IND vs PAK: 'ಕಾಲೇಜ್ ಬಾಯ್ಸ್ vs ಸ್ಕೂಲ್ ಕಿಡ್ಸ್' ಪಂದ್ಯಕ್ಕೆ ಹೋಲಿಸಿದ ವೀರೇಂದ್ರ ಸೆಹ್ವಾಗ್
ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಭಾರತ 7 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿತು. ಈ ಮೂಲಕ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ 8-0 ಅಂತರದಿಂದ ಭಾರತದ ಪ್ರಾಬಲ್ಯ ಮುಂದುವರೆಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಭಾರತೀಯ ಬೌಲಿಂಗ್ ದಾಳಿಯ ವಿರುದ್ಧ 50 ಓವರ್‌ಗಳನ್ನು ಸಂಪೂರ್ಣವಾಗಿ ಆಡಲು ಸಾಧ್ಯವಾಗಲಿಲ್ಲ. 42.5 ಓವರ್‌ಗಳಲ್ಲಿ ಕೇವಲ 191 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. ಸುಲಭ ಗುರಿ ಬೆನ್ನತ್ತಿದ ಭಾರತ ಆಕ್ರಮಣಕಾರಿ ಆಟ ಆರಂಭಿಸಿ ಕೇವಲ 30.3 ಓವರ್‌ಗಳಲ್ಲಿ ಗುರಿ ತಲುಪಿತು.

ಪಂದ್ಯದ ನಂತರ ಭಾರತದ ಲೆಜೆಂಡ್ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರು ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧದ ಗೆಲುವಿಗೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವನ್ನು ಶ್ಲಾಘಿಸಿದ್ದಾರೆ.
ಭಾರತದ ಈ ಗೆಲುವನ್ನು 'ಒಟ್ಟಾರೆ ವಿಧ್ವಂಸಕ' ಎಂದು ವೀರೇಂದ್ರ ಸೆಹ್ವಾಗ್ ಬಣ್ಣಿಸಿದರು ಮತ್ತು ಇದು "ದೊಡ್ಡ ಹುಡುಗರು ಶಾಲಾ ಮಕ್ಕಳ ವಿರುದ್ಧ ಆಡಿದಂತೆ ಭಾಸವಾಯಿತು,'' ಎಂದು ಹೇಳಿದರು.
ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಕ್ರೀಸ್‌ನಲ್ಲಿದ್ದಾಗ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿತು. ಆದರೆ ಆ ಎರಡು ವಿಕೆಟ್‌ಗಳ ನಂತರ, ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವಿಫಲಗೊಂಡು ಅಂತಿಮವಾಗಿ 191 ರನ್‌ಗಳಿಗೆ ಆಲೌಟ್ ಆಯಿತು.

192 ರನ್‌ಗಳ ಸುಲಭ ಗುರಿಯನ್ನು ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ತಲಾ ಅರ್ಧಶತಕದ ನೆರವಿನಿಂದ ಭಾರತ ತಂಡ ಗೆಲುವು ಸಾಧಿಸಿತು.
ಪಂದ್ಯದ ಬಳಿಕ ವೀರೇಂದ್ರ ಸೆಹ್ವಾಗ್ ಎಕ್ಸ್ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿರುವ ಅವರ ವಿಶ್ಲೇಷಣೆ ಅವರ ಅನುಯಾಯಿಗಳು ವೈರಲ್ ಮಾಡಿದ್ದಾರೆ.
"ದೊಡ್ಡ ಹುಡುಗರು ಶಾಲಾ ಮಕ್ಕಳ ವಿರುದ್ಧ ಆಡುತ್ತಿರುವಂತೆ ತೋರುತ್ತಿದೆ. ಪಾಕಿಸ್ತಾನದ ಸಂಪೂರ್ಣ ಧ್ವಂಸವಾಗಿದೆ," ಎಂದು ವೀರೇಂದ್ರ ಸೆಹ್ವಾಗ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
2023ರ ಏಕದಿನ ವಿಶ್ವಕಪ್‌ನ ಹೈ-ವೋಲ್ಟೇಜ್ ಮುಖಾಮುಖಿಯು ಪ್ರೇಕ್ಷಕರ ಉನ್ಮಾದ ಮತ್ತು ಉತ್ಸಾಹದಲ್ಲಿ ಕೊನೆಗೊಂಡಿತು. ಈ ಪಂದ್ಯದಲ್ಲಿ ಭಾರತವು ಯುದ್ಧದ ಎಲ್ಲಾ ಬಾಕ್ಸ್‌ಗಳನ್ನು ಟಿಕ್ ಮಾಡಿತು. ಅಂತಿಮವಾಗಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿತು.
ಉಪಖಂಡದಲ್ಲಿ ಕ್ರಿಕೆಟ್‌ನ ವಿಧ್ವಂಸಕ ಎಂದು ಪರಿಗಣಿಸಲ್ಪಟ್ಟಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧ ನಿರ್ದಯವಾಗಿ ಆಡಿದರು. 63 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್‌ಗಳ ಮೂಲಕ 86 ರನ್ ಗಳಿಸಿ ತಮ್ಮ ತಂಡವನ್ನು 19.3 ಓವರ್‌ಗಳಲ್ಲಿ 192 ರನ್‌ಗಳ ಸಾಧಾರಣ ಗುರಿಯನ್ನು ತಲುಪಿಸಲು ನೆರವಾದರು
ಇದು ಏಕದಿನ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ 1992ರಿಂದ ಪ್ರಾರಂಭವಾದ ಪಾಕಿಸ್ತಾನ ತಂಡದ ಸೋಲಿನ ಸರಣಿ ಈಗಲೂ ಮುಂದುವರೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications