For Quick Alerts
ALLOW NOTIFICATIONS  
For Daily Alerts
 

World Cup 2023: ಆಸ್ಟ್ರೇಲಿಯಾ ವಿರುದ್ಧ ಸೊನ್ನೆ ಸುತ್ತಿದ ಇಶಾನ್ ಕಿಶನ್‌ಗೆ ನೀತಿಪಾಠ ಹೇಳಿದ ಶೋಯೆಬ್ ಅಖ್ತರ್!

ಭಾನುವಾರ, ಅಕ್ಟೋಬರ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 200 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದಾಗ ಭಾರತ ತಂಡದ ಆರಂಭಿಕ ಇಶಾನ್ ಕಿಶನ್ ಆರು ಎಸೆತಗಳಲ್ಲಿ ಡಕ್‌ಗೆ ಔಟ್ ಆಗಿ ನಿರಾಸೆ ಮೂಡಿಸಿದರು.

ಆದಾಗ್ಯೂ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ನಡುವಿನ ಅತ್ಯುತ್ತಮ ಜೊತೆಯಾಟವು ತಮ್ಮ ಐಸಿಸಿ ಏಕದಿನ ವಿಶ್ವಕಪ್ ಅಭಿಯಾನವನ್ನು ಅತ್ಯುತ್ತಮವಾಗಿ ಆರಂಭಿಸಲು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಲು ಭಾರತಕ್ಕೆ ನೆರವಾಯಿತು.

World Cup 2023: Shoaib Akhtar Advises To Ishan Kishan, Who Out For Duck Against Australia

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ಶುಭ್ಮನ್ ಗಿಲ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಬ್ಯಾಟಿಂಗ್ ಇನ್ನಿಂಗ್ಸ್ ತೆರೆದ ಇಶಾನ್ ಕಿಶನ್ ಅವರು ಮಿಚೆಲ್ ಸ್ಟಾರ್ಕ್ ಎಸೆದ ಆಫ್ ಸ್ಟಂಪ್‌ನ ಹೊರಗಿದ್ದ ಬಾಲ್ ಅನ್ನು ಬಾರಿಸಲು ಹೋದರು. ಆದರೆ, ಎಡ್ಜ್‌ಗೆ ಸವರಿಹೋದ ಬಾಲ್ ಮೊದಲ ಸ್ಲಿಪ್‌ನಲ್ಲಿದ್ದ ಕ್ಯಾಮೆರಾನ್ ಗ್ರೀನ್ ಕೈಸೇರಿತು.

ಇದೀಗ ಪಾಕಿಸ್ತಾನ ತಂಡದ ಮಾಜಿ ಬೌಲರ್ ಹಾಗೂ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಅವರು ಇಶಾನ್ ಕಿಶನ್‌ಗೆ ಪರಿಸ್ಥಿತಿಗೆ ಅಗತ್ಯವಾಗಿ ತಮ್ಮ ಸಹಜ ಆಕ್ರಮಣಕಾರಿ ಪ್ರವೃತ್ತಿಯನ್ನು ನಿಗ್ರಹಿಸಲು ಮತ್ತು ಅವರ ವಿಕೆಟ್ ಒಪ್ಪಿಸದಿರಲು ಸಲಹೆ ನೀಡಿದರು.

"ಇಶಾನ್ ಕಿಶನ್ ತಾಳ್ಮೆಯಿಂದಿರಬೇಕು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಆಡಬೇಕು. ಯುವಕರ ಆಕ್ರಮಣಶೀಲತೆ ಮತ್ತು ಉತ್ಸಾಹವಿರುತ್ತದೆ ಎಂದು ನನಗೆ ತಿಳಿದಿದೆ. ಕಿಶನ್ ತನ್ನ ಅಧಿಕಾರಯುತ ಆಟ ಆಡಲು ಬಯಸುತ್ತಾನೆ ಮತ್ತು ನಾನು ದೃಶ್ಯಕ್ಕೆ ಬಂದಿದ್ದೇನೆ ಎಂದು ಹೇಳಲು ಬಯಸುತ್ತಾನೆ. ಆದರೆ ಅವರು ತಾಳ್ಮೆಯನ್ನು ತೋರಿಸಬೇಕಾಗಿದೆ," ಎಂದು ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದರು.

World Cup 2023: Shoaib Akhtar Advises To Ishan Kishan, Who Out For Duck Against Australia

ಕೆಎಲ್ ರಾಹುಲ್ ಶ್ಲಾಘಿಸಿದ ಶೋಯೆಬ್ ಅಖ್ತರ್

2023ರ ವಿಶ್ವಕಪ್‌ನ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಕೆಎಲ್ ರಾಹುಲ್ ಆಡಿದ ರೀತಿಗೆ ಶೋಯೆಬ್ ಅಖ್ತರ್ ಶ್ಲಾಘಿಸಿದರು. ಎರಡು ಓವರ್‌ಗಳಲ್ಲಿ ಕೇವಲ ಎರಡು ರನ್‌ಗಳಾಗಿದ್ದಾಗ ಭಾರತ ತಂಡ ತನ್ನ ಅಗ್ರ ಮೂರು ವಿಕೆಟ್‌ಗಳನ್ನು ಕಳೆದುಕೊಂಡಾಗ ಕೆಎಲ್ ರಾಹುಲ್ ಬ್ಯಾಟಿಂಗ್‌ಗೆ ಬಂದರು.

"ಕೆಎಲ್ ರಾಹುಲ್ ಅವರು ನಿಧಾನವಾಗಿ ಕ್ರೀಸ್‌ನಲ್ಲಿ ನೆಲೆಸಿ ಪ್ರಬುದ್ಧತೆಯನ್ನು ತೋರಿಸಿದರು. ಕಠಿಣ ಸಮಯಗಳನ್ನು ಎದುರಿಸಿದರು ಮತ್ತು ಬಾಲ್ ಒದ್ದೆಯಾದಾಗ, ಸರಿಯಾಗಿ ಬ್ಯಾಟ್‌ಗೆ ಬರಲು ಪ್ರಾರಂಭಿಸಿದಾಗ ಕೆಎಲ್ ರಾಹುಲ್ ತಮ್ಮ ಶಾಟ್‌ಗಳನ್ನು ಆಡಲು ಪ್ರಾರಂಭಿಸಿದರು," ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ತಿಳಿಸಿದರು.

ಕೆಎಲ್ ರಾಹುಲ್ 115 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ನೆರವಿನಿಂದ 97 ರನ್ ಗಳಿಸಿ ಅಜೇಯರಾಗುಳಿದರು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್‌ನಲ್ಲಿ ಸಿಕ್ಸ್ ಮೂಲಕ ವಿನ್ನಿಂಗ್ ಶಾಟ್ ಹೊಡೆದವರು.

World Cup 2023: Shoaib Akhtar Advises To Ishan Kishan, Who Out For Duck Against Australia

ಇಶಾನ್ ಕಿಶನ್, ರೋಹಿತ್ ಮತ್ತು ಶ್ರೇಯಸ್ ಅಯ್ಯರ್ ಅವರು ಸೊನ್ನೆ ಸುತ್ತಿ ಪೆವಿಲಿಯನ್‌ಗೆ ಮರಳಿದ ನಂತರ, ಕೆಎಲ್ ರಾಹುಲ್ ಅವರು ವಿರಾಟ್ ಕೊಹ್ಲಿಯೊಂದಿಗೆ 4ನೇ ವಿಕೆಟ್‌ಗೆ 165 ರನ್‌ಗಳ ಜೊತೆಯಾಟ ನಿರ್ಮಿಸಿ ಭಾರತಕ್ಕೆ ಗೆಲುವು ಖಚಿತಪಡಿಸಿದರು.

Story first published: Monday, October 9, 2023, 16:06 [IST]
Other articles published on Oct 9, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+