Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ : ಟಾಪ್ 10 ಟೀಂ ಮೊತ್ತ, ಭಾರತವೇ ಸೂಪರ್

ಬೆಂಗಳೂರು, ಫೆ.12: ವಿಶ್ವಕಪ್ ಟೂರ್ನಿ ಎಂದಿದ್ದರೂ ಬ್ಯಾಟ್ಸ್ ಮನ್ ಗಳ ಫೇವರೀಟ್ ಎಂಬ ಮಾತಿದೆ. ಈ ಮಾತನ್ನು ಕ್ರಿಕೆಟ್ ದಿಗ್ಗಜ ಸಚಿ ತೆಂಡೂಲ್ಕರ್ ಕೂಡಾ ಒಪ್ಪುತ್ತಾರೆ. ಅದರಲ್ಲೂ 11ನೇ ವಿಶ್ವಕಪ್ ಟೂರ್ನಿಯಲ್ಲಿ ನಿಯಾಮಾವಳಿಗಳು ಬದಲಾವಣೆಯಾಗಿರುವುದರಿಂದ ಈ ಸಲ ಬೌಲರ್ ಗಳನ್ನು ದೇವರೇ ಕಾಪಾಡಬೇಕು ಎಂದು ಸಚಿನ್ ಹೇಳಿದ್ದನ್ನು ನೀವು ಓದಿರುತ್ತೀರಿ.

ಇಲ್ಲಿ ತನಕ 40 ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಸ್ಕೋರ್ ಮಾಡಿದ ತಂಡಗಳ ಪಟ್ಟಿಯಲ್ಲಿ ಭಾರತವೇ ಪ್ರಮುಖವಾಗಿ ಕಾಣಿಸಿಕೊಂಡಿದೆ. ಅಲ್ಲದೆ, ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ದಾಖಲಿಸಿರುವ 413ರನ್ ಇನ್ನೂ ಬೇರೆ ಯಾವ ದೇಶವೂ ದಾಟಿಲ್ಲ. ಟಾಪ್ 10 ತಂಡದ ಸ್ಕೋರ್ ಪಟ್ಟಿಯಲ್ಲಿ ಭಾರತ,ಆಸ್ಟ್ರೇಲಿಯಾ ಮೂರು ಬಾರಿ, ನ್ಯೂಜಿಲೆಂಡ್ ಎರಡು ಬಾರಿ ಕಾಣಿಸಿಕೊಂಡಿದೆ. [ಬೌಲರ್ ಗಳಿಗೆ ದೇವರ ಸಹಾಯ ಬೇಕೆಂದ ಕ್ರಿಕೆಟ್ ದೇವರು]

World Cup cricket records: Top 10 team scores

ಟಾಪ್ 10 ತಂಡದ ಸ್ಕೋರ್ ಗಳು:

* ಭಾರತ : 413/5, 50 ಓವರ್ಸ್, ಬರ್ಮುಡಾ ವಿರುದ್ಧ, ಪೋರ್ಟ್ ಆಫ್ ಸ್ಪೇನ್, 2007

* ಶ್ರೀಲಂಕಾ : 398/5, 50 ಓವರ್ಸ್, ಕೀನ್ಯಾ ವಿರುದ್ಧ, ಕ್ಯಾಂಡಿ, 1996

* ಆಸ್ಟ್ರೇಲಿಯಾ: 398/5, 50 ಓವರ್ಸ್, ದಕ್ಷಿಣ ಆಫ್ರಿಕಾ ವಿರುದ್ಧ, ಬಸ್ಸೆಟರ್, 2007

* ಭಾರತ: 373/6, 50 ಓವರ್ಸ್, ಶ್ರೀಲಂಕಾ ವಿರುದ್ಧ, ಟಾಂಟನ್, 1999.

* ಭಾರತ: 370/4, 50 ಓವರ್ಸ್, ಬಾಂಗ್ಲಾದೇಶ ವಿರುದ್ಧ, ಢಾಕಾ, 2011.

* ನ್ಯೂಜಿಲೆಂಡ್: 363/5, 50 ಓವರ್ಸ್, ಕೆನಡಾ ವಿರುದ್ಧ, ಗ್ರೋಸ್ ಇಸ್ಲೆ, 2007

* ವೆಸ್ಟ್ ಇಂಡೀಸ್: 360/4, 50 ಓವರ್ಸ್ ವಿರುದ್ಧ, ಕರಾಚಿ, 1987.

* ಆಸ್ಟ್ರೇಲಿಯಾ: 359/2, 50 ಓವರ್ಸ್, ಭಾರತ ವಿರುದ್ಧ, ಜೋಹಾನ್ಸ್ ಬರ್ಗ್, 2003.

* ಆಸ್ಟೇಲಿಯಾ : 358/5, 50 ಓವರ್ಸ್, ನೆದರ್ಲೆಂಡ್ ವಿರುದ್ಧ, ಬಸ್ಸೆಟರ್, 2007

* ನ್ಯೂಜಿಲೆಂಡ್: 358/6, 50 ಓವರ್ಸ್, ಕೆನಡಾ ವಿರುದ್ಧ, ಮುಂಬೈ, 2011

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+