲು ಸಹಾಯ ಮಾಡಿತು.

ಸಂಜು ಸ್ಯಾಮ್ಸನ್ ಹೊರತುಪಡಿಸಿ, ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಸ್ಥಾನವು ಸಹ ಸ್ಕ್ಯಾನರ್‌ಗೆ ಒಳಪಟ್ಟಿದೆ, ಜೊತೆಗೆ ಆಲ್‌ರೌಂಡರ್ ಟಿ20 ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದರು.

ಇದೇ ವೇಳೆ ಭಾರತದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಯೋಗಗಳಿಗೆ ಅರ್ಥವನ್ನು ನೀಡಲು ಪ್ರಯತ್ನಿಸಿದ್ದಾರೆ. ಸದ್ಯ ನಡೆಯುತ್ತಿರುವ ಸರಣಿಯಲ್ಲಿ ಭಾರತ ತಂಡವು ವಿಭಿನ್ನ ತಂತ್ರಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

World Cup 2023: Sanju Samson As Back-up For KL Rahul, Shreyas Iyer Says Ravichandran Ashwin

ಐಸಿಸಿ ವಿಶ್ವಕಪ್‌ಗೆ ಮುನ್ನ ಭಾರತ ತಂಡ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್‌ಗೆ ಬ್ಯಾಕ್‌ಅಪ್ ಪಾತ್ರಕ್ಕಾಗಿ ಸಂಜು ಸ್ಯಾಮ್ಸನ್‌ರನ್ನು ಸಿದ್ಧಪಡಿಸುತ್ತಿದೆ ಎಂದು ರವಿಚಂದ್ರನ್ ಅಶ್ವಿನ್ ತಿಳಿಸಿದರು.

"ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಗಾಯದಿಂದ ಹೊರಬರುತ್ತಿದ್ದಾರೆ. ಏಷ್ಯಾ ಕಪ್ ವೇಳೆಗೆ ಮರಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆದರೆ ಅವರಿಬ್ಬರಿಗೆ ಬ್ಯಾಕಪ್ ಯಾರು? ಇಬ್ಬರಲ್ಲಿ ಒಬ್ಬರು ವಿಶ್ವಕಪ್‌ಗೆ ಮುನ್ನ ಮರಳಲು ಸಾಧ್ಯವಾಗದಿದ್ದರೇ? ಅದಕ್ಕಾಗಿಯೇ ಭಾರತ ತಂಡ ಸಂಜು ಸ್ಯಾಮ್ಸನ್‌ರನ್ನು ಪ್ರಯತ್ನಿಸಲಾಗುತ್ತದೆ. 4ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಅವರನ್ನು ಸಹ ಪ್ರಯತ್ನಿಸಿದರು," ಎಂದು ರವಿಚಂದ್ರನ್ ಅಶ್ವಿನ್ ತಿಳಿಸಿದರು.

"ಭಾರತ ತಂಡ ಟಿ20 ಮತ್ತು ಏಕದಿನ ಸ್ವರೂಪಗಳಿಗಾಗಿ ವಿಭಿನ್ನ ತಂತ್ರಗಳನ್ನು ಇಟ್ಟುಕೊಂಡಿದೆ ಎಂದು ನಾನು ಭಾವಿಸುತ್ತೇನೆ," ಎಂದು ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

World Cup 2023: Sanju Samson As Back-up For KL Rahul, Shreyas Iyer Says Ravichandran Ashwin

ವೆಸ್ಟ್ ಇಂಡೀಸ್‌ನಲ್ಲಿ ಭಾರತಕ್ಕೆ ಇನ್ನೂ ಮೂರು ಟಿ20 ಪಂದ್ಯಗಳು ಬಾಕಿ ಇವೆ. ಈ ಪ್ರಯೋಗಗಳಿಂದ ಮೊದಲೆರಡು ಪಂದ್ಯಗಳ ನಂತರ ಪ್ರವಾಸಿ ತಂಡವು 0-2 ಅಂತರದಿಂದ ಹಿನ್ನಡೆ ಅನುಭವಿಸಿದೆ. ಸರಣಿ ಗೆಲ್ಲಬೇಕಾದರೆ, ಭಾರತ ಅಂತಿಮ ಮೂರು ಪಂದ್ಯಗಳಲ್ಲಿ ಪುಟಿದೇಳಲು ಎದುರು ನೋಡುತ್ತಿದೆ.

ಟಿ20 ಪಂದ್ಯಗಳಲ್ಲಿ ಭಾರತದ ಕಳಪೆ ಪ್ರದರ್ಶನಗಳ ನಡುವೆ, ಯುವ ಆಟಗಾರ ತಿಲಕ್ ವರ್ಮಾ ಭಾರತ ತಂಡದ ಭವಿಷ್ಯದ ತಾರೆಗಳಲ್ಲಿ ಒಬ್ಬರಾಗಿ ಕಾಣಿಸುತ್ತಿದ್ದಾರೆ. ತಿಲಕ್ ವರ್ಮಾ ಅವರನ್ನು ರವಿಚಂದ್ರನ್ ಅಶ್ವಿನ್ ಶ್ಲಾಘಿಸಿದರು ಮತ್ತು ಭಾರತದ ಉಳಿದ ಆಟಗಾರರಿಗಿಂತ ವಿಭಿನ್ನ ಬ್ಯಾಟರ್ ಎಂದು ಹೇಳಿದರು.

"ತಿಲಕ್ ವರ್ಮಾ ಅವರ ಪ್ರದರ್ಶನವು ಎಲ್ಲರೂ ಅವರನ್ನು ಗಮನಿಸುವಂತೆ ಮಾಡಿದೆ. ಅವರು ಮೊದಲ ಟಿ20 ಪಂದ್ಯದಲ್ಲಿ ಆ ನಿಧಾನಗತಿಯ ಪಿಚ್‌ನಲ್ಲಿಯೂ ಸಹ ಅತ್ಯುತ್ತಮವಾಗಿ ಕಾಣುತ್ತಿದ್ದರು. ತಿಲಕ್ ಬ್ಯಾಟಿಂಗ್ ಶೈಲಿಯು ಎಲ್ಲ ಸ್ವರೂಪದಲ್ಲಿ ಚೊಚ್ಚಲ ಪಂದ್ಯವನ್ನು ಆಡುವಂತೆ ತೋರುತ್ತಿದೆ. ಅವರ ಆಟವು ಬಹಳಷ್ಟು ರೋಹಿತ್ ಶರ್ಮಾರನ್ನು ಹೋಲುತ್ತದೆ," ಎಂದು ರವಿಚಂದ್ರನ್ ಅಶ್ವಿನ್ ತಿಳಿಸಿದರು.

ಮಂಗಳವಾರ, ಆಗಸ್ಟ್ 8ರಂದು ಗಯಾನಾದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 3ನೇ ಟಿ20 ಪಂದ್ಯವನ್ನು ಆಡಲಿದೆ.

Story first published: Tuesday, August 8, 2023, 11:06 [IST]
Other articles published on Aug 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+