For Quick Alerts
ALLOW NOTIFICATIONS  
For Daily Alerts
 

ಉತ್ತುಂಗದಲ್ಲಿದ್ದಾಗ ನಿವೃತ್ತಿ ನಿರ್ಧಾರ ತೆಗೆದುಕೊಳ್ಳಬಾರದಿತ್ತು: ಡಿಕಾಕ್ ಬಗ್ಗೆ ಶೇನ್ ಬಾಂಡ್ ಬೇಸರ

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಈಗಾಗಲೇ ಮೂರು ಶತಕ ಸಿಡಿಸಿದ್ದು ತಂಡದ ಅದ್ಭುತ ಪ್ರದರ್ಶನದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ಕ್ವಿಂಟನ್ ಡಿಕಾಕ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಡಿಕಾಕ್ ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಏಕದಿನ ಮಾದರಿಗೆ ವಿದಾಯದ ನಿರ್ಧಾರವನ್ನು ಪ್ರಕಟಿಸಿದ್ದರು. ಈ ವಿಶ್ವಕಪ್ ಬಳಿಕ ತಾನು ಏಕದಿನ ಮಾದರಿಯಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದರು. ಕಿವೀಸ್ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ದಕ್ಷಿಣ ಆಫ್ರಿಕಾ ಬ್ಯಾಟರ್‌ನ ಈ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಫಾರ್ಮ್‌ನ ಅತ್ಯುನ್ನತ ಮಟ್ಟದಲ್ಲಿರುವಾಗ ಈ ನಿರ್ಧಾರವನ್ನು ಡಿಕಾಕ್ ತೆಗೆದುಕೊಳ್ಳಬಾರದಿತ್ತು ಎಂದಿದ್ದಾರೆ ಡಿಕಾಕ್.

World Cup 2023: Shane Bond express his disappointment on Quinton de Kock retirement decision

ಕ್ವಿಂಟನ್ ಡಿಕಾಕ್ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ದು ಬೃಹತ್ ಶತಕ ಸಿಡಿಸಿ ಅಬ್ಬರಿಸಿದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡಿಕಾಕ್ 140 ಎಸೆತಗಳನ್ನು ಎದುರಿಸಿ ಬರೊಬ್ಬರಿ 174 ರನ್‌ಗಳನ್ನು ಬಾರಿಸಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬರೊಬ್ಬರಿ 382 ರನ್‌ಗಳನ್ನು ಕಲೆಹಾಕಿತ್ತು. ನಂತರ ಬಾಂಗ್ಲಾದೇಶವನ್ನು 233 ರನ್‌ಗಳಿಗೆ ದಕ್ಷಿಣ ಆಫ್ರಿಕಾ ಕಟ್ಟಿಹಾಕಿದ್ದು 149 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ.

"ಐವತ್ತು ಓವರ್‌ಗಳ ಕ್ರಿಕೆಟ್‌ನಲ್ಲಿ ಸಪಾಟಾದ, ಉತ್ತಮವಾದ ಪಿಚ್ ದೊರೆತರೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕಾಲಾವಕಾಶ ನಿಮಗೆ ದೊರೆಯುತ್ತದೆ. ಇಂಥಾ ಪಿಚ್ ಇದ್ದಾಗ ಕೇವಲ ಒಂದೆರಡು ಓವರ್‌ಗಳಲ್ಲಿ ರನ್‌ರೇಟ್ 5.5 ಇದ್ದದ್ದು 6.5ಕ್ಕೆ ಏರಿಕೆಯಾಗುತ್ತದೆ. ಇನ್ನು ಈ ಪಿಚ್ಚನ್ನು ಡಿಕಾಕ್ ಬಹಳ ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದು ಅದು ಅವರಿಗೆ ತವರಿನಾಚೆಗಿನ ತವರಿನ ಪಿಚ್‌ನಂತೆ ಆಗಿದೆ. ತಾನು ಎದುರಿಸಿದ ಬೌಲಿಂಗ್ ದಾಳಿಯನ್ನು ಕೂಡ ಆತ ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದರು" ಎಂದಿದ್ದಾರೆ ನ್ಯೂಜಿಲೆಂಡ್ ತಂಡದ ಮಾಜಿ ವೇಗದ ಬೌಲರ್ ಶೇನ್ ಬಾಂಡ್.

"ಕ್ವಿಂಟನ್ ಡಿಕಾಕ್ ಅವರ ಈ ಇನ್ನಿಂಗ್ಸ್ ಒಂದು ಪರಿಪೂರ್ಣವಾದ ಇನ್ನಿಂಗ್ಸ್ ಆಗಿತ್ತು. ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಆತ ಕೂಡ ಒಬ್ಬ. ಬೇಸರದ ವಿಚಾರವೇನೆಂದರೆ ಆತ ಮೂವತ್ತರ ಹರೆಯದಲ್ಲಿ ತನ್ನ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾಗ ನಿವೃತ್ತಿ ಹೇಳುತ್ತಿದ್ದಾರೆ" ಎಂದು ಕ್ವಿಂಟನ್ ಡಿಕಾಕ್ ನಿವೃತ್ತಿ ನಿರ್ಧಾರದ ಬಗ್ಗೆ ಶೇನ್ ಬಾಂಡ್ ಬೇಸರ ಹಂಚಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಶತಕ ಸಿಡಿಸುವುದರ ಜೊತೆಗೆ ಡಿ ಕಾಕ್ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಆಡಿದ ಐದು ಪಂದ್ಯಗಳಲ್ಲಿಈ ಎಡಗೈ ಆಟಗಾರ 81.40 ರ ಸರಾಸರಿ ಮತ್ತು 114.97 ರ ಸ್ಟ್ರೈಕ್-ರೇಟ್‌ನಲ್ಲಿ 407 ರನ್ ಗಳಿಸಿದ್ದಾರೆ. ಶ್ರೀಲಂಕಾ, ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶಗಳ ವಿರುದ್ಧ ಶತಕ ಸಿಡಿಸಿದ್ದು ಈ ಬಾರಿಯ ಟೂರ್ನಿಯಲ್ಲಿ ಈಗಾಗಲೇ ಮೂರು ಶತಕ ಸಿಡಿಸಿ ಅಬ್ಬರಿಸಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾ ತಂಡ ಕೂಡ ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ಗಣನೀಯ ಏರಿಕೆ ಕಂಡಿದೆ. ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಈಗ ಭಾರತದ ಬಳಿಕ ಎರಡನೇ ಸ್ಥಾನದಲ್ಲಿದೆ. ಆಡಿರುವ ಐದು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 4 ಗೆಲುವುಗಳೊಂದಿಗೆ 8 ಅಂಕಗಳನ್ನು ಹೊಂದಿದೆ. ಅಕ್ಟೋಬರ್ 27ರಂದು ದಕ್ಷಿಣ ಆಫ್ರಿಕಾ ಪಾಕಿಸ್ತಾನವನ್ನು ಎದುರಿಸಲಿದ್ದು ಈ ಪಂದ್ಯ ಕೂಡ ಕುತೂಹಲ ಮೂಡಿಸಿದೆ. ಈ ಪಂದ್ಯ ಚೆನ್ನೂನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದ್ದು ಈ ಪಂದ್ಯದಲ್ಲಿ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಅವಕಾಶವೂ ಇದೆ.

Story first published: Wednesday, October 25, 2023, 15:04 [IST]
Other articles published on Oct 25, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+