ಹರಿಣಗಳ ನಾಗಾಲೋಟಕ್ಕೆ ಕಡಿವಾಣ ಹಾಕಿದ ಪಾಕಿಸ್ತಾನ
ಆಕ್ಲಂಡ್, ಮಾ. 7: ವಿಶ್ವಕಪ್ ಪಂದ್ಯಾವಳಿಯ ಬಹುಮುಖ್ಯ ಪಂದ್ಯದಲ್ಲಿ ಪಾಕಿಸ್ತಾನ ದಕ್ಷಿಣ ಆಫ್ರಿಕಾವನ್ನು 29 ರನ್‌ಗಳ ಅಂತರದಲ್ಲಿ ಬಗ್ಗು ಬಡಿದಿದೆ. ಡಕ್ ವರ್ತ್ ಲೂಯಿಸ್ ನಿಯಮಾವಳಿ ಯಂತೆ ನಡೆದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಗೆಲುವು ದಕ್ಕಿದ್ದು ಬಿ ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆರಿಸಿಕೊಂಡಿತ್ತು. ಪಾಕಿಸ್ತಾನ 46.4 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 222 ರನ್ ಕಲೆ ಹಾಕಿತ್ತು. ಡಕ್ ವರ್ತ್ ಲೂಯಿಸ್ ನಿಯಮಾವಳಿ ಪ್ರಕಾರ ದಕ್ಷಿಣ ಆಫ್ರಿಕಾಕ್ಕೆ 47 ಓವರ್ ಗಳಲ್ಲಿ 232 ರನ್ ಗುರಿ ನೀಡಲಾಗಿತ್ತು. ಈ ಸವಾಲು ಬೆನ್ನು ಹತ್ತಿದ ಆಫ್ರಿಕಾ 33.3 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 202 ಗಳಿಸಿತು.[ನ್ಯಾಯಾಲಯದ ಮೆಟ್ಟಿಲೇರಿದ ಪಾಕ್ ಕಳಪೆ ಪ್ರದರ್ಶನ]

ಪಾಕಿಸ್ತಾನದ ಪರ ನಾಯಕ ಮಿಸ್ಬಾ ಉಲ್ ಹಕ್ ಉಪಯುಕ್ತ ಅರ್ಧಶತಕ ಗಳಿಸಿ 200 ರನ್ ಗಡಿ ದಾಟಲು ಕಾರಣರಾದರು. ದಕ್ಷಿಣ ಆಫ್ರಿಕಾವನ್ನು ಕಟ್ಟಿ ಹಾಕಿದ ಪಾಕಿಸ್ತಾನದ ವೇಗಿಗಳು ತಂಡಕ್ಕೆ ಜಯ ತಂದುಕೊಟ್ಟರು.[ಡಿಆರ್ ಎಸ್ ವಿವಾದಕ್ಕೆ ಸಾಕ್ಷಿಯಾದ ಇಂಡೋ-ಪಾಕ್ ಕದನ]
ಡೆವಿಲಿಯರ್ಸ್ ಏಕಾಂಗಿ ಹೋರಾಟ
ದಕ್ಷಿಣಾ ಆಫ್ರಿಕಾದ ಆರಂಭಿಕ ಆಟಗಾರರು ಬೇಗನೇ ಪೆವಿಲಿಯನ್ ಸೇರಿಕೊಂಡರು. ನಾಯಕ ಎಬಿ ಡೆವಿಲಿಯರ್ಸ್ 56 ಎಸೆತಗಳಲ್ಲಿ 77 ರನ್ ಗಳಿಸಿದ್ದು ಗೆಲುವಿಗೆ ಸಾಕಾಗಲಿಲ್ಲ. ಉಳಿದ ಯಾವ ಆಟಗಾರರು ನಾಯಕನಿಗೆ ಸಾಥ್ ನೀಡಲಿಲ್ಲ. ಪಾಕಿಸ್ತಾನದ ಪರ ಮೊಹಮದ್ ಇರ್ಫಾನ್, ರಹತ್ ಅಲಿ ಮತ್ತು ಬಹಾಬ್ ರಿಯಾಜ್ ತಲಾ 3 ವಿಕೆಟ್ ಪಡೆದರು.
Story first published: Wednesday, January 3, 2018, 10:02 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications