For Quick Alerts
ALLOW NOTIFICATIONS  
For Daily Alerts
 

World Cup 2023: ತಮ್ಮ ಜನ್ಮದಿನದಂದೇ ವಿಶ್ವಕಪ್ ಪಂದ್ಯ ಆಡಲಿದ್ದಾರೆ ವಿರಾಟ್ ಕೊಹ್ಲಿ-ಬಾಬರ್ ಅಜಂ

2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ 100 ದಿನಗಳು ಬಾಕಿ ಇರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಮುಂಬೈನಲ್ಲಿ ಮಂಗಳವಾರ, ಜೂನ್ 27ರಂದು ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದ ಪ್ರಮುಖ 10 ಸ್ಥಳಗಳಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿದ್ದು, ಫೈನಲ್ ಸೇರಿದಂತೆ 48 ಪಂದ್ಯಗಳನ್ನು ಒಳಗೊಂಡಿರುತ್ತದೆ.

ICC ODI World Cup 2023

ಅಕ್ಟೋಬರ್ 5ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್-ಅಪ್ ನ್ಯೂಜಿಲೆಂಡ್ ತಂಡಗಳ ಸೆಣಸಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ಸಿಗಲಿದ್ದರೆ, ನವೆಂಬರ್ 19ರಂದು ಅದೇ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಇನ್ನು ಆತಿಥೇಯ ಭಾರತ ತಂಡವು ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಚೆನ್ನೈನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದ್ದರೆ, ಆ ಬಳಿಕ ಅಕ್ಟೋಬರ್ 15ರಂದು ಅತಿ ದೊಡ್ಡ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ನರೇಂದ್ರ ಮೋದಿ ಸ್ಟೇಡಿಯಂ ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಆಸನ ಸಾಮರ್ಥ್ಯವನ್ನು ಹೊಂದಿದೆ. 'ಮದರ್ ಆಫ್ ಆಲ್ ಬ್ಯಾಟಲ್ಸ್' ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗ ಅಲ್ಲಿನ ವಾತಾವರಣ ಭಾವನಾತ್ಮಕ ಮತ್ತು ಹೈ-ವೋಲ್ಟೇಜ್‌ನಿಂದ ಕೂಡಿರಲಿದೆ.

ICC ODI World Cup 2023

ಗಮನಾರ್ಹವಾಗಿ, ಪಾಕಿಸ್ತಾನ ತಂಡವು ಈ ಸ್ಟೇಡಿಯಂನಲ್ಲಿ ಎಂದಿಗೂ ಆಡಿಲ್ಲ ಮತ್ತು ಇದು ಅವರಿಗೆ ಹೊಸ ಅನುಭವವಾಗಲಿದೆ. ಭಾರತದ ಅಭಿಮಾನಿಗಳು ಕಿಕ್ಕಿರಿದು ತುಂಬಿರುವ ಮೈದಾನದಲ್ಲಿ ಪಾಕಿಸ್ತಾನ ತಂಡವು ಆಡುವ ಒತ್ತಡಕ್ಕೆ ಒಳಗಾಗುತ್ತದೆ. ಇದೇ ವೇಳೆ ಬಾಬರ್ ಅಜಂ ಪಡೆಯನ್ನು ಸೋಲಿಸಲು ಭಾರತ ತಂಡವು ಸ್ಫೂರ್ತಿಗೊಳ್ಳಬಹುದು.

ಅ.15ರಂದು ಬಾಬರ್ ಅಜಂಗೆ ಗೆಲುವಿನ ಉಡುಗೊರೆ ನೀಡಲಿದೆಯಾ ಪಾಕಿಸ್ತಾನ ತಂಡ?

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಈ ವರ್ಷದ ಅಕ್ಟೋಬರ್ 15ರಂದು 29ನೇ ವರ್ಷ ಪೂರೈಸಲಿದ್ದಾರೆ. ಅದೇ ದಿನ ಮೆನ್ ಇನ್ ಗ್ರೀನ್ 2023ರ ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ತಂಡವನ್ನು ಎದುರಿಸಲಿದೆ.

ಪಾಕಿಸ್ತಾನ ತಂಡವು ಭಾರತವನ್ನು ಸೋಲಿಸಿ, ತಮ್ಮ ನಾಯಕನ ಹುಟ್ಟುಹಬ್ಬಕ್ಕೆ ಗೆಲುವಿನ ಉಡುಗೊರೆ ನೀಡಲು ಎದುರು ನೋಡುತ್ತಿದ್ದಾರೆ. ಬಾಬರ್ ಅಜಂ ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ತಮ್ಮ ಜನ್ಮದಿನವನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಆಚರಿಸಿಕೊಂಡಿದ್ದರು.

ICC ODI World Cup 2023

ಈ ವರ್ಷ ಅವರು ಭಾರತದಲ್ಲಿ ಮೊದಲ ಬಾರಿಗೆ ತಮ್ಮ ಜನ್ಮದಿನವನ್ನು ಆಚರಿಸಕೊಳ್ಳಲಿದ್ದಾರೆ. ಅದೂ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಎಂಬುದು ಮತ್ತೊಂದು ವಿಶೇಷ.

ವಿರಾಟ್ ಕೊಹ್ಲಿ ಜನ್ಮದಿನದಂದೇ ವಿಶ್ವಕಪ್ ದೊಡ್ಡ ಪಂದ್ಯ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ನವೆಂಬರ್ 5ರಂದು ಜನ್ಮದಿನ ಅಚರಿಸಿಕೊಳ್ಳಲಿದ್ದಾರೆ. ಈ ವರ್ಷ ಭಾರತದ ಸ್ಟಾರ್ ಆಟಗಾರ 35 ವರ್ಷ ಪೂರೈಸಲಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ 35ನೇ ಹುಟ್ಟುಹಬ್ಬದ ವರ್ಷದಲ್ಲಿ ಭಾರತ ತಂಡಕ್ಕಾಗಿ ವಿಶ್ವಕಪ್ ಗೆಲ್ಲಲು ಆಶಿಸಿದ್ದಾರೆ. ಶ್ರೇಷ್ಠ ಕ್ರಿಕೆಟಿಗ ಈಗಾಗಲೇ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು.

ತಮ್ಮ ಜನ್ಮದಿನದಂದು ಶತಕ ಬಾರಿಸುವ ಮೂಲಕ ಆ ದಿನವನ್ನು ಸ್ಮರಣೀಯವಾಗಿಸುವ ಅಮೂಲ್ಯ ಅವಕಾಶ ವಿರಾಟ್ ಕೊಹ್ಲಿಗೆ ಇದೆ. ಏಕೆಂದರೆ, ಭಾರತ ತಂಡ ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಲೀಗ್ ಪಂದ್ಯವನ್ನು ಆಡಲಿದೆ. ಗೆಲುವಿನ ಮೂಲಕ ಜನ್ಮದಿನ ಆಚರಿಸಿಕೊಳ್ಳಲು ವಿರಾಟ್ ಕೊಹ್ಲಿ ಮತ್ತು ಟೀಂ ಇಂಡಿಯಾ ಎದುರು ನೋಡುತ್ತಿದೆ.

Story first published: Wednesday, June 28, 2023, 13:32 [IST]
Other articles published on Jun 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+