For Quick Alerts
ALLOW NOTIFICATIONS  
For Daily Alerts
 

World Cup 2023: ಈ 5 ತಂಡಗಳಿಗೆ ಸೆಮಿಫೈನಲ್ ತಲುಪುವ ಸಾಮರ್ಥ್ಯವಿದೆ; ಸೌರವ್ ಗಂಗೂಲಿ

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಈಗಾಗಲೇ ಜೂನ್ 27ರಂದು ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 5ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ.

World Cup 2023: Sourav Ganguly Predicts These 5 Teams Have Ability To Reach World Cup Semifinals

ಇನ್ನು ಅಕ್ಟೋಬರ್ 8ರಂದು ಟೀಂ ಇಂಡಿಯಾ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಅನಂತರ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವೂ ನಡೆಯಲಿದೆ.

ಇದೀಗ ಮುಂಬರುವ 2023ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ತಮ್ಮ ನೆಚ್ಚಿನ ತಂಡಗಳನ್ನು ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೆಸರಿಸಿದ್ದಾರೆ.

ಆಸ್ಟ್ರೇಲಿಯಾ, ಇಂಗ್ಲೆಂಡ್ ಜೊತೆಗೆ ಭಾರತ ತಂಡ ಸೆಮಿಫೈನಲ್ ತಲುಪಲಿದೆ. ಇದೇ ವೇಳೆ ಈ ಸಮೀಕರಣದಿಂದ ನ್ಯೂಜಿಲೆಂಡ್ ತಂಡವನ್ನು ಎಂದಿಗೂ ಕೈಬಿಡಲಾಗುವುದಿಲ್ಲ ಮತ್ತು ಪಾಕಿಸ್ತಾನವು ಮುಂದಿನ ಸುತ್ತಿಗೆ ಪ್ರವೇಶಿಸುತ್ತದೆ ಎಂದು ಆಶಿಸುತ್ತೇನೆ ಎಂದು ಎಂದು ಸೌರವ್ ಗಂಗೂಲಿ ಹೇಳಿದರು.

World Cup 2023: Sourav Ganguly Predicts These 5 Teams Have Ability To Reach World Cup Semifinals

ಇದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮತ್ತೊಂದು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವುದನ್ನು ಕ್ರಿಕೆಟ್ ಅಭಿಮಾನಿಗಳು ಆನಂದಿಸಬಹುದು.

ಗಮನಾರ್ಹ ವಿಷಯವೆಂದರೆ, ಭಾರತ ತಂಡವು ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲು ಖಚಿತವಾದರೆ, ಆ ಪಂದ್ಯವು ಸೌರವ್ ಗಂಗೂಲಿ ಅವರ ತವರು ನಗರವಾದ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ಆದ್ದರಿಂದ, ಐಕಾನಿಕ್ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯದ ಸಂಭಾವ್ಯ ಅವಕಾಶದ ಬಗ್ಗೆ ಸೌರವ್ ಗಂಗೂಲಿ ಉತ್ಸುಕರಾಗಿದ್ದಾರೆ.

"ವಿಶ್ವಕಪ್ ಸೆಮಿಫೈನಲ್ ತಂಡಗಳ ಬಗ್ಗೆ ಹೇಳುವುದು ತುಂಬಾ ಕಷ್ಟ. ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ತಂಡಗಳು ಸೇರಿವೆ. ನಾನು ಐದು ತಂಡಗಳನ್ನು ಆಯ್ಕೆ ಮಾಡುತ್ತೇನೆ, ಈ ದೊಡ್ಡ ಪಂದ್ಯಾವಳಿಯಲ್ಲಿ ನೀವು ನ್ಯೂಜಿಲೆಂಡ್ ತಂಡವನ್ನು ಎಂದಿಗೂ ಕಡಿಮೆ ಅಂದಾಜು ಮಾಡಲು ಸಾಧ್ಯವಿಲ್ಲ ಮತ್ತು ಪಾಕಿಸ್ತಾನವನ್ನೂ ಸೇರಿಸುತ್ತೇನೆ".

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಾವು ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ ಪಂದ್ಯವನ್ನು ನೋಡಲು ಪಾಕಿಸ್ತಾನ ಸೆಮಿಸ್‌ಗೆ ಅರ್ಹತೆ ಪಡೆಯುತ್ತದೆ,'' ಎಂದು ಸೌರವ್ ಗಂಗೂಲಿ ನಗುತ್ತಾ ಮಾತನಾಡಿದರು.

ಐಸಿಸಿ ಟೂರ್ನಿಗಳಲ್ಲಿ ಭಾರತದ ವೈಫಲ್ಯದ ಬಗ್ಗೆ ಸೌರವ್ ಗಂಗೂಲಿ ಮಾತು
ಭಾರತ ತಂಡದ ಆಟಗಾರರ ಮೇಲೆ ಯಾವುದೇ ಮಾನಸಿಕ ಒತ್ತಡವಿಲ್ಲ ಎಂದು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ತಿಳಿಸಿದ್ದು, ಆಟಗಾರರು ಆ ವಿಷಯದಲ್ಲಿ ತುಂಬಾ ಪ್ರಬಲರಾಗಿದ್ದಾರೆ. ಆದರೆ ಹೆಚ್ಚಿನ ಒತ್ತಡದ ಸಂದರ್ಭಗಳಲ್ಲಿ ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ ಎಂದು ಹೇಳಿದರು.

ಭಾರತದಲ್ಲಿಯೇ ಐಸಿಸಿ ಪಂದ್ಯಾವಳಿ ನಡೆಯುತ್ತಿರುವುದರಿಂದ ಈ ಬಾರಿ ತವರಿನ ತಂಡವು ಸ್ವಲ್ಪ ಒತ್ತಡದಲ್ಲಿದೆ. ಆದರೆ ಆಟಗಾರರು ಅದನ್ನು ನಿಭಾಯಿಸುತ್ತಾರೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದರು.

"ಒತ್ತಡ ಯಾವಾಗಲೂ ಇರುತ್ತದೆ. ಈ ಹಿಂದೆ ಆಡಿದಾಗಲೂ ಒತ್ತಡವಿತ್ತು. ರೋಹಿತ್ ಶರ್ಮಾ ಕಳೆದ ಏಕದಿನ ವಿಶ್ವಕಪ್‌ನಲ್ಲಿ ಐದು ಶತಕಗಳನ್ನು ಬಾರಿಸಿದ್ದಾರೆ. ಆಗ ಅವರ ಮೇಲೂ ಒತ್ತಡ ಇದ್ದಿರಬೇಕೆಂದು ನನಗೆ ಖಚಿತವಿದೆ. ಒತ್ತಡ ಸಮಸ್ಯೆಯಲ್ಲ, ಯಶಸ್ವಿಯಾಗಲು ಒಂದು ಮಾರ್ಗವನ್ನು ಕಂಡುಕೊಳ್ಳುತ್ತಾರೆ ಎಂದು ನನಗೆ ಖಾತ್ರಿಯಿದೆ," ಎಂದರು.

"ರಾಹುಲ್ ದ್ರಾವಿಡ್ ತಮ್ಮ ಆಟದ ದಿನಗಳಲ್ಲಿ ಪ್ರದರ್ಶನ ನೀಡುವ ಒತ್ತಡವಿತ್ತು. ಈಗ ಅವರು ಮುಖ್ಯ ಕೋಚ್ ಆಗಿರುವುದರಿಂದ, ಅವರ ಮೇಲೆ ಈಗಲೂ ಉತ್ತಮ ಪ್ರದರ್ಶನ ನೀಡುವ ಒತ್ತಡವಿದೆ. ಅದು ಹೋಗುವುದಿಲ್ಲ ಹಾಗೂ ಒತ್ತಡವು ಒಂದು ಸಮಸ್ಯೆ ಎಂದು ನಾನು ಭಾವಿಸುವುದಿಲ್ಲ," ಎಂದು ಸೌರವ್ ಗಂಗೂಲಿ ತಿಳಿಸಿದರು.

"ಭಾರತ ನಿರ್ಣಾಯಕ ಹಂತಗಳಲ್ಲಿ ಕೆಲವೊಮ್ಮೆ ಉತ್ತಮ ಪ್ರದರ್ಶನ ನೀಡುವುದಿಲ್ಲ. ಇದು ಮಾನಸಿಕ ಒತ್ತಡ ಎಂದು ನಾನು ಭಾವಿಸುವುದಿಲ್ಲ. ಆಟಗಾರರು ಮಾನಸಿಕವಾಗಿ ಬಲಿಷ್ಠ ವ್ಯಕ್ತಿಗಳು. ಆಶಾದಾಯಕವಾಗಿ, ಅವರು ಶೀಘ್ರದಲ್ಲೇ ಈ ಎಲ್ಲೆಯನ್ನು ಮೀರಿ ಸಾಗುತ್ತಾರೆ," ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.

Story first published: Saturday, July 8, 2023, 13:05 [IST]
Other articles published on Jul 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+