For Quick Alerts
ALLOW NOTIFICATIONS  
For Daily Alerts
 

World Cup 2023: ಸತತ 4 ಸೋಲುಗಳಿಂದ ಕಂಗೆಟ್ಟ ಪಾಕಿಸ್ತಾನಕ್ಕೆ ಈ ಪವಾಡ ನಡೆದರಷ್ಟೇ ಸೆಮಿಸ್ ಆಸೆ ಜೀವಂತ!

2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಕೆಲವು ರೋಚಕ ಮತ್ತು ಅನಿರೀಕ್ಷಿತ ಫಲಿತಾಂಶಗಳಿಗೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾಗಿದ್ದಾರೆ. ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದರೆ, ನೆದರ್ಲ್ಯಾಂಡ್ಸ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರೆ, ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ಪಾಕಿಸ್ತಾನ ಕೂಡ ಕಳಪೆ ಪ್ರದರ್ಶನ ನೀಡುತ್ತಿದೆ ಮತ್ತು ಸತತ ನಾಲ್ಕು ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದೆ.

World Cup 2023: What is Pakistan Teams Semi-final Scenario After 4 Consecutive Defeats?

ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಬಹುತೇಕ ಪಂದ್ಯಾವಳಿಯಿಂದ ಹೊರಬೀಳುವ ಸ್ಥಿತಿಯಲ್ಲಿದ್ದು, ಆದಾಗ್ಯೂ, ಕೆಲವು ಅಸಾಧ್ಯ ಪವಾಡಗಳು ನಡೆದರೆ ಮಾತ್ರ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಸೆಮಿಫೈನಲ್ ಆಡುವ ನಿರೀಕ್ಷೆಯಿದೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು.

ಪ್ರಸ್ತುತ ದಕ್ಷಿಣ ಆಫ್ರಿಕಾ, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಗ್ರ 4 ಸ್ಥಾನಗಳಲ್ಲಿ ವಿರಾಜಮಾನವಾಗಿವೆ.

ಇನ್ನು 2 ಗೆಲುವುಗಳೊಂದಿಗೆ ಶ್ರೀಲಂಕಾ ತಂಡ 5ನೇ ಸ್ಥಾನದಲ್ಲಿದ್ದರೆ, ಆಡಿರುವ ಆರು ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿರುವ ಪಾಕಿಸ್ತಾನ 4 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನ ತನ್ನ ಮುಂದಿನ ಪಂದ್ಯಗಳಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳನ್ನು ಎದುರಿಸಬೇಕಿದೆ.

World Cup 2023: What is Pakistan Teams Semi-final Scenario After 4 Consecutive Defeats?

ಸದ್ಯದ ಪ್ರಾಯೋಗಿಕ ಲೆಕ್ಕಾಚಾರ ನೋಡಿದರೆ, ಪಾಕಿಸ್ತಾನ ತಂಡದ ಸೆಮಿಫೈನಲ್ ಅವಕಾಶ ಬಹುತೇಕ ಶೂನ್ಯ ಎನ್ನಲಾಗಿದೆ. ಆದರೆ ಅಸಾಧ್ಯವಾದ ಫಲಿತಾಂಶಗಳು ಘಟಿಸಿದರೆ ಅಥವಾ ಪವಾಡಗಳು ನಡೆದರೆ, ಪಾಕಿಸ್ತಾನ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಸಾಧ್ಯತೆಗಳಿವೆ. ಅದು ಆಗಬೇಕು ಎಂದರೆ, ಪಾಕಿಸ್ತಾನ ನಿರೀಕ್ಷಿಸಿದಂತೆ ಆಗಬೇಕು.

ಇನ್ನುಳಿದ ಮೂರು ಪಂದ್ಯಗಳಲ್ಲಿ ಅಂದರೆ ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡ ಅತ್ಯಗತ್ಯವಾಗಿ ಗೆಲ್ಲಲೇಬೇಕಾಗಿದೆ. ಆಗ ಹತ್ತು ಅಂಕಗಳನ್ನು ಕಲೆಹಾಕಲಿದೆ. ಈ ಮೂರು ಪಂದ್ಯಗಳ ಗೆಲುವಿನೊಂದಿಗೆ ನೆಟ್ ರನ್‌ರೇಟ್ ಕೂಡ ಗಣನೀಯವಾಗಿ ಸುಧಾರಿಸಬೇಕು.

ಸದ್ಯ 8 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ತಮ್ಮ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಸೋಲಬೇಕಿದೆ. ಅಲ್ಲದೆ, 4 ಅಂಕಗಳನ್ನು ಹೊಂದಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು 8 ಅಂಕಗಳನ್ನು ದಾಟಬಾರದು.

ಈ ಸಮೀಕರಣಗಳು ನಡೆದರೆ ಮಾತ್ರ ಪಾಕಿಸ್ತಾನ ತಂಡದ ಸೆಮಿಫೈನಲ್ ಅವಕಾಶಗಳು ಜೀವಂತವಾಗಿರುತ್ತವೆ. ಇದರರ್ಥ ಪಾಕಿಸ್ತಾನ ಉಳಿದ ಮೂರು ಪಂದ್ಯಗಳನ್ನು ಗೆಲ್ಲುವುದು ಮಾತ್ರವಲ್ಲದೆ, ಉಳಿದ ತಂಡಗಳ ಫಲಿತಾಂಶಗಳು ಗಣನೆಗೆ ಬರಲಿವೆ. ಇದೇ ವೇಳೆ ಭಾರತ ಅಗ್ರ 2ನೇ ಸ್ಥಾನದಿಂದ ಕೆಳಗಿಳಿಯಬಾರದು.

ಭಾನುವಾರ, ಅಕ್ಟೋಬರ್ 29ರಂದು ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್‌ನ 29ನೇ ಪಂದ್ಯದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಆತಿಥೇಯ ಭಾರತ ತಂಡ ಮುಖಾಮುಖಿಯಾಗುತ್ತಿದೆ.

Story first published: Sunday, October 29, 2023, 12:45 [IST]
Other articles published on Oct 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+