ಭಾರತದಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 5ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆತಿಥೇಯ ತಂಡ ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸುತ್ತದೆ.
ಭಾರತ ತಂಡದಲ್ಲಿ ಹಲವು ಆಟಗಾರರು ತಮ್ಮ ಎರಡು ಮತ್ತು ಮೂರನೇ ವಿಶ್ವಕಪ್ ಆಡಲಿದ್ದರೆ, ವಿರಾಟ್ ಕೊಹ್ಲಿ ಮಾತ್ರ ನಾಲ್ಕನೇ ಏಕದಿನ ವಿಶ್ವಕಪ್ ಆಡಲಿದ್ದಾರೆ.

ಈ ಮೂಲಕ ತಲಾ ನಾಲ್ಕು ಏಕದಿನ ವಿಶ್ವಕಪ್‌ಗಳನ್ನು ಆಡಿರುವ ಮಾಜಿ ದಿಗ್ಗಜ ಕ್ರಿಕೆಟಿಗರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಅನಿಲ್ ಕುಂಬ್ಳೆ, ಎಂಎಸ್ ಧೋನಿ ಅವರಂತಹ ಪಟ್ಟಿಗೆ ಸೇರಲಿದ್ದಾರೆ.
ಮತ್ತೊಂದೆಡೆ, ಭಾರತದ ಲೆಜೆಂಡ್ ಬ್ಯಾಟರ್ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ ಆರು ಏಕದಿನ ವಿಶ್ವಕಪ್‌ಗಳನ್ನು ಆಡುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರು ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಅವರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ರಾಷ್ಟ್ರವನ್ನು ಅತಿ ಹೆಚ್ಚು ಬಾರಿ ಪ್ರತಿನಿಧಿಸಿದ ಜಂಟಿ ವಿಶ್ವದಾಖಲೆಯನ್ನು ಹೊಂದಿದ್ದಾರೆ.
ಅಲ್ಲದೆ ಕ್ರಿಕೆಟ್ ದಂತಕಥೆಗಳಾದ ರಿಕಿ ಪಾಂಟಿಂಗ್, ಮಹೇಲಾ ಜಯವರ್ಧನೆ, ಜಾಕ್ವೆಸ್ ಕಾಲಿಸ್ ಮತ್ತು ಇನ್ನೂ ಕೆಲವರು ತಲಾ ಐದು ಏಕದಿನ ವಿಶ್ವಕಪ್‌ಗಳಲ್ಲಿ ಆಡಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿ ತಮ್ಮ 22ನೇ ವಯಸ್ಸಿನಲ್ಲಿ 2011ರಲ್ಲಿ ತಮ್ಮ ಮೊದಲ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಆಡಿದರು. ಅವರು ತಮ್ಮ ವಿಶ್ವಕಪ್ ಚೊಚ್ಚಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 83 ಎಸೆತಗಳಲ್ಲಿ ಅಜೇಯ 100 ರನ್ ಗಳಿಸುವ ಮೂಲಕ ಅದ್ಭುತ ಶತಕವನ್ನು ಗಳಿಸಿದರು.
ದೆಹಲಿ ಮೂಲದ ಕ್ರಿಕೆಟಿಗ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಮೋಘ 59 ರನ್ ಗಳಿಸಿದರೆ, ನಂತರ ಪ್ರಮುಖ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನಿರ್ಣಾಯಕ 49 ಎಸೆತಗಳಲ್ಲಿ 35 ರನ್ ಬಾರಿಸಿದರು.
ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತನ್ನ ಇನ್ನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳ ಸಹಾಯದಿಂದ 126 ಎಸೆತಗಳಲ್ಲಿ 107 ರನ್ ಗಳಿಸುವ ಮೂಲಕ ಪಾಕಿಸ್ತಾನ ವಿರುದ್ಧ ಅತ್ಯದ್ಭುತ ಶತಕದೊಂದಿಗೆ 2015ರ ವಿಶ್ವಕಪ್ ಆವೃತ್ತಿಯನ್ನು ಪ್ರಾರಂಭಿಸಿದರು.
ಆದರೆ, ವಿರಾಟ್ ಕೊಹ್ಲಿ ಆ ಪಂದ್ಯಾವಳಿಯಲ್ಲಿ ಆಡಿದ ಮುಂದಿನ ಏಳು ಇನ್ನಿಂಗ್ಸ್‌ಗಳಲ್ಲಿ 50 ರನ್‌ಗಳ ಗಡಿ ದಾಟಲು ವಿಫಲರಾದರು. ಅವರು 2015ರ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿದರು.
ನಂತರ 2019ರ ಆವೃತ್ತಿಯ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. ವಿರಾಟ್ ಕೊಹ್ಲಿ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 55.37ರ ಸರಾಸರಿ ಮತ್ತು 94.05ರ ಸ್ಟ್ರೈಕ್ ರೇಟ್‌ನೊಂದಿಗೆ ಐದು ಅರ್ಧಶತಕಗಳೊಂದಿಗೆ 443 ರನ್ ಗಳಿಸಿದರು.
34 ವರ್ಷದ ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಪರವಾಗಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ತಮ್ಮ ಹೆಸರಿಗೆ 26 ಇನ್ನಿಂಗ್ಸ್‌ಗಳಿಂದ 46.81ರ ಸರಾಸರಿಯಲ್ಲಿ 1030 ರನ್ ಮತ್ತು 86.70ರ ಸ್ಟ್ರೈಕ್ ರೇಟ್‌ನಲ್ಲಿ ಎರಡು ಶತಕ ಮತ್ತು ಆರು ಅರ್ಧಶತಕಗಳಿ ಒಳಗೊಂಡಿವೆ.
ಹಿಂದಿನ ಎರಡು ವಿಶ್ವಕಪ್ ಪ್ರಯತ್ನಗಳಲ್ಲಿ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾದ ವಿರಾಟ್ ಕೊಹ್ಲಿ, ಬ್ಯಾಟ್‌ನೊಂದಿಗೆ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ತವರು ನೆಲದಲ್ಲಿ ವಿಶ್ವಕಪ್‌ನೊಂದಿಗೆ ತಮ್ಮ ತಂಡಕ್ಕೆ ನೆರವಾಗಲು ಉತ್ಸುಕರಾಗಿದ್ದಾರೆ.