For Quick Alerts
ALLOW NOTIFICATIONS  
For Daily Alerts
 

World Cup 2023: ತನ್ನ ನೆಚ್ಚಿನ ಮೂವರು ಬ್ಯಾಟರ್‌ಗಳನ್ನು ಹೆಸರಿಸಿದ ಬಾಬರ್ ಅಜಂ; ಅದರಲ್ಲಿ ಇಬ್ಬರು ಭಾರತೀಯರು

2023ರ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯು ಕೆಲವು ರೋಚಕ ಮತ್ತು ಅನಿರೀಕ್ಷಿತ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಬಲಿಷ್ಠ ಪಾಕಿಸ್ತಾನ ತಂಡಗಳು ಅನಿರೀಕ್ಷಿತ ಸೋಲು ಅನುಭವಿಸಿವೆ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಬಹುತೇಕ ಪಂದ್ಯಾವಳಿಯಿಂದ ಹೊರಬೀಳುವ ಸ್ಥಿತಿಯಲ್ಲಿವೆ. ಆದಾಗ್ಯೂ, ಕೆಲವು ಅಸಾಧ್ಯ ಪವಾಡಗಳು ನಡೆದರೆ ಮಾತ್ರ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ಹಾಗೂ ಜೋಸ್ ಬಟ್ಲರ್ ತಂಡಗಳು ಸೆಮಿಫೈನಲ್ ತಲುಪುವ ನಿರೀಕ್ಷೆಯಿದೆ.

World Cup 2023: Virat Kohli, Rohit Sharma, Kane Williamson Are My favorite batsmen Says Babar Azam

ಆಡಿರುವ ಆರು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿರುವ ಪಾಕಿಸ್ತಾನ 4 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ತನ್ನ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳನ್ನು ಎದುರಿಸಬೇಕಿದೆ.

ಬಾಂಗ್ಲಾದೇಶ ವಿರುದ್ಧದ ಮುಂದಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರು ತಮ್ಮ ನೆಚ್ಚಿನ ಮೂವರು ಬ್ಯಾಟರ್‌ಗಳನ್ನು ಹೆಸರಿಸಿದ್ದಾರೆ.

ಬಾಬರ್ ಅಜಂ ಅವರು ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್‌ನ ಅನುಭವಿ ಕೇನ್ ವಿಲಿಯಮ್ಸನ್ ಅವರನ್ನು ನೆಚ್ಚಿನ ಬ್ಯಾಟರ್‌ಗಳೆಂದು ಬಹಿರಂಗಪಡಿಸಿದ್ದಾರೆ.

World Cup 2023: Virat Kohli, Rohit Sharma, Kane Williamson Are My favorite batsmen Says Babar Azam

ಸ್ಟಾರ್ ಸ್ಪೋರ್ಟ್ಸ್ ವಿಡಿಯೋದಲ್ಲಿ ಮಾತನಾಡಿರುವ ಬಾಬರ್ ಅಜಂ, ಈ ಮೂವರು ಆಟಗಾರರು ತಮ್ಮ ತಂಡಗಳನ್ನು ಸಂಕಷ್ಟದಿಂದ ಪಾರು ಮಾಡುವ ವಿಧಾನವನ್ನು ನಾನು ಇಷ್ಟಪಡುತ್ತೇನೆ ಎಂದು ಹೇಳಿದರು.

"ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ವಿಶ್ವದ ನನ್ನ ನೆಚ್ಚಿನ ಬ್ಯಾಟರ್‌ಗಳು. ಈ ಮೂವರು ವಿಶ್ವದ ಅಗ್ರ ಆಟಗಾರರು. ಅವರು ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ, ಅದಕ್ಕಾಗಿಯೇ ಅವರು ಅತ್ಯುತ್ತಮವಾಗಿದ್ದಾರೆ. ನಾನು ಅವರನ್ನು ಮೆಚ್ಚಿಕೊಳ್ಳುತ್ತೇನೆ," ಎಂದು ಬಾಬರ್ ಅಜಂ ತಿಳಿಸಿದರು.

"ವಿರಾಟ್, ರೋಹಿತ್ ಮತ್ತು ಕೇನ್ ವಿಲಿಯಮ್ಸನ್ ಅವರಲ್ಲಿ ನಾನು ಇಷ್ಟಪಡುವ ಅತ್ಯುತ್ತಮ ವಿಷಯವೆಂದರೆ, ಅವರು ತಂಡವನ್ನು ಕಠಿಣ ಪರಿಸ್ಥಿತಿಗಳಿಂದ ಹೇಗೆ ಹೊರತರುತ್ತಾರೆ ಮತ್ತು ಕಠಿಣ ಬೌಲಿಂಗ್ ವಿರುದ್ಧ ರನ್ ಗಳಿಸುತ್ತಾರೆ. ಇದನ್ನೇ ನಾನು ಅವರಿಂದ ಕಲಿಯಲು ಪ್ರಯತ್ನಿಸುತ್ತೇನೆ," ಎಂದು ಪಾಕಿಸ್ತಾನ ತಂಡದ ನಾಯಕ ವಿವರಿಸಿದರು.

World Cup 2023: Virat Kohli, Rohit Sharma, Kane Williamson Are My favorite batsmen Says Babar Azam

ಪಾಕಿಸ್ತಾನ ತಂಡ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಟೂರ್ನಿಯಲ್ಲಿ ಸದ್ಯ ಸಂಕಷ್ಟದಲ್ಲಿದೆ. ಪಾಕಿಸ್ತಾನ ಸತತವಾಗಿ ನಾಲ್ಕು ಸೋಲು ಕಂಡಿದ್ದು, ಬಾಂಗ್ಲಾದೇಶದ ವಿರುದ್ಧ ಪುಟಿದೇಳಲು ಎದುರು ನೋಡುತ್ತಿದೆ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ನಾಯಕತ್ವ ಮತ್ತು ತಂಡದ ಆಯ್ಕೆಗಳಿಗಾಗಿ ಮತ್ತು ಭಾರತದಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ವಿಧಾನಕ್ಕಾಗಿ ಟೀಕಿಸಲಾಗಿದೆ.

ತಮ್ಮ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ದಕ್ಷಿಣ ಆಫ್ರಿಕಾದ ವಿರುದ್ಧ ಅಂತಿಮ ವಿಕೆಟ್ ಥ್ರಿಲ್ಲರ್ ಪಂದ್ಯವನ್ನು ಕಳೆದುಕೊಂಡಿತು. ಇದು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡವು 10-15 ರನ್‌ಗಳನ್ನು ಹೆಚ್ಚು ಗಳಿಸಬೇಕಿತ್ತು ಎಂದು ಹಲವರು ನಂಬಿದ್ದರು.

ಪಾಕಿಸ್ತಾನ ತಂಡವು ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಲು ಬಯಸಿದರೆ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಮುಂಬರುವ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

Story first published: Sunday, October 29, 2023, 15:36 [IST]
Other articles published on Oct 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+