Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್: ಸಂಗಕ್ಕಾರ 400 ಪಂದ್ಯಗಳ ಸರದಾರ

ಮೆಲ್ಬೋರ್ನ್, ಫೆ. 26 : ಶ್ರೀಲಂಕಾದ ಕುಮಾರ್ ಸಂಗಾಕ್ಕಾರ ಏಕದಿನ ಕ್ರಿಕೆಟ್ ನಲ್ಲಿ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ತಮ್ಮ ಏಕದಿನ ಕ್ರಿಕೆಟ್ ಜೀವನದ 400ನೇ ಪಂದ್ಯದಲ್ಲಿ 22ನೇ ಏಕದಿನ ಶತಕ ದಾಖಲಿಸಿದ್ದಾರೆ.

ಏಕದಿನ ಕ್ರಿಕೆಟ್ ನಲ್ಲಿ 400 ಪಂದ್ಯವಾಡಿದ 4 ನೇ ಬ್ಯಾಟ್ಸಮನ್ ಎಂಬ ಶ್ರೇಯಕ್ಕೆ ಸಂಗಕ್ಕಾರ ಪಾತ್ರರಾದರು. ಬಾಂಗ್ಲಾದೇಶದ ವಿರುದ್ಧ ಆಡಿದ ವಿಶ್ವಕಪ್ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ 37 ವರ್ಷದ ಆಟಗಾರ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು.[ದಿಲ್ಶನ್, ಸಂಗಕ್ಕಾರ ಭರ್ಜರಿ ಶತಕ, ಶ್ರೀಲಂಕಾಕ್ಕೆ ಭರ್ಜರಿ ಗೆಲುವು]

cricket

2000ನೇ ಇಸವಿ ಜುಲೈ 5 ರಂದು ಪಾಕಿಸ್ತಾನದ ವಿರುದ್ಧ ಪ್ರಥಮ ಏಕದಿನ ಪಂದ್ಯವಾಡಿದ ಸಂಗಕ್ಕಾರ ಏಕದಿನ ಕ್ರಿಕೆಟ್ ನಲ್ಲಿ 13,739 ರನ್ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸಹ ದಾಖಲೆಗಳನ್ನು ಬರೆದಿರುವ ಶ್ರೀಲಂಕಾದ ಮಾಜಿ ನಾಯಕ 12,203 ರನ್ ದಾಖಲಿಸಿದ್ದಾರೆ.

ಶ್ರೀಲಂಕಾದ ಮೂರನೇ ಆಟಗಾರ
ಏಕದಿನ ಕ್ರಿಕೆಟ್ ನಲ್ಲಿ 400 ಪಂದ್ಯ ಆಡಿದವರ ಪಟ್ಟಿಗೆ ಸಂಗಕ್ಕಾರ ಗುರುವಾರ ಸೇರ್ಪಡೆಯಾದರು. ಶ್ರೀಲಂಕಾದ ಪರವಾಗಿ ಮೂರನೇ ಆಟಗಾರ ಎಂಬ ಶ್ರೇಯ ಪಡೆದುಕೊಂಡರು. ಸದ್ಯ ಪಟ್ಟಿಯಲ್ಲಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಏಕದಿನ ಪಂದ್ಯ ಆಡಿದವರ ಪಟ್ಟಿ
ಸಚಿನ್ ತೆಂಡೂಲ್ಕರ್ - 463 ಪಂದ್ಯ
ಸನತ್ ಜಯಸೂರ್ಯ - 445
ಮಹೇಲಾ ಜಯವರ್ಧನೆ - 444
ಕುಮಾರ್ ಸಂಗಕ್ಕಾರ - 400 (ಒನ್ ಇಂಡಿಯಾ ನ್ಯೂಸ್)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+